ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರಗೆ ಸನ್ಮಾನ

| Published : Aug 24 2025, 02:00 AM IST

ಸಾರಾಂಶ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2024 ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಅವರಿಗೆ ಕನ್ನಡಪ್ರಭದಲ್ಲಿ ಪ್ರಕಟವಾದ ವಿಶೇಷ ಲೇಖನದ ಫೋಟೋ ಪ್ರೇಮ್‌ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2024 ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಅವರಿಗೆ ಕನ್ನಡಪ್ರಭದಲ್ಲಿ ಪ್ರಕಟವಾದ ವಿಶೇಷ ಲೇಖನದ ಫೋಟೋ ಪ್ರೇಮ್‌ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುರಸ್ಕೃತರ ಧರ್ಮಪತ್ನಿ ಭುವನೇಶ್ವರಿ ಜಾಧವ, ಅತ್ತೆಯಾದ ಗಂಗಾವತಿಯ ರಾಮಕ್ಕ ಬಿ.ಆರ್, ದೇವರಹಿಪ್ಪರಗಿ ತಾಲೂಕಿನ ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ತುಳಸಿಗೇರಿ ಫೌಂಡೇಶನ್‌ ಸಂಸ್ಥಾಪಕ, ಖ್ಯಾತ ಮದುಮೇಹ ತಜ್ಞರಾದ ಡಾ.ಬಾಬುರಾಜೇಂದ್ರ ನಾಯಿಕ, ಲಯನ್ಸ್‌ ಪರಿವಾರದ ಸಂಸ್ಥಾಪಕ ಸದಸ್ಯರಾದ ವಾಲು ಚವ್ಹಾಣ, ಪ್ರಥಮ ದರ್ಜೆಯ ಗುತ್ತಿಗೆದಾರರಾದ ಮೋಹನ ಚವ್ಹಾಣ, ಸೋಮಶೇಖರ ರಾಠೋಡ ಉಸ್ಥಿತರಿದ್ದರು.