ಡಾ.ಬಿ.ಆರ್. ಅಂಬೇಡ್ಕರ್ ಗೆ ಇಡೀ ಪ್ರಪಂಚವೇ ಗೌರವಿಸುತ್ತದೆ: ಬೆಳ್ಳಿ ಪ್ರಕಾಶ್

| Published : Jan 26 2025, 01:31 AM IST

ಸಾರಾಂಶ

ಕಡೂರು, ಸಂವಿಧಾನದ ಶಿಲ್ಪಿ, ಸಮಾಜ ಸುಧಾರಕರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪಡೆದ ಉನ್ನತ ಶಿಕ್ಷಣದಿಂದ ಅವರಿಗೆ ಭಾರತ ಸೇರಿದಂತೆ ಇಡೀ ಪ್ರಪಂಚವೇ ಗೌರವಿಸುತ್ತಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

ಕಡೂರು ಪಟ್ಟಣದ ತಮ್ಮ ನಿವಾಸದ ಪ್ರಾಂಗಣದಲ್ಲಿ ಬಿಜೆಪಿನಿಂದ ಸಂವಿಧಾನ ಸಮ್ಮಾನ್ ಅಭಿಯಾನ

ಕನ್ನಡ ಪ್ರಭ ವಾರ್ತೆ, ಕಡೂರು

ಸಂವಿಧಾನದ ಶಿಲ್ಪಿ, ಸಮಾಜ ಸುಧಾರಕರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪಡೆದ ಉನ್ನತ ಶಿಕ್ಷಣದಿಂದ ಅವರಿಗೆ ಭಾರತ ಸೇರಿದಂತೆ ಇಡೀ ಪ್ರಪಂಚವೇ ಗೌರವಿಸುತ್ತಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

ಶನಿವಾರ ಕಡೂರು ಪಟ್ಟಣದ ತಮ್ಮ ನಿವಾಸದ ಪ್ರಾಂಗಣದಲ್ಲಿ ಬಿಜೆಪಿನಿಂದ ಸಂವಿಧಾನ ಸಮ್ಮಾನ್ ಅಭಿಯಾನದ ಅಂಗವಾಗಿ ನಡೆದ ಭೀಮ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಪಡೆದಲ್ಲಿ ಭ‍ವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಅದಕ್ಕೆ ನಮ್ಮ ಅಂಬೇಡ್ಕರ್ ಬಹುದೊಡ್ಡ ಉದಾಹರಣೆ. ವಿದ್ಯಾವಂತರಾಗಬೇಕು ಅದಕ್ಕಿಂತ ಹೆಚ್ಚಾಗಿ ತಿಳುವಳಿಕೆ ಉಳ್ಳವರಾಗಿರಬೇಕು. ಸಮಾಜದಲ್ಲಿ ಎಲ್ಲರನ್ನು ಹೇಗೆ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಚಿಂತನೆ ಇರಬೇಕು ಎಂದರು.

ನಗರ ಪಟ್ಟಣಗಳಲ್ಲಿ ಇಂದು ಜಾತಿ ಪರಿಸ್ಥಿತಿ ಸುಧಾರಿಸಿದ್ದು ಹಳ್ಳಿಗಳಲ್ಲಿ ಸುಧಾರಣೆ ಆಗಬೇಕಿದೆ. ಅಂಬೇಡ್ಕರ್ ಅವರ ವಿಚಾರ ಧಾರೆ ಇಂದಿನ ಭೀಮ ಸಂಗಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ಕಾರಣ ಇದು ತಮಗೆ ಸಂತೋಷ ತಂದಿದೆ. ರಾಷ್ಟ್ರೀಯ ಹಬ್ಬದಲ್ಲಿ ಎಷ್ಟು ಜನ ದೇಶಾಭಿಮಾನ ಮೆರೆಯುತ್ತಾರೆ. ಅಂಬೇಡ್ಕರ್ ಅವರು ಸ್ವಾತಂತ್ರ ವನ್ನು ನಾವು ಬದುಕಲು ನೀಡಿದ್ದಾರೆ. ನಾನು ಕೂಡ ನನ್ನ ಉಸಿರಿರುವವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದರು.

ಇರುವ 103 ಪರಿಶಿಷ್ಟ ಜಾತಿಯಲ್ಲಿ ನಮ್ಮಲ್ಲಿರುವ ವರ್ಗಗಳಿಗೆ ತಾವು ಗೌರವ ನೀಡುತ್ತಾ ಬಂದಿದ್ದೇನೆ. ಇಂದು ದೇಶ ಎತ್ತ ಸಾಗುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು. ಬದುಕಿದ್ದಾಗ ಯಾರೂ ಗೌರವಿಸುವುದಿಲ್ಲ. ಸತ್ತಾಗ ಮಾತ್ರ ಒಳ್ಳೆಯವನು ಎನ್ನುತ್ತಾರೆ ಇದು ವಾಸ್ತವ ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ನರೇಂದ್ರ ಮೋದಿ ಅವರು ರೂಪಿಸಿರುವ ಕಾರ್ಯಕ್ರಮಗಳಲ್ಲಿ ದೇಶದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಚಿಂತನೆ ಇದೆ. ಒಳ್ಳೆಯ ಕೆಲಸ ಯಾವುದೇ ಪಕ್ಷ ಮಾಡಿದ್ದರೂ ಅದನ್ನು ಹೇಳಬೇಕು. ನೀವುಗಳು ನೀಡುವ ಶಕ್ತಿಯಿಂದ ನಾವು ಬೆಳೆಯುತ್ತೇವೆ ನಮಗೆ ದೇಶ ಮುಖ್ಯ ಭಾರತ ಮಾತೆ ನಮ್ಮಮ್ಮ ಅವಳ ರಕ್ಷಣೆಗೆ ನಾನು ನಿಮ್ಮ ಜೊತೆ ಇರುತ್ತೇನಿ. ಮೇ 15ರ ನಂತರ ವೇದಿಕೆ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಹಾವೇರಿಯ ನಿವೃತ್ತ ತಹಸೀಲ್ದಾರ್ ದ್ಯಾಮಣ್ಣನವರ್ ಗವಿಸಿದ್ದಪ್ಪ ಮಾತನಾಡಿ, ಭಾರತೀಯ ಜನತಾ ಪಕ್ಷ ಎಲ್ಲ ವರ್ಗಗಳಿಗೆ ಆದ್ಯತೆ ನೀಡುತ್ತಾ ಬಂದಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಅಂತಹ ಉನ್ನತ ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಪರಿಶಿಷ್ಟ ವರ್ಗಕ್ಕೆ ನೀಡಿದೆ. ರಾಷ್ಟ್ರದ ಅಭಿವೃದ್ಧಿ ಇಲ್ಲದೆ ಸ್ವಾರ್ಥಕ್ಕಾಗಿ 75 ತಿದ್ದುಪಡಿಗಳನ್ನು ಕಾಂಗ್ರೆಸ್ ಮಾಡಿತು. ನಮ್ಮ ದೇಶ ನಮ್ಮ ಸರ್ಕಾರ ದೇಶದ ಜನರ ಮತ್ತು ದೇಶದ ಅಭಿವೃದ್ಧಿಗೆ ವಾಜಪೇಯಿ ಅವರು 18 ತಿದ್ದುಪಡಿಗಳನ್ನು ರಾಷ್ಟ್ರದ ಕಲ್ಯಾಣಕ್ಕಾಗಿ ಮಾಡಿದರು ಶೈಕ್ಷಣಿಕ, ಆರ್ಥಿಕವಾಗಿ ಪರಿಶಿಷ್ಟ ವರ್ಗದ ಮೀಸಲಾತಿಯನ್ನು 10 ವರ್ಷ ವಿಸ್ತರಿಸಿತು. ಸರ್ವ ಶಿಕ್ಷಣ ಅಭಿಯಾನ, ಎಸ್‌.ಸಿ. ಆಯೋಗ ಮತ್ತು ಹಿಂದುಳಿದ ಆಯೋಗಕ್ಕೆ ಮೋದಿ ನಿಜವಾದ ಅಧಿಕಾರ ನೀಡಿದರು.

ದಸಂಸ ಹಿರಿಯ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ದಲಿತರು ಇಂದಿರಾ ಗಾಂಧಿ ಮಕ್ಕಳು ಎಂದು ಕಾಂಗ್ರೆಸ್ ನವರು ಓಟಿಗಾಗಿ ಬಳಸಿಕೊಂಡರು. ದಲಿತರನ್ನು ದಲಿತರಾಗಿಯೇ ಉಳಿಸಿದರೇ ವಿನಃ ಅಭಿವೃದ್ಧಿಗೆ ಯಾವ ಕೊಡುಗೆ ನೀಡಲಿಲ್ಲ. ಮೋದಿಯವರು ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಿ ಆತ್ಮ ವಿಶ್ವಾಸ ತುಂಬಿದ್ದಾರೆ. ಇಲ್ಲಿ ನಮ್ಮ ನಾಯಕ ಬೆಳ್ಶಿ ಪ್ರಕಾಶ್‌ ದಲಿತರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ಬಿಜೆಪಿ ಮಂಡಲಾಧ್ಯಕ್ಷ ದೇವಾನಂದ್, ಮಾಲಿನಿ ಬಾಯಿ, ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು, ಸುದರ್ಶನ್, ಬಿದರೆ ಜಗದೀಶ್, ಶ್ರೀನಿವಾಸನಾಯ್ಕ,ರಾಜಾ ನಾಯ್ಕ, ಹುಲ್ಲೇಹಳ್ಳಿ ಲಕ್ಷ್ಣಣ್, ನಾಗರಾಜು, ಕುರುಬಗೆರೆ ಮಹೇಶ್ ಮತ್ತಿತರರು ಇದ್ದರು.

25ಕಕೆಡಿಯು1

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಕಡೂರು ಪಟ್ಟಣದಲ್ಲಿ ಆಯೋಜಿಸಿದ್ದ ಭೀಮ ಸಂಗಮ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.