ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಮುಂದುವರೆದಿದೆ ಎಐ ನಮ್ಮ ಪ್ರತಿನಿತ್ಯದ ಚಟುವಟಿಕೆ ನೋಡಿಕೊಂಡು ಅದರ ಇಂಟಲಿಜೆನ್ಸ್ ಅನ್ನು ಹೆಚ್ಚು ಅಭಿವೃದ್ಧಿ ಮಾಡಿಕೊಳ್ಳುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ಮಕ್ಕಳು ನಮಗಿಂತ ಹೆಚ್ಚು ಮುಂದೆ ಇದ್ದಾರೆ. ಹೀಗಾಗಿ, ಶಿಕ್ಷಕರು ತಂತ್ರಜ್ಞಾನ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ. ಮುಖ್ಯವಾದ ಅಂಶಗಳನ್ನು ಅಳವಡಿಸಿಕೊಂಡು ಉನ್ನತ ಶಿಕ್ಷಣವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಇ- ಆಡಳಿತ ವಿಭಾಗದ ಯೋಜನಾ ನಿರ್ದೇಶಕ ಡಾ. ಭಾಗ್ಯವಾನ ಎಸ್. ಮುದಿಗೌಡ್ರ ತಿಳಿಸಿದರು.ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರವು ಇತ್ತೀಚೆಗೆ ಆಯೋಜಿಸಿದ್ದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ವರ್ಧನೆಗಾಗಿ ಪರಿಣಾಮಕಾರಿ ಆಡಳಿತ ಕುರಿತು ಒಂದು ದಿನದ ಪ್ರಾಂಶುಪಾಲರ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಮುಂದುವರೆದಿದೆ ಎಐ ನಮ್ಮ ಪ್ರತಿನಿತ್ಯದ ಚಟುವಟಿಕೆ ನೋಡಿಕೊಂಡು ಅದರ ಇಂಟಲಿಜೆನ್ಸ್ ಅನ್ನು ಹೆಚ್ಚು ಅಭಿವೃದ್ಧಿ ಮಾಡಿಕೊಳ್ಳುತ್ತದೆ. ಹೀಗಾಗಿ, ಇಂದು ಎಐ ತಂತ್ರಜ್ಞಾನ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಗುಣಮಟ್ಟದ ಶಿಕ್ಷಣ ಅವಶ್ಯಕ
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್. ಪ್ರತಿಮಾ ಮಾತನಾಡಿ, ಇಂದು ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ. ನಾವು ಪದವಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಅಳವಡಿಸಿಕೊಳ್ಳದಿದ್ದರೇ ಇನ್ನಷ್ಟು ಕುಸಿತ ಕಾಣುತ್ತಾ ಹೋಗುತ್ತೇವೆಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಪ್ರಾಂಶುಪಾಲರಿಗೆ ಹೆಚ್ಚಿನ ಜವಬ್ದಾರಿ ಇರುತ್ತದೆ. ಒಂದು ವಿಶ್ವವಿದ್ಯಾನಿಲಯದಲ್ಲಿ ಯಾವುದಾದರೂ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಕಾಲೇಜು ಮುಖ್ಯವಾದ ಪಾತ್ರ ವಹಿಸುತ್ತದೆ. ಕಾಲೇಜಿನ ಹಂತದಲ್ಲಿಯೇ ಓದು ಸರಿಯಿದ್ದರೆ ವಿವಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಕೆ. ಮಂಟೇಲಿಂಗು, ಮಾಳವೀಯ ವಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ಎಚ್.ಪಿ. ಜ್ಯೋತಿ ಮೊದಾದವರು ಇದ್ದರು. -----ಕೋಟ್...ಅಡ್ಮಿಷನ್ ನಿಂದ ಹಿಡಿದು ಪ್ರಮಾಣ ಪತ್ರವನ್ನು ಕೊಡುವವರೆಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಹೋಗಬೇಕು. ಕಾಲೇಜುಗಳಲ್ಲಿ ಕ್ಯಾಲೆಂಡರ್ ನಿಯಮದಂತೆ ಕಾರ್ಯಕ್ರಮಗಳನ್ನು ಕರ್ನಾಟದಲ್ಲಿ ತರಲು ಆಗುತ್ತಿಲ್ಲ. ಹೀಗಾಗಿ, ಕಾಲೇಜುಗಳಲ್ಲಿ ಕ್ಯಾಲೆಂಡರ್ ನಿಯಮದಂತೆ ಕಾರ್ಯಕ್ರಮಗಳನ್ನು ತಂದರೆ ಎಲ್ಲಾ ಪರೀಕ್ಷೆಗಳು, ವ್ಯಾಲ್ಯೂವೇಷನ್ ಕಾಲ ಕಾಲಕ್ಕೆ ಆಗಿ ತರಗತಿಗಳಲ್ಲಿ ಅಧ್ಯಾಯಕರು ಕಾಣಿಸಿಕೊಂಡರೇ ಅಲ್ಲಿ ಒಂದು ರೀತಿಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರಬಹುದು. - ಡಾ.ಡಿ.ಎಸ್. ಪ್ರತಿಮಾ, ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ