ಸಾರಾಂಶ
ದೇಶದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲರು ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಮಕ್ಕಳಿಗೂ ಅರಿವು ಮೂಡಿಸುವ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪದ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಭಾನುವಾರ ಸಂಜೆ ಆಚರಿಸಿದರು.ದಸಂಸ ಮುಖಂಡ, ಕಾಂಗ್ರೆಸ್ ಎಸ್ಸಿ, ಎಸ್.ಟಿ ಘಟಕದ ಅಧ್ಯಕ್ಷ ಕೆ.ಬಿ.ರಾಮು ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂವಿಧಾನದ ಪ್ರತಿಜ್ಞೆ ವಿಧಿ ಬೋಧಿಸುವ ಮೂಲಕ ಆಚರಣೆ ಮಾಡಿದರು.
ಇದಕ್ಕೂ ಮುನ್ನ ಪಟ್ಟಣದ ಮಹಾಂಕಾಳೇಶ್ವರಿ ದೇವಸ್ಥಾನದಿಂದ ಅಂಬೇಡರ್ ಅವರ ಪೋಸ್ಟರ್ ಗಳನ್ನು ಹಿಡಿದು ಮರೆವಣಿಗೆ ಹೊರಟ ಕಾರ್ಯಕರ್ತರು ಪಟ್ಟಣದ ಪೊಲೀಸ್ ಸ್ಟೇಷನ್, ಹಿರೇಮರಳಿ ವೃತ್ತ, ಚರ್ಚ್ ರಸ್ತೆ, ಮಂಡ್ಯ ಸರ್ಕಲ್ ಮೂಲಕ ಮರವಣಿಗೆ ನಡೆಸಿ ಐದು ದೀಪವೃತ್ತಕ್ಕೆ ಆಗಮಿಸಿ, ಐದು ದೀಪವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿದರು. ಮೇಣದಬತ್ತಿ ಅಂಬೇಡ್ಕರ್ ಅವರಿಗೆ ನಮನಸಲ್ಲಿಸಿದರು.ಈ ವೇಳೆ ಕೆ.ಬಿ.ರಾಮಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ನೀಡುವ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಅಂಬೇಡ್ಕರ್ ಅವರು ನಡೆದು ಬಂದ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕಾಗಿದ ಎಂದರು.
ದೇಶದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲರು ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಮಕ್ಕಳಿಗೂ ಅರಿವು ಮೂಡಿಸುವ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕಾಗಿದೆ ಎಂದರು.ಸ್ಮಿತ ಪುಟ್ಟಣ್ಣಯ್ಯ ಮಾತನಾಡಿ, ಬಾಬಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ವಿಶ್ವನಾಯಕರು. ಆದರೆ, ನಾವು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ ಮಾತನಾಡುತ್ತಿದ್ದೇವೆ. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಜಾತಿ, ಧರ್ಮದವರು ಹಬ್ಬದಂತೆ ಆಚರಣೆ ಮಾಡುವ ಮೂಲಕ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ದಸಂಸ ಮುಖಂಡರಾದ ಕೆ.ಬಿ.ರಾಮು, ಎ.ಜೆ.ಬಸವರಾಜು, ದೇವರಾಜು, ಸಿದ್ದಲಿಂಗಯ್ಯ, ಟಿ.ಎಸ್.ಹಾಳಯ್ಯ, ದೇವರಾಜುಬೇವಿನಕುಪ್ಪೆ, ಹನುಮಯ್ಯ, ದೊಡ್ಡವೆಂಕಟಯ್ಯ, ಹರಳಹಳ್ಳಿ ಲೋಕೇಶ್, ಹಾರೋಹಳ್ಳಿ ಸೋಮು ಸೇರಿದಂತೆ ಹಲವರು ಭಾಗವಹಿಸಿದ್ದರು.