ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ಮಹಾವಿದ್ಯಾಪೀಠವು ತನ್ನ ಅಧೀನದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇನ್ಫೋಸಿಸ್ಸ್ಪ್ರಿಂಗ್ ಬೋರ್ಡ್ ಯೋಜನೆ ಜಾರಿಗೊಳಿಸಲು ಇನ್ಫೋಸಿಸ್ ಸಂಸ್ಥೆಯೊಂದಿಗೆ ಮೇ 17 ರಂದು ಒಡಂಬಡಿಕೆಗೆ ಸಹಿ ಮಾಡಿತು.ಇದು ಇನ್ಫೋಸಿಸ್ ಸಂಸಸ್ಥೆಯು ತನ್ನ ಕಾರ್ಪೊರೇಟ್ಸ್ ಜವಾಬ್ದಾರಿಯಡಿ ನಡೆಸುತ್ತಿರುವ ಯೋಜನೆ.
ಈ ಒಡಂಬಡಿಕೆಗೆ ಸಹಿ ಮಾಡಿದ ನಂತರ ಮಾತನಾಡಿದ ಜೆಎಸ್ಎಸ್ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲ್ ಸಾಕ್ಷರತೆ ಪ್ರಮುಖ ಅಂಶವಾಗಿದ್ದು, ಇದನ್ನು ಸಾಧಿಸಲು ಇನ್ಫೋಸಿಸ್ ಸಂಸ್ಥೆಯು ಸ್ಪ್ರಿಂಗ್ ಬೋರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಡಿಜಿಟಲ್ ಸಾಕ್ಷರರಾಗಲು ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಅನುವುಮಾಡಿಕೊಡುವ ಕಲಿಕೆಯ ವ್ಯವಸ್ಥೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೂ ಈ ಜ್ಞಾನವನ್ನು ಯಾವುದೇ ವೆಚ್ಚವಿಲ್ಲದೆ ವಿಸ್ತರಿಸಬಹುದು. ಈ ಯೋಜನೆಯು ನೂತನ ಶಿಕ್ಷಣ ನೀತಿ-2020 ಅಡಿಯಲ್ಲಿ ವಿನ್ಯಾಸಗೊಂಡಿದ್ದು, ಇದು ಸಮಾನ ಮತ್ತು ಅಂತರ್ಗತ ಶಿಕ್ಷಣವನ್ನು ಉದ್ದೇಶಿಸಿದೆ. ಜೆಎಸ್ಎಸ್ಮಹಾವಿದ್ಯಾಪೀಠದ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ವಿಶ್ವವಿದ್ಯಾನಿಲಯಗಳ ಕುಲಪತಿಗಳು ಈ ಯೋಜನೆಯ ಸದುಪಯೋಗಮಾಡಿಕೊಳ್ಳುವಂತೆ ತಿಳಿಸಿದರು.ಇನ್ಫೋಸಿಸ್(ಶಿಕ್ಷಣ, ತರಬೇತಿ, ಅಸೆಸ್ಮೆಂಟ್) ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸತೀಶ್ನಂಜಪ್ಪ ಮಾತನಾಡಿ, ಇನ್ಫೋಸಿಸ್ ಡಿಜಿಟಲ್ಲಿಟರಸಿ ಮಿಷನ್ ಅಡಿಯಲ್ಲಿ ಇನ್ಫೋಸಿಸ್ಸ್ಟ್ರಿಂಗ್ ಬೋರ್ಡ್ ಕಾರ್ಪೊರೇಟ್ಸ್ ಜವಾಬ್ದಾರಿಯಡಿ ವಿದ್ಯಾರ್ಥಿಗಳಿಗೆ ಮೌಲ್ಯವರ್ಧಿತ ಶಿಕ್ಷಣದ ಜೊತೆಗೆ ಡಿಜಿಟಲ್ಕೌಶಲ್ಯವನ್ನು ಒದಗಿಸುತ್ತದೆ. ಈ ಯೋಜನೆ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಪ್ರಸ್ತುತ 7.5 ಮಿಲಿಯನ್ ಬಳಕೆದಾರರು ಉಪಯೋಗಿಸುತ್ತಿದ್ದು, ಇನ್ಫೋಸಿಸ್ ಸ್ಟ್ರಿಂಗ್ಬೋರ್ಡ್ ವೇದಿಕೆಯಲ್ಲಿ ವಿವಿಧ ಕೋರ್ಸ್ ಗಳಿದ್ದು, ಇದು ನಿಜಕ್ಕೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ಯೋಜನೆ ಕುರಿತು ಮಾತನಾಡಿದ, ಇನ್ಫೋಸಿಸ್ ನ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಎಸ್. ಮೀನಾಕ್ಷಿ ಅವರು, ಈ ವೇದಿಕೆಯು ಬಳಕೆದಾರರಿಗೆ ವೈವಿಧ್ಯಮಯ ವಿಷಯ ನೀಡಲಿದ್ದು, ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್ ಮುಂತಾದ ಇತರೆ ವಿಷಯಗಳನ್ನು ಒಳಗೊಂಡಿದೆ. ವೃತ್ತಿ ಆಧಾರಿತ ಶಿಕ್ಷಣವೂ ಸೇರಿದಂತೆ ಹೊಸ ಹೊಸ ಕ್ಷೇತ್ರಗಳಿಗೆ ಸಂಬಂಧಿಸಿದ 1,700ಕ್ಕೂ ಹೆಚ್ಚು ಶಿಕ್ಷಣಗಳನ್ನು ಈ ವೇದಿಕೆಯು ಒದಗಿಸುತ್ತದೆ ಎಂದರು.ಈ ಕಾರ್ಯಕ್ರಮವು ಕೌಶಲ್ಯಾಭಿವೃದ್ಧಿ ಸಾಧಿಸುವ ಉದ್ದೇಶ ಹೊಂದಿದೆ. ಉದ್ಯಮದ ಅಗತ್ಯಗಳಿಗೆ ಬೇಕಾದ ವಿಶೇಷ ಡಿಜಿಟಲ್ ಕೌಶಲ್ಯ, ಡಿಜಿಟಲ್ ಸಾಕ್ಷರತೆಯನ್ನು ಬೆಂಬಲಿಸುತ್ತದೆ. ಕಾರ್ಯಾಗಾರ, ವಿಚಾರಗೋಷ್ಠಿ, ಇಂಟರ್ನ್ಶಿಪ್ ಮೊದಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ. ಎಂದರು.
ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರವಹಿಸುತ್ತಿದೆ.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ. ಮಂಜುನಾಥ್, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಮತ್ತು ಜೆಎಸ್ಎಸ್ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಮತ್ತು ಕುಲಸಚಿವರು, ಜೆಎಸ್ಎಸ್ ಮಹಾವಿದ್ಯಾಪೀಠದ ಎಲ್ಲಾ ವಿಭಾಗದ ಮುಖ್ಯಸ್ಥರು ಇದ್ದರು.
;Resize=(128,128))
;Resize=(128,128))
;Resize=(128,128))