ಸಿದ್ದರಾಮೇಶ್ವರ ವಿದ್ಯಾಸಂಸ್ಥೆಗೆ ಡಾ.ಕೆ.ಟಿ.ಲಕ್ಷ್ಮಮ್ಮ ನೂತನ ಅಧ್ಯಕ್ಷೆ

| Published : Oct 21 2024, 12:34 AM IST

ಸಿದ್ದರಾಮೇಶ್ವರ ವಿದ್ಯಾಸಂಸ್ಥೆಗೆ ಡಾ.ಕೆ.ಟಿ.ಲಕ್ಷ್ಮಮ್ಮ ನೂತನ ಅಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ನೂತನ ಅಧ್ಯಕ್ಷೆಯಾಗಿ ಹಾರೋಹಳ್ಳಿದೊಡ್ಡಿ ಡಾ.ಕೆ.ಟಿ.ಲಕ್ಷ್ಮಮ್ಮ ಅಧಿಕಾರ ಸ್ವೀಕರಿಸಿದರು.

ಚನ್ನಪಟ್ಟಣ: ತಾಲೂಕಿನ ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ನೂತನ ಅಧ್ಯಕ್ಷೆಯಾಗಿ ಹಾರೋಹಳ್ಳಿದೊಡ್ಡಿ ಡಾ.ಕೆ.ಟಿ.ಲಕ್ಷ್ಮಮ್ಮ ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಅವಿರೋಧ ಆಯ್ಕೆಯಾಗಿರುವ ಕೆ.ಟಿ.ಲಕ್ಷ್ಮಮ್ಮ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ಡಾ.ಕೆ.ಟಿ.ಲಕ್ಷ್ಮಮ್ಮ, ನನ್ನ ಮೇಲೆ ವಿಶ್ವಾಸವಿಟ್ಟು, ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಗುರುತರ ಜವಾಬ್ದಾರಿಯನ್ನು ವಹಿಸಿರುವ ಆಡಳಿತ ಮಂಡಳಿ ನಿರ್ದೇಶಕರು, ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಗುರು- ಹಿರಿಯರು, ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಸಿದ್ದರಾಮೇಶ್ವರ ವಿದ್ಯಾಸಂಸ್ಥೆಗೆ ತನ್ನದೇ ಆದ ಇತಿಹಾಸವಿದ್ದು, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ತಮ್ಮ ಮುಂದೆ ಹಲವಾರು ಸವಾಲುಗಳಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸುವ ಜತೆಗೆ, ಸಂಸ್ಥೆಯ ಅಭಿವೃದ್ಧಿಗೆ ಸರ್ವರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕಾಳೇಗೌಡ, ಅರುಣಾಚಲ, ಮಾಜಿ ಕಾರ್ಯದರ್ಶಿಗಳಾದ ರೇವಣ್ಣ ಸಿದ್ದಪ್ಪ, ಗೋಕರ್ಣೇಶ್, ನಿರ್ದೇಶಕರಾದ ಶಿವಕುಮಾರ್, ಲಕ್ಷ್ಮಣ್, ಸತೀಶ್, ಪ್ರಾಂಶುಪಾಲ ಡಿ.ಸಿ.ಸುರೇಶ್ ಇತರರಿದ್ದರು.

ಪೊಟೋ೨೦ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ನೂತನ ಅಧ್ಯಕ್ಷೆಯಾಗಿ ಕೆ.ಟಿ.ಲಕ್ಷ್ಮಮ್ಮ ಹಾಗೂ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕರಿಸಿದರು.