ಡಾ.ಮಂಜುನಾಥ್ ಬಹುಮತದಲ್ಲಿ ಗೆಲುವು: ಪ್ರಕಾಶ್

| Published : Apr 19 2024, 01:04 AM IST

ಸಾರಾಂಶ

ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಮಾಯಗಾನಹಳ್ಳಿ ಗ್ರಾಪಂ ವತಿಯಿಂದ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್‌ಗೆ ಅಧಿಕ ಮತಗಳ ಲೀಡ್ ನೀಡುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ್ ಬಸವನಪುರ ತಿಳಿಸಿದರು.

ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಮಾಯಗಾನಹಳ್ಳಿ ಗ್ರಾಪಂ ವತಿಯಿಂದ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್‌ಗೆ ಅಧಿಕ ಮತಗಳ ಲೀಡ್ ನೀಡುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ್ ಬಸವನಪುರ ತಿಳಿಸಿದರು.

ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿ ಗ್ರಾಮಗಳಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತಯಾಚಿಸಿ ಮಾತನಾಡಿದ ಅವರು, ಮೋದಿ ಅವರ ನಾಯಕತ್ವ ಹಾಗೂ ಡಾ.ಮಂಜುನಾಥ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿರುವ ಮತದಾರರು ಮತ ಚಲಾಯಿಸಲು ಕಾತುರದಿಂದ ಕಾಯುತ್ತಿದ್ದು, ಕನಿಷ್ಠ 1.50 ಲಕ್ಷ ಮತಗಳಿಂದ ಬಿಜೆಪಿ ಜಯಗಳಿಸಲಿದೆ ಎಂದರು.

ಕಳೆದ 10 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿ ಅವರು ದೇಶದ ಬೆನ್ನೆಲುಬಾದ ರೈತರ ಆದಾಯವನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರೈತರಿಗೆ ಆರ್ಥಿಕ ಬೆಂಬಲ ನೀಡಲು ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರು. ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಸಂಖ್ಯೆಯನ್ನು 18 ಸಾವಿರಕ್ಕೆ ಏರಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆ ಅಂತಿಮ ಹಂತದಲ್ಲಿ ಹಾನಿಗೀಡಾದಾಗ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಫಸಲ್ ಬಿಮಾ ಯೋಜನೆಗೆ ಬಲ ತುಂಬಲು ನಿರ್ಧರಿಸಲಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ನೀರಾವರಿ, ಕೃಷಿ ಉತ್ಪನ್ನಗಳ ದಾಸ್ತಾನು, ಶ್ರೇಣೀಕರಣ, ವಿಂಗಡಣೆ ಘಟಕಗಳು, ಶೀತಲೀಕರಣ ಘಟಕಗಳು, ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ ಮೂಲಕ ಕೃಷಿ ಮೂಲಸೌಕರ್ಯ ವೃದ್ಧಿಸಲು ಸಂಕಲ್ಪ ಮಾಡಲಾಗಿದೆ ಎಂದರು.

ಮುಖಂಡರಾದ ಪುಟ್ಟಸ್ವಾಮಯ್ಯ, ಶಿವಕುಮಾರಸ್ವಾಮಿ, ರುದ್ರೇಶ್ವರ್, ನರಸಿಂಹಮೂರ್ತಿ, ಶಂಕರ್, ಯೋಗೇಶ್, ಚಂದು, ಲೋಕೇಶ್, ರಮೇಶ್, ಜಾನಕಿರಾಮಯ್ಯ, ಹಳ್ಳಿಮಾಳ ಕುಮಾರ್, ಸಿಂಗ್ರಯ್ಯ, ವೆಂಕಟೇಶ್, ಮಾಯಗಾನಹಳ್ಳಿ ಶ್ರೀಧರ್, ಕೆ.ಎಸ್.ಶಂಕರಯ್ಯ ಇತರರಿದ್ದರು.18ಕೆಆರ್ ಎಂಎನ್‌ 8.ಜೆಪಿಜಿ

ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮತಯಾಚಿಸಿದರು.