ಸಾರಾಂಶ
ಶ್ಯಾಮ ಪ್ರಸಾದ್ ಮುಖರ್ಜಿ ಅಪ್ರತಿಮ ದೇಶಪ್ರೇಮಿ. ನೆಹರೂ ಕಾಲದಲ್ಲಿಯೇ ಕಾಶ್ಮೀರದ 370 ನೇ ವಿಧಿ ರದ್ದತಿಗಾಗಿ ಹೋರಾಟ ಮಾಡಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅವರನ್ನು ಅಂದಿನ ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬಳಿಕ ಕಾಂಗ್ರೆಸ್ ತೊರೆದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಹಿ ಹಂಚಲಾಯಿತು. ನಗರದ ಬಜಾರ್ ರಸ್ತೆಯಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಜನ್ಮ ದಿನಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಮಾತನಾಡಿ ಕಾಶ್ಮೀರಕ್ಕಾಗಿ ತನ್ನನ್ನು ತಾನು ಬಲಿಕೊಟ್ಟ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅತ್ಯಂತ ಪ್ರಭಾವಿ ನಾಯಕನಾಗಿದ್ದರು ಎಂದರು.ದೇಶದ ಅಖಂಡತೆಗೆ ಹೋರಾಟ
ಬಿಜೆಪಿ ಮುಖಂಡ ಎನ್.ಎಂ.ರವಿ ನಾರಾಯಣ ರೆಡ್ಡಿ ಮಾತನಾಡಿ, ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿಯಂದು ಅವರನ್ನು ಎಲ್ಲರೂ ಸ್ಮರಿಸಬೇಕು ಎಂದರು ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್ ರವರು ಮಾತನಾಡಿ ಶ್ಯಾಮ ಪ್ರಸಾದ್ ಮುಖರ್ಜಿ ಅಪ್ರತಿಮ ದೇಶಪ್ರೇಮಿ ಕಾಶ್ಮೀರದ 370 ನೇ ವಿಧಿ ರದ್ದಿಗೆ ಹೋರಾಟ ಮಾಡಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅವರನ್ನು ಅಂದಿನ ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ನೊಂದ ಅವರು ಅಲ್ಲಿಂದ ಹೊರಬಂದು ಜನಸಂಘ ಕಟ್ಟಿದರು ಎಂದರು ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿಗಳಾದ ವೇಣುಮಾಧವ ಜಯಣ್ಣ ಉಪಾಧ್ಯಕ್ಷರುಗಳಾದ ರಾಘವೇಂದ್ರ ವೆಂಕಟಾದ್ರಿ ಮಂಜುನಾಥ ಶೋಬನ್ ಬಾಬು ಶಾಂತಕುಮಾರ್ ಮುದ್ದುಕೃಷ್ಣ ಪಾರ್ವತಮ್ಮ ಅಜಯ್ ಮಣಿಕಂಠ ಮಾರುತಿ ಫ್ಯಾಕ್ಟರಿ ರಮೇಶ ಕೃಷ್ಣಯ್ಯ ಶಟ್ಟಿ ಅನ್ನಪೂರ್ಣ ಮಂಜು ಅನಿಲ್ ಪರಮೇಶ್ ದ್ವಾರಕೀಶ್ ಉಪಸ್ಥಿತರಿದ್ದರು.