ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ

| Published : Jul 28 2025, 02:04 AM IST

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್‌ ಕೋರೆಯವರ 78ನೇ ಜನ್ಮದಿನಾಚರಣೆಯನ್ನು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಂಕಲಿ ಗ್ರಾಮದಲ್ಲಿ ಜು.31 ಹಾಗೂ ಆ.1ರಂದು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್‌ ಕೋರೆಯವರ 78ನೇ ಜನ್ಮದಿನಾಚರಣೆಯನ್ನು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಂಕಲಿ ಗ್ರಾಮದಲ್ಲಿ ಜು.31 ಹಾಗೂ ಆ.1ರಂದು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಡಾ.ಪ್ರಭಾಕರ್‌ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.

ಅಂಕಲಿಯ ಶಿವಾಲಯದಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಚಿಕ್ಕೋಡಿ, ಶಿವಶಕ್ತಿ ಶುಗರ್ಸ್‌ ಯಡ್ರಾಂವ, ಹರ್ಮ್ಸ್‌ ಡಿಸ್ಟಿಲರಿ ಯಡ್ರಾಂವ, ಡಾ.ಪ್ರಭಾಕರ್‌ ಕೋರೆ ಸೌಹಾರ್ದ ಸಹಕಾರಿ ಬ್ಯಾಂಕ್‌, ಅಂಕಲಿ (ಮಲ್ಟಿ-ಸ್ಟೇಟ್) ಹಾಗೂ ಅಂಕಲಿ, ರಾಯಬಾಗ, ಚಿಕ್ಕೋಡಿ, ಅಥಣಿ, ನಿಪ್ಪಾಣಿ, ಯಡ್ರಾಂವ, ಗಳತಗಾ ಹಾಗೂ ಶಿರಗುಪ್ಪಿಯಲ್ಲಿರುವ ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಗಳು, ಜನಶಕ್ತಿ ಫೌಂಡೇಶನ್ ಚಿಕ್ಕೋಡಿ ಹಾಗೂ ಕೆಎಲ್ಇ ಅಕಾಡೆಮಿ ಆಫ್ ಹೈಯರ್‌ ಎಜ್ಯುಕೇಶನ್ ಆ್ಯಂಡ್‌ ರಿಸರ್ಚ್‌, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬಿಎಂಕೆ ಆಯುರ್ವೇದಿಕ ಮಹಾವಿದ್ಯಾಲಯ, ಕೆಎಲ್ಇ ಹೋಮಿಯೋಪತಿಕ ಮಹಾವಿದ್ಯಾಲಯ, ಡಾ.ಪ್ರಭಾಕರ್‌ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ/ ಚಿಕ್ಕೋಡಿ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದರು.

ಜು.31ರಂದು ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಇದರಲ್ಲಿ ಇತ್ತೀಚಿಗೆ ಬದಲಾದ ಜೀವನ ಶೈಲಿ, ಕೃಷಿ ಪದ್ಧತಿ ಹಾಗೂ ಆಹಾರ ಪದ್ಧತಿಗಳಿಂದ ಕ್ಯಾನ್ಸರ್ ರೋಗವು ಮಾರಕವಾಗಿ ಹರಡುತ್ತಿದೆ. ಈ ರೋಗವು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದ್ರೆ ಮಾತ್ರ ಮಾರಣಾಂತಿಕ ಅವಘಡಗಳನ್ನು ತಪ್ಪಿಸಬಹುದು. ನಮ್ಮ ಭಾಗದಲ್ಲಿ ಈಗಾಗಲೇ ಈ ರೋಗದ ಪರಿಣಾಮಕಾರಿ ಚಿಕಿತ್ಸೆಗಾಗಿ ಡಾ.ಕೋರೆಯವರು ಕೆಎಲ್‌ಇ ಸಂಸ್ಥೆಯಿಂದ ನೂತನ ಆಸ್ಪತ್ರೆಯನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿರುತ್ತಾರೆ. ಈ ವಿಷಯದ ಕುರಿತು ಜನರಿಗೆ ಮಾಹಿತಿ ತಲುಪಿಸಿ ಜನರನ್ನು ರಕ್ಷಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಈ ವರ್ಷ ವಿಶೇಷವಾಗಿ ನಮ್ಮೆಲ್ಲರ ನೆಚ್ಚಿನ ನಾಯಕರಾದ ಡಾ.ಪ್ರಭಾಕರ್‌ ಕೋರೆ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಖ್ಯಾತ ಕ್ಯಾನ್ಸರ್ ತಜ್ಞರು ಹಾಗೂ ಮುಖ್ಯಸ್ಥರು ಸರ್ಜಿಕಲ್ ಕ್ಯಾನ್ಸರ್ ಕೆಎಲ್ಇ ಡಾ. ಪ್ರಭಾಕರ್‌ ಕೋರೆ ಆಸ್ಪತ್ರೆ, ಬೆಳಗಾವಿಯ ಡಾ. ಕುಮಾರ ಮಿಂಚುರಕರ್ ಮತ್ತು ಖ್ಯಾತ ಸ್ತ್ರೀ ಕ್ಯಾನ್ಸರ್ ತಜ್ಞರು (ಗೈನೇಕ್) ಕೆಎಲ್ಇ ಡಾ.ಪ್ರಭಾಕರ್‌ ಕೋರೆ ಆಸ್ಪತ್ರೆ, ಬೆಳಗಾವಿಯ ಡಾ.ಸ್ವಾತಿ ಗೌಡರ ಉಪನ್ಯಾಸ ನೀಡುವರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆ, ಬೆಳಗಾವಿಯ ಆಜೀವ ಸದಸ್ಯರು, ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್‌ ಬೆಳಗಾವಿ ಇದರ ಅಧ್ಯಕ್ಷರು ಹಾಗೂ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ, ಅಂಕಲಿ (ಮಲ್ಟಿ-ಸ್ಟೇಟ್) ಇದರ ನಿರ್ದೇಶಕರಾದ ಡಾ.ಪ್ರೀತಿ ದೊಡ್ಡವಾಡ ವಹಿಸುವರು. ಅತಿಥಿಗಳಾಗಿ ಶುಭಾಂಗಿ ಮಲ್ಲಿಕಾರ್ಜುನ ಕೋರೆ ಮತ್ತು ಶ್ರೀಮತಿ ಶೈಲಜಾ ಸುರೇಶ ಪಾಟೀಲ ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ ಸೇರಿದಂತೆ ನಿರ್ದೇಶಕರು ಅಭಿಮಾನಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.