ನರ್ಸಿಂಗ್ ಕೋರ್ಸ್ ಶ್ರದ್ಧೆಯಿಂದ ಕಲಿಯಬೇಕು: ಡಾ.ಎಸ್.ಟಿ. ಶ್ರೀನಿವಾಸ್

| Published : Mar 24 2024, 01:31 AM IST

ನರ್ಸಿಂಗ್ ಕೋರ್ಸ್ ಶ್ರದ್ಧೆಯಿಂದ ಕಲಿಯಬೇಕು: ಡಾ.ಎಸ್.ಟಿ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ನರ್ಸಿಂಗ್ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಮತ್ತು ಪವಿತ್ರವಾದದ್ದು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಗೌರವ ಲಭಿಸಲಿದೆ. ತಮ್ಮ ವೃತ್ತಿ ಜೀವನದಲ್ಲಿ ರೋಗಿಗಳ ಪಾಲಿಗೆ ಬೆಳಕಾಗಿ. ವೃತ್ತಿ ಕೌಶಲ್ಯಪಡೆಯಿರಿ. ನೀವು ಇಂದು ಹಚ್ಚಿದ ಜ್ಯೋತಿ ನಿಮ್ಮನ್ನಲ್ಲದೆ, ನಿಮ್ಮ ಸುತ್ತಮುತ್ತಲಿನ ಅಂಧಾಕರ ತೊಳೆಯಲಿ

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ನರ್ಸಿಂಗ್ ಕೋರ್ಸನ್ನು ಶ್ರದ್ಧೆಯಿಂದ ಕಲಿಯಬೇಕು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಉಪ ನಿರ್ದೇಶಕ ಡಾ.ಎಸ್.ಟಿ. ಶ್ರೀನಿವಾಸ್ ಆಶಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯ ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಶನಿವಾರ ನಡೆದ ಜಿಎನ್ಎಂ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರ್ಸಿಂಗ್ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಮತ್ತು ಪವಿತ್ರವಾದದ್ದು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಗೌರವ ಲಭಿಸಲಿದೆ. ತಮ್ಮ ವೃತ್ತಿ ಜೀವನದಲ್ಲಿ ರೋಗಿಗಳ ಪಾಲಿಗೆ ಬೆಳಕಾಗಿ. ವೃತ್ತಿ ಕೌಶಲ್ಯಪಡೆಯಿರಿ. ನೀವು ಇಂದು ಹಚ್ಚಿದ ಜ್ಯೋತಿ ನಿಮ್ಮನ್ನಲ್ಲದೆ, ನಿಮ್ಮ ಸುತ್ತಮುತ್ತಲಿನ ಅಂಧಾಕರ ತೊಳೆಯಲಿ ಎಂದು ಅವರು ಆಶಿಸಿದರು.

ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು ಮಾತನಾಡಿ, ನರ್ಸಿಂಗ್ ವೃತ್ತಿಯಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಮುಖ್ಯ. ರೋಗಿಗಳ ಆರೋಗ್ಯ ಕಾಳಜಿ ವಹಿಸಿ ಧೈರ್ಯ ತುಂಬುವ ಕೆಲಸವನ್ನು ಶುಶ್ರೂಷಕರು ಮಾಡಬೇಕು ಎಂದರು.

ಶುಶ್ರೂಷ ಸೇವೆ ಮುಖ್ಯಾಧಿಕಾರಿ ಜೆನೆಟ್ ಮತಾಯಸ್ ಮಾತನಾಡಿದರು.

ಪ್ರಾಂಶುಪಾಲೆ ಡಿ.ಎನ್. ರೇಣುಕಾದೇವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಇದ್ದರು.