ಕಡೂರುಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ. ಆರ್ಟಿಮಿಸ್-_2 ಎಂಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು. ಈಗಾಗಲೇ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ ಹಿಂದೆ ಸಾವಿರಾರು ಜನರ ಶ್ರಮವಿದೆ.
ಚಂದ್ರಯಾನದ ಯೋಜನೆ ಆರ್ಟಿಮಿಸ್-_2 ನಲ್ಲಿ ರೀಸರ್ಚ್ ಸೈನ್ಟಿಸ್ಟ್
ಕನ್ನಡಪ್ರಭ ವಾರ್ತೆ, ಕಡೂರುಚಂದ್ರಯಾನದ ಮತ್ತೊಂದು ಸಾಹಸವನ್ನು ನಾಸಾ ಕೈಗೆತ್ತಿಕೊಂಡಿದೆ. ಆರ್ಟಿಮಿಸ್-_2 ಎಂಬ ಹೆಸರಿನ ಮಾನವ ಸಹಿತ ಚಂದ್ರಯಾನವಿದು. ಈಗಾಗಲೇ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ (ಮೊದಲ ಮಹಿಳೆ), ಮತ್ತು ಜೆರೆಮಿ ಹ್ಯಾನ್ಸೆನ್ ಈ ನಾಲ್ವರು ಚಂದ್ರನತ್ತ ಹೊರಟಿದ್ದಾರೆ. ಈ ಮಹಾನ್ ಸಾಹಸದ ಹಿಂದೆ ಸಾವಿರಾರು ಜನರ ಶ್ರಮವಿದೆ.
ಈ ಚಂದ್ರಯಾನ ಯೋಜನೆಗೂ ನಮ್ಮ ಜಿಲ್ಲೆಯ ಕಡೂರು ತಾಲೂಕಿನ ಮಚ್ಚೇರಿಗೂ ಅವಿನಾಭಾವ ಸಂಭಂದ ಬೆಸೆದು ಕೊಂಡಿದೆ. ಮಚ್ಚೇರಿ ಮೂಲದ ಡಾ.ಸುಹಾಸ್ ಇ.ಪಿ. ಚಂದ್ರಯಾನ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.ಸುಹಾಸ್ ಅವರ ತಂದೆ ಪ್ರೊ. ಎಂ.ಇ.ಈಶ್ವರಪ್ಪ ಮಚ್ಚೇರಿಯವರು. ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ನಿರ್ದೇಶಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದವರು. ತಾಯಿ ಆರ್. ಪ್ರಮೀಳ ಇಸ್ರೋದಲ್ಲಿ ಅಕೌಂಟ್ಸ್ ಆಫೀಸರ್. ತಂಗಿ ಸಿಂಚನಾ ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಜ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಡಾ.ಸುಹಾಸ್ ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಮೊದಲ ರ್‍ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದರು ನಂತರ ಅಮೇರಿಕದ ಆರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನ್ಯಾನೋ ಮೆಟೀರಿಯಲ್ ಸೈನ್ಸ್ ನಲ್ಲಿ ಎಂಎಸ್ ಮಾಡಿ ಜಾನ್ ಹಾಪ್ಕಿನ್ಸ್ ವಿ.ವಿ.ಯಿಂದ ಪಿಎಚ್ಡಿ ಪದವಿ, ಬೋಸ್ಟನ್ ನಲ್ಲಿ ಪೋಸ್ಟ್ ಡಾಕ್ ಎಂಐಟಿ ಪದವಿ ಪಡೆದು ಇದೀಗ ಯ್ಯೂನಿವರ್ಸಿಟಿ ಆಫ್ ಉಟಾ ದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ನಾಸಾದ ಮಾನವ ಸಹಿತ ಚಂದ್ರಯಾನದ ಯೋಜನೆ ಆರ್ಟಿಮಿಸ್-_2 ನಲ್ಲಿ ರೀಸರ್ಚ್ ಸೈನ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಮಹತ್ತರ ಅವಕಾಶ ಒದಗಿ ಬಂದಿದೆ.ಅತ್ಯಂತ ಮಹತ್ವ ಈ ಯೋಜನೆಗೆ ಕೈ ಜೋಡಿಸಿರುವ ಅನೇಕ ವಿಜ್ಞಾನಿಗಳ ಪೈಕಿ ಕನ್ನಡಿಗ ವಿಜ್ಞಾನಿ ಡಾ.ಸುಹಾಸ್ ಸಹ ಸೇರಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಗ್ಯಾಸ್ಕೆಲ್ ಪದವಿ ಪಡೆದ ಏಕೈಕ ಭಾರತೀಯ ಡಾ.ಮಚ್ಚೇರಿ ಎಸ್.ಕೇಶವನ್ ಮಚ್ಚೇರಿ ಗ್ರಾಮಕ್ಕೆ ಖ್ಯಾತಿ ತಂದಿತ್ತರು. ಮಹತ್ತರ ಸಾಧನೆಯೊಂದಿಗೆ
ಹುಟ್ಟೂರು ಮಚ್ಚೇರಿ ಗ್ರಾಮಕ್ಕೆ ಮತ್ತಷ್ಟು ದೊಡ್ಡ ಕೀರ್ತಿ ತಂದಿದ್ದಾರೆ ಡಾ.ಸುಹಾಸ್. ಇದು ಚಿಕ್ಕಮಗಳೂರು ಜಿಲ್ಲೆಗೆ ಸಂದ ಕೀರ್ತಿ.7ಕೆಕೆಡಿಯು5. ಡಾ.ಸುಹಾಸ್.