ಸಾರಾಂಶ
-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನುಡಿ ನಮನ ಕಾರ್ಯಕ್ರಮ । ಕಸಾಪ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಕಂಬನಿ
------ಕನ್ನಡಪ್ರಭ ವಾರ್ತೆ, ಬೀದರ್
ಸಾಹಿತ್ಯ ಕ್ಷೇತ್ರ ಯಾವತ್ತೂ ಮಾನವನ ಒಳಿತಿಗಾಗಿ ದುಡಿಯುತ್ತಿರುತ್ತದೆ, ದಿ. ಡಾ.ಜಿ.ಬಿ. ವಿಸಾಜಿ ಅವರು ತಮ್ಮ ಇಡೀ ಜೀವನ ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ನುಡಿದರು.ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಡಾ. ಜಿ.ಬಿ. ವಿಸಾಜಿಯವರ ನುಡಿ-ನಮನ ಕಾರ್ಯಕ್ರಮದಲ್ಲಿ ವಿಸಾಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಅವರದ್ದು ಸಾರ್ಥಕ ಜೀವನ, ಅವರ ಜೀವನದ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವಿಸಾಜಿಯವರು ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಅವರಿಗೆ ಬರೆಯಲು ಪ್ರೇರಣೆ ನೀಡುತ್ತಿದ್ದರು. ಅವರು ತಮ್ಮ ಅನಾರೋಗ್ಯದ ಸಮಯದಲ್ಲೂ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಬಗ್ಗೆ ಚಿಂತಿಸುತ್ತಿದ್ದರೆಂದು ಹೇಳಿದರು.ಡಾ. ವೈಜಿನಾಥ ಭಂಡೆ ಮಾತನಾಡಿ, ವಿಸಾಜಿ ಅವರಲ್ಲಿ ಮಾಂತ್ರಿಕ ಶಕ್ತಿ ಇತ್ತು, ವಿದ್ಯಾರ್ಥಿಗಳಲ್ಲಿರುವ ಕಾವ್ಯ ಶಕ್ತಿಯನ್ನು ಅವರು ಗುರುತಿಸುತ್ತಿದ್ದರು. ಅವರು ಉತ್ತಮ ಉಪನ್ಯಾಸಕರಷ್ಟೇ ಅಲ್ಲದೇ ಆಕರ್ಷಕ ಮಾತುಗಾರರೂ ಆಗಿದ್ದರು, ಭಾಲ್ಕಿ ಮಠದೊಂದಿಗೆ ಅವರ ಅವಿನಾಭಾವ ಸಂಬಂಧವಿತ್ತೆಂದು ಹೇಳಿದರು.
ಪುಣ್ಯವತಿ ವಿಸಾಜಿಯವರು ಭಾವುಕರಾಗಿ ಮಾತನಾಡಿ, ಡಾ. ಜಿ.ಬಿ ವಿಸಾಜಿ ಅವರದ್ದು ಮೃದು ಸ್ವಭಾವ, ವಾತ್ಸಲ್ಯಮಯಿ ಹೃದಯ, ಅವರು ಸಮಾಜ ಮತ್ತು ಸಾಹಿತ್ಯಕ್ಕಾಗಿ ಹೆಚ್ಚು ಸಮಯ ನೀಡುತ್ತಿದ್ದರು ಎಂದು ಹೇಳಿದರು.ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಗಂಧರ್ವ ಸೇನಾ, ಭಾರತಿ ವಸ್ತ್ರದ, ಡಾ. ಬಸವರಾಜ ಬಲ್ಲೂರ್, ರಮೇಶ ಬಿರಾದಾರ, ಶಂಭುಲಿಂಗ ವಾಲದೊಡ್ಡಿ, ಪ್ರೊ. ಎಸ್‌ವಿ ಕಲ್ಮಠ ಅವರು ನುಡಿ ನಮನ ಸಲ್ಲಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಶಿವಕುಮಾರ ಕಟ್ಟೆ ಆಶಯ ನುಡಿಗಳನ್ನಾಡಿದರು. ಉಪಾಧ್ಯಕ್ಷ ಬಾಬುರಾವ್ ದಾನಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಟಿ.ಎಂ ಮಚ್ಛೆ ವಂದಿಸಿದರೆ ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ, ತಾಲೂಕು ಕಸಾಪ ಅಧ್ಯಕ್ಷ ಎಂಎಸ್ ಮನೋಹರ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ್, ನಟ, ನಿರ್ಮಾಪಕ ಬಿ.ಜೆ ವಿಷ್ಣುಕಾಂತ, ರೇವಣಪ್ಪ ಮೂಲಗೆ, ವೀರಭದ್ರಪ್ಪ ಉಪ್ಪಿನ್, ಜಯದೇವಿ ಯದಲಾಪುರೆ, ಕಲ್ಯಾಣರಾವ್ ಚಳಕಾಪುರೆ, ರಾಣಿ ಸತ್ಯಮೂರ್ತಿ, ಡಾ. ಈಶ್ವರಯ್ಯ ಕೋಡಂಬಲ್, ವಿರೂಪಾಕ್ಷ ದೇವರು, ಓಂಕಾರ ಪಾಟೀಲ್, ಡಾ. ರಾಮಚಂದ್ರ ಗಣಾಪುರ, ಡಾ. ಧನರಾಜ ತುಡಮೆ, ಜಗನ್ನಾಥ ಕಮಲಾಪುರೆ, ಸಂತೋಷ ಚೆಲುವಾ, ಕೆ. ಸತ್ಯಮೂರ್ತಿ ಉಪಸ್ಥಿತರಿದ್ದರು.
----ಫೈಲ್ 18ಬಿಡಿ2