ನಾಟಕ ಕಲೆ ಜನಮನ ರಂಜನೆಗೆ ಉತ್ತಮ ಮಾಧ್ಯಮ: ರಾಜಗೋಪಾಲ

| Published : Mar 06 2025, 12:36 AM IST

ನಾಟಕ ಕಲೆ ಜನಮನ ರಂಜನೆಗೆ ಉತ್ತಮ ಮಾಧ್ಯಮ: ರಾಜಗೋಪಾಲ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕ ಕಲೆ ಜನಮನ ರಂಜನೆಗೆ ಉತ್ತಮ ಮಾಧ್ಯಮವಾಗಿದೆ

ಗೋಕರ್ಣ: ನಾಟಕ ಕಲೆ ಜನಮನ ರಂಜನೆಗೆ ಉತ್ತಮ ಮಾಧ್ಯಮವಾಗಿದೆ ಎಂದು ಮಹಾಬಲೇಶ್ವರ ಮಂದಿರದ ಅರ್ಚಕ ರಾಜಗೋಪಾಲ ಅಡಿ ಹೇಳಿದರು.

ಅವರು ಇಲ್ಲಿಯ ಬೆಲೆಹಿತ್ತಲಿನ ಉಮಾಮಹೇಶ್ವರ ನಾಟ್ಯ ಮಂಡಳಿ, ಶಿವಗಂಗಾ ಯುವಕ ಸಂಘ ಹಮ್ಮಿಕೊಂಡಿದ್ದ ನಾಟಕ ಕಾರ್ಯಕ್ರಮದಲ್ಲಿ ಅವರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಾತ್ರಗಳ, ಸಂಭಾಷಣೆ, ಅಭಿನಯ- ಕಲಾವಿದರ ಕಲಾತ್ಮಕ ನುಡಿ-ನಡೆ, ರಂಗ ಸಜ್ಜಿಕೆಗಳೊಂದಿಗೆ ನಾಟಕವು ಭಾರತದಲ್ಲಿ ಪ್ರಾಚೀನ ಶಾಸ್ತ್ರೀಯ ಕಲೆಯಾಗಿ ಪ್ರಸಿದ್ಧವಾಗಿದೆ. ನಾಟ್ಯಕಲೆಗೆ ಭರತಮುನಿ ಬರೆದಿರುವ ನಾಟ್ಯಶಾಸ್ತ್ರವೇ ಮೂಲ. ಸ್ವರ್ಗದಿಂದ ಭೂಮಿಗೆ ಮನುಕುಲದ ಸಲುವಾಗಿ ಧರೆಗಿಳಿದು ಬಂದ ಕಲೆ ಇದು ಎಂಬ ಹೆಗ್ಗಳಿಕೆ ಇದೆ. ಅವತ್ತಿನಿಂದ ಇವತ್ತಿನವರೆಗೂ ಜನಮನ ರಂಜನೆಗೆ ಇದು ಉತ್ತಮ ಮಾಧ್ಯಮದಲ್ಲೊಂದಾಗಿದೆ ಎಂದು ಪುನರುಚ್ಚರಿಸಿದರು.

ನಾಟಕವು ಸರ್ವರಿಗೂ ಪ್ರಿಯವಾದದ್ದು ಎಂದು ಕವಿ ಕಾಳಿದಾಸ ಹೇಳಿದ್ದಾನೆ. ಕರಾವಳಿ ಭಾಗದಲ್ಲಿ ಯಕ್ಷಗಾನ ಹೆಚ್ಚು ಪ್ರಸಿದ್ಧಿ ಆಗಿರುವಂತೆ ಬಯಲುಸೀಮೆ ಪ್ರದೇಶದಲ್ಲಿ ನಾಟಕ ಹೆಚ್ಚು ಪ್ರಸಿದ್ಧವಾಗಿದೆ. ಸರಿಸುಮಾರು ೨೦ ವರ್ಷಗಳಷ್ಟು ಹಿಂದೆ ಹೋದರೆ ಮಹಾಶಿವರಾತ್ರಿ ಸಂದರ್ಭದಲ್ಲಿ ಗೋಕರ್ಣದಲ್ಲಿ ಗದಗ, ಹುಬ್ಬಳ್ಳಿ, ದಾವಣಗೆರೆ ಮುಂತಾದ ಕಡೆಗಳಿಂದ ನಾಟಕ ಕಂಪನಿಗಳು ಟೆಂಟುಗಳನ್ನು ಹಾಕಿ ಸುಮಾರು ಒಂದು ತಿಂಗಳವರೆಗೂ ನಾಟಕ ಪ್ರದರ್ಶನಗಳನ್ನು ಹೌಸ್ ಫುಲ್‌ ಆಗಿ ಪ್ರದರ್ಶನವಾಗುತ್ತಿದ್ದುದನ್ನು ಕಂಡಿದ್ದೇವೆ. ಈಗ ಆಧುನಿಕತೆಯ ಹೆಸರಿನಲ್ಲಿ ಬರುತ್ತಿರುವ ಟಿವಿ ರಿಯಾಲಿಟಿ ಶೋಗಳು ನಾಟಕ ಮುಂತಾದ ಪ್ರಾಚೀನ ಕಲೆಗೆ ಗಂಭೀರ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ನಾಟಕ ಕಲಾವಿದರಿಗೆ ಎಲ್ಲ ಕಲಾ ಪ್ರೇಮಿಗಳು ಹಾಗೂ ದಾನಿಗಳು ಉದಾರ ಪ್ರೋತ್ಸಾಹ ಆರ್ಥಿಕ ನೆರವನ್ನು ನೀಡಿ, ನಾಟಕ ಪುನರುಜ್ಜೀವನಕ್ಕೆ ನೆರವಾಗುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.

ನಾಟಕ ರಚನೆಕಾರ ಕಾರವಾರದ ಪ್ರಶಾಂತ್, ಪ್ರದೀಪ್ ಅಂಬಿಗ, ಸುನೀಲ್ ಅಂಬಿಗ, ಗುರು ಅಂಬಿಗ, ಚಂದ್ರು ಅಂಬಿಗ ಬಾಲಕೃಷ್ಣ ಅಂಬಿಗ, ಸದಾನಂದ ಅಂಬಿಗ ಮುಂತಾದವರು ಉಪಸ್ಥಿತರಿದ್ದರು.