ಕ್ರೀಡೆ ಕೇವಲ ಒಂದು ಆಟವಲ್ಲ ಜೀವನದ ಒಂದು ಭಾಗ ಈ ನಿಟ್ಟಿನಲ್ಲಿ ಶಿರಾ ತಾಲೂಕಿನ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ೩ ರಿಂದ ೫ ಎಕರೆ ವಿಸ್ತೀರ್ಣವುಳ್ಳ ಸುಸಜ್ಜಿತವಾದ ಕ್ರೀಡಾಂಗಣವನ್ನು ನಿರ್ಮಾಣ ಮಾಡುವ ಬಹುದೊಡ್ಡ ಕನಸನ್ನು ಹೊತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಕ್ರೀಡೆ ಕೇವಲ ಒಂದು ಆಟವಲ್ಲ ಜೀವನದ ಒಂದು ಭಾಗ ಈ ನಿಟ್ಟಿನಲ್ಲಿ ಶಿರಾ ತಾಲೂಕಿನ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ೩ ರಿಂದ ೫ ಎಕರೆ ವಿಸ್ತೀರ್ಣವುಳ್ಳ ಸುಸಜ್ಜಿತವಾದ ಕ್ರೀಡಾಂಗಣವನ್ನು ನಿರ್ಮಾಣ ಮಾಡುವ ಬಹುದೊಡ್ಡ ಕನಸನ್ನು ಹೊತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಹೇಳಿದರು. ಅವರು ಗೌಡಗೆರೆ ಹೋಬಳಿಯ ಮದ್ದಕ್ಕನಹಳ್ಳಿ ಗ್ರಾಮದಲ್ಲಿ ಚಿದಾನಂದ್ ಎಂ. ಗೌಡ ಅಭಿಮಾನಿ ಬಳಗದ ವತಿಯಿಂದ ಗ್ರಾಮಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದ್ದ ಸಿಎಂಜಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಿನದಾಗಿ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ತಮ್ಮನ್ನ ತಾವು ಮೈಮರೆತು ಹೆಚ್ಚು ತೊಡಗಿಸಿಕೊಂಡು ಕಲಿಕೆ, ಕ್ರೀಡೆಯಲ್ಲಿ ಆಸಕ್ತಿ ತೋರುವುದನ್ನೇ ಮರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಕರನ್ನು ಎಚ್ಚರಗೊಳಿಸಿ ಕ್ರೀಡೆಯಲ್ಲಿ ಆಸಕ್ತಿ ಹೊಂದುವಂತೆ ಮಾಡುವ ಸಲುವಾಗಿ ಸಿಎಂಜಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲಾಗಿದೆ.

ಶಿರಾ ತಾಲೂಕಿನ ೨೫೦ ಕ್ಕೂ ಹೆಚ್ಚು ಹಳ್ಳಿಗಳಿಂದ ಒಂದೊಂದು ತಂಡವನ್ನು ಆಯ್ಕೆ ಮಾಡಿ ಮೊದಲ ಅಂತವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಇಲ್ಲಿ ವಿಜೇತರಾದ ತಂಡಕ್ಕೆ ಮೊದಲ ಬಹುಮಾನ ೧೧ ಸಾವಿರ, ದ್ವಿತೀಯ ಬಹುಮಾನ ೫೫೦೦ ನಗದು ಜೊತೆ ಆಕರ್ಷಕ ಪಾರಿತೋಷಕ ನೀಡಲಾಗುವುದು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿಜೇತರಾದ ತಂಡಗಳಿಗೆ ಹೋಬಳಿ ಮಟ್ಟದಲ್ಲಿ ಪಂದ್ಯಾವಳಿ ಆಯೋಜಿಸಿ ಇಲ್ಲಿ ವಿಜೇತರಾದ ತಂಡಕ್ಕೆ ಮೊದಲ ಬಹುಮಾನ ೧೫ ಸಾವಿರ, ದ್ವಿತೀಯ ಬಹುಮಾನ ೧೦ ಸಾವಿರ ನಗದು ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು. ಮುಂದುವರೆದು ಹೋಬಳಿ ಮಟ್ಟದಲ್ಲಿ ವಿಜೇತರಾದ ತಂಡಗಳಿಗೆ ತಾಲೂಕು ಮಟ್ಟದಲ್ಲಿ ಪಂದ್ಯಾವಳಿ ಆಯೋಜಿಸಿ ವಿಜೇತರಾದ ತಂಡಕ್ಕೆ ಮೊದಲ ಬಹುಮಾನ ೫೦ ಸಾವಿರ, ದ್ವಿತೀಯ ೨೫ ಸಾವಿರ ಹಾಗೂ ಪಂದ್ಯ ಪುರುಷೋತ್ತಮನಾಗಿ ಆಯ್ಕೆಯಾದ ಒಬ್ಬ ಕ್ರೀಡಾಪಟುಗೆ ೧೦ಸಾವಿರ ನಗದು ಮತ್ತು ಆಕರ್ಷಕ ಪಾರಿತೋಷಕ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಗೌಡಪ್ಪ, ರಂಗನಾಥ್, ಎಚ್.ರಾಜಪ್ಪ , ರಾಮಕೃಷ್ಣಪ್ಪ, ಮೂರ್ತಪ್ಪ, ಚಂದ್ರಮ್ಮ, ದೊಡ್ಡೇಗೌಡ, ಹನುಮಂತರಾಯ ಶಿವಕುಮಾರ್. ಟಿ., ಕುಮಾರ್ ಮೇಸ್ಟ್ರು ಸೀನಪ್ಪ, ಸುಬ್ಬಯ್ಯ ಶಿವಣ್ಣ, ಮದ್ದೇವಳ್ಳಿ ರಾಮಕೃಷ್ಣ, ಚಿಕ್ಕಣ್ಣ ಈರಣ್ಣ ಪಟೇಲ್, ಭಾಸ್ಕರ್, ಸಿದ್ದಪ್ಪ ಕುಮಾರಣ್ಣ, ಶಿವಲಿಂಗಪ್ಪ, ಶಿವು ಸ್ನೇಹಪ್ರಿಯ, ಬಪ್ಪರಾಯಪ್ಪ, ನಾಗರಾಜ್ ಗೌಡ, ಶಿವಕುಮಾರ್ ರಾಮು ಸೇರಿದಂತೆ ಕ್ರೀಡಾಪಟುಗಳು ಗ್ರಾಮಸ್ಥರು ಹಾಜರಿದ್ದರು.