ಸಾರಾಂಶ
ಇಳಕಲ್ಲ: ಬಿಸಿಲಿನಿಂದ ಬಸವಳಿದ ಜನರಿಗೆ ತಂಪು ನೀರು ನೀಡುವ ಸಲುವಾಗಿ ನಗರದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ರಿಯಾಜ ಮಕಾನದಾರ ನೀರಿನ ಅರವಟ್ಟಿಗೆ ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಹಿರಿಯ ಪವಾಡಪ್ಪ ಚಲಾವದಿ ಹೇಳಿದರು.
ಇಳಕಲ್ಲ: ಬಿಸಿಲಿನಿಂದ ಬಸವಳಿದ ಜನರಿಗೆ ತಂಪು ನೀರು ನೀಡುವ ಸಲುವಾಗಿ ನಗರದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ರಿಯಾಜ ಮಕಾನದಾರ ನೀರಿನ ಅರವಟ್ಟಿಗೆ ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಹಿರಿಯ ಪವಾಡಪ್ಪ ಚಲಾವದಿ ಹೇಳಿದರು. ಅವರು ಇಳಕಲ್ಲ ನಗರದ ಬಸ್ ನಿಲ್ದಾಣದಲ್ಲಿ ಸತತ ಆರು ವರ್ಷಗಳಿಂದ ಜನರಿಗೆ ತಂಪು ನೀರು ಪೂರೃಕೆ ಅರವಟಿಗೆಗೆ ಚಾಲನೆ ನೀಡಿ ಮಾತನಾಡಿ, ಜನವರಿಗೆ ಕುಡಿಯಲು ನೀರು ನೀಡುವುದು ಪವಿತ್ರ ಕೆಲಸ ಎಂದು ಹೇಳಿದರು. ಡಾ. ಟಿಪ್ಪು ಸುಲ್ತಾನ ಬಂಡಾರಿ, ಮಹಾಂತೇಶ ಗೋರಜನಾಳ, ಶಿರಸಪ್ಪ ಪತ್ತಾರ ಹಾಗು ಇತರರು ಮಾತನಾಡಿದರು. ಸಯ್ಯದ ಸಿರಾಜ ಖಾಜಿ, ವಲಿ ಮಖಾನದಾರ, ಕಾಶಿಮ ಅಲಿಶಾ ಮಕಾನದಾರ, ಮಹಮ್ಮದ, ಮುರ್ತುಜಾ ಬದಾಮಿ ಹಾಗು ಬಸ್ ನಿಲ್ದಾಣದ ಹೋರಗೆಡೆ ಇರುವ ಎಲ್ಲ ವ್ಯಾಪಾರಸ್ಥರು ಇದ್ದರು.