ತೀವ್ರ ಬರ ಉಂಟಾಗಿದೆ. ಈಗಾಗಲೇ ಸರ್ಕಾರ ಬರಗಾಲ ಘೋಷಣೆ ಮಾಡಿದ್ದು ನಾನಾ ಇಲಾಖೆ ಸಹಯೋಗದಲ್ಲಿ ಬರಗಾಲದ ಸಮೀಕ್ಷೆ, ಬೆಳೆನಷ್ಟದ ವರದಿ ಸಿದ್ದತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪೂವಿತ್ ಎಸ್. ಹೇಳಿದರು.

ಲಿಂಗಸುಗೂರು: ತೀವ್ರ ಬರ ಉಂಟಾಗಿದೆ. ಈಗಾಗಲೇ ಸರ್ಕಾರ ಬರಗಾಲ ಘೋಷಣೆ ಮಾಡಿದ್ದು ನಾನಾ ಇಲಾಖೆ ಸಹಯೋಗದಲ್ಲಿ ಬರಗಾಲದ ಸಮೀಕ್ಷೆ, ಬೆಳೆನಷ್ಟದ ವರದಿ ಸಿದ್ದತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪೂವಿತ್ ಎಸ್. ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಸೇವಾ ಆಂದೋಲನದ ಸದುಪಯೋಗಕ್ಕೆ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಮಾತ ನಾಡಿ, ಮುಖ್ಯಮಂತ್ರಿಗಳು ಆಡಳಿತ ಜನರ ಹತ್ತಿರ ತೆಗೆದುಕೊಂಡು ಹೋಗಲು ಪ್ರಜಾಸೇವಾ ಆಂದೋಲನ ಆರಂಭಿಸಿದ್ದಾರೆ. ಇಂದಿನ ಆಂದೋಲನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಜಯ ಧರ್ಮಸಿಂಗ್ ಭಾಗವಹಿಸಬೇಕಿತ್ತು ಆದರೆ ಮಂಗಳೂರಿನಲ್ಲಿ ಕ್ಯಾಬಿನೆಟ್ ನಡೆದಿರುವುದರಿಂದ ಅವರು ಸಭೆ ಬಂದಿಲ್ಲ. ಆದರೂ ಅಧಿಕಾರಿಗಳು ಜನರ ಸಮಸ್ಯೆಗಳನ್ನು ದಾಖಲಿಸಿಕೊಂಡು ಪರಿಹಾರ ನೀಡುತ್ತಾರೆ. ಸಾಮಾನ್ಯ ಜನರ ಮೇಲಿರುವ ಬದ್ಧತೆಗೆ ಪ್ರಜಾಸೇವಾ ಆಂದೋಲನ ಸಾಕ್ಷಿಯಾಗಿದೆ. ಸರ್ಕಾರ ಈ ಸೇವೆ ಸಮರ್ಪಕವಾಗಿ ಬಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಬಜೆಟ್ ಇಲ್ಲ ಎನ್ನುವ ಇಒ, ಪಿಡಿಒಗಳು : ಬರಗಾಲದಿಂದ ಜನರು ಈಗಾಗಲೇ ತೊಂದರೆ ಅನುಭವಿಸುತ್ತಿದ್ದಾರೆ ಆದರೆ ಗ್ರಾಮ ಪಂಚಾಯ್ತಿಗಳ ಪಿಡಿಒ ತಾಲೂಕ ಪಂಚಾಯ್ತಿ ಇಒರವರಿಗೆ ಸಮಸ್ಯೆ ಗಮನಕ್ಕೆ ತಂದರೆ ಬಜೆಟ್ ಇಲ್ಲಾ ಎಂದು ಹೇಳುತ್ತಾರೆ. ಕುಡಿಯುವ ನೀರಿಗೆ ಬಜೆಟ್ ಇದೆಯೋ ಇಲ್ಲಾ ಎನ್ನುವುದು ಸ್ಪಷ್ಟಪಡಿಸಬೇಕು ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಪ್ರಸಾದರೆಡ್ಡಿ ಜಿಲ್ಲಾಧಿಕಾರಿಗಳ ಮುಂದೆ ಆಕ್ರೋಶ ಹೊರ ಹಾಕಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣಕಾಸಿನ ತೊಂದರೆ ಇಲ್ಲಾ ಯಾವ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆ ಇದೆ ಹೇಳಿ ಇಲ್ಲೇ ಸಿಇಒ ಅವರು ಇದ್ದಾರೆ ಎಂದು ಸಮಜಾಯಿಷಿದರು.

---

19ಕೆಪಿಎಲ್‌ಎನ್‌ಜಿ02 : ಲಿಂಗಸುಗೂರಲ್ಲಿ ಪ್ರಜಾಸೇವಾ ಆಂದೋಲನ ಸಮಾರಂಭ ಜಿಲ್ಲಾಧಿಕಾರಿ ಪೂವಿತ್ ಎಸ್ ರವರು ಕೃಷಿ ಇಲಾಖೆ ಫಲಾನುಭವಿಗೆ ಕೃಷಿ ಪರಿಕರಗಳ ವಿತರಣೆ ಮಾಡಿದರು.