ಸಾರಾಂಶ
ಅಪರಾಧ ತಡೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಾದ ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧಿಕ್ಷಕ ಜಗದೀಶ ಎಚ್.ಎಸ್. ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿ ಸಮಾಜದಲ್ಲಿ ಯುವಪೀಳಿಗೆ ದಾರಿ ತಪ್ಪುತ್ತಿರುವುದು ದುರಂತ ಎಂದರು.
ಕನ್ನಡಪ್ರಭ ವಾರ್ತೆ ಇಂಡಿ
ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿ ಸಮಾಜದಲ್ಲಿ ಯುವಪೀಳಿಗೆ ದಾರಿ ತಪ್ಪುತ್ತಿರುವುದು ದುರಂತ ಎಂದು ಪೊಲೀಸ್ ಉಪಾಧಿಕ್ಷಕ ಜಗದೀಶ ಎಚ್.ಎಸ್. ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್, ಐಕ್ಯೂಎಸಿ ಘಟಕ ಮತ್ತು ಇಂಡಿ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಪರಾಧ ತಡೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ.ಆರ್.ಎಚ್. ರಮೇಶ ಮಾತನಾಡಿ, ಯುವಕರು ದೇಶ ಕಟ್ಟವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ಆದ್ದರಿಂದ ಇಂದಿನ ಪೀಳಿಗೆಗೆ ಆರೋಗ್ಯ ಬಹುಮುಖ್ಯ ಎಂದರು.
ವೇದಿಕೆಯಲ್ಲಿ ಇಂಡಿ ಪೊಲೀಸ್ ಠಾಣೆ ಪಿ.ಎಸ್.ಐ ರೇಣುಕ ಹಳ್ಳಿ, ಉದ್ಯೋಗ ಭರವಶೆ ಕೋಶದ ಸಂಯೋಜಕ ತಿಪ್ಪಣ್ಣ ಎಸ್. ವಾಗ್ದಾಳ, ಐಕ್ಯೂಎಸಿ ಸಂಯೋಜಕ ಡಾ. ಶೀರಿನೂಸುಲ್ತಾನ್ ಇನಾಂದಾರ, ಪ್ರೊ.ಕಿರಣ ರೇವಣಕರ, ಪ್ರೊ.ರಾಜಲಕ್ಷ್ಮಿ ಆರ್. ವೇದಿಕೆಯಲ್ಲಿದ್ದರು.ಕವೀಂದ್ರಕುಮಾರ ಚಾಬುಕಸ್ವಾರ ಸ್ವಾಗತಿಸಿದರು. ಸತೀಶಕುಮಾರ ಚುಂಚೂರ ವಂದಿಸಿದರು. ಆಕಾಶ ಪಾಟೀಲ ನಿರೂಪಿಸಿದರು.