ಸಾಣಿಕೆರೆಯಲ್ಲಿ ಒಣ ಬೇಸಾಯ ಕೃಷಿ ಪದ್ಧತಿಸಂಶೋಧನ ಕೇಂದ್ರ ಪ್ರಾರಂಭಕ್ಕೆ ಮನವಿ

| Published : Mar 02 2024, 01:47 AM IST

ಸಾಣಿಕೆರೆಯಲ್ಲಿ ಒಣ ಬೇಸಾಯ ಕೃಷಿ ಪದ್ಧತಿಸಂಶೋಧನ ಕೇಂದ್ರ ಪ್ರಾರಂಭಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಣಿಕೆರೆ ಗ್ರಾಮದ ರಿ.ಸರ್ವೆ ನಂ.೪೮ರ ಒಟ್ಟು ೯೫.೧೩ ಎಕರೆ ಸರ್ಕಾರಿ ಗೋಮಾಳವಿದ್ದು, ಆ ಪೈಕಿ ೯೨ ಎಕರೆ ಸರ್ಕಾರಿ ಗೋಮಾಳದಲ್ಲಿ ಒಣ ಬೇಸಾಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯ ಬಲವರ್ಧನೆಗೊಳಿಸಬೇಕೆಂದು ವಿಧಾನಸೌಧ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಕೋರಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಬಹಳ ವರ್ಷಗಳಿಂದ ಈ ಭಾಗದ ರೈತರ ಸರ್ವತೋಮುಖ ಅಭಿವೃದ್ಧಿ ಹಾಗೂ ಎಸ್ಸಿ, ಎಸ್ಟಿ ಜನಾಂಗದ ರೈತರ ಅಭಿವೃದ್ಧಿ ಹಿನ್ನೆಲೆಯಲ್ಲಿ ಒಣ ಬೇಸಾಯ ಕೃಷಿ ಪದ್ಧತಿಯನ್ನು ಆರಂಭಿಸಲು ಜಮೀನು ಮಂಜೂರಾಗಿದ್ದು, ಕೃಷಿ ಸಂಶೋಧನಾ ಕೇಂದ್ರವನ್ನು ತಾಲ್ಲೂಕಿನ ಸಾಣಿಕೆರೆ ಗ್ರಾಮದಲ್ಲಿ ಪ್ರಾರಂಭಿಸುವಂತೆ ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ವಿಧಾನಸೌಧ ಅಧಿವೇಶನದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡರವರನ್ನು ಹಣ ಬಿಡುಗಡೆ ಮಾಡಿಸಿಕೊಡುವಂತೆ ವಿನಂತಿಸಿದ್ದಾರೆ.

ವಿಧಾನಸೌಧ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ೭೩ರ ಅಡಿಯಲ್ಲಿ ಶಾಸಕರು ಈ ಬಗ್ಗೆ ಕೃಷಿ ಸಚಿವರನ್ನು ಪ್ರಶ್ನಿಸಿ, ಈ ಹಿಂದೆಯೇ ಸಾಣೀಕೆರೆ ಗ್ರಾಮದ ರಿ.ಸರ್ವೆ ನಂ. ೪೮ರ ಒಟ್ಟು ೯೫.೧೩ ಎಕರೆ ಸರ್ಕಾರಿ ಗೋಮಾಳವಿದ್ದು, ಆ ಪೈಕಿ ೯೨ ಎಕರೆ ಸರ್ಕಾರಿ ಗೋಮಾಳದಲ್ಲಿ ಒಣ ಬೇಸಾಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯ ಬಲವರ್ಧನೆ ಗೊಳಿಸಬೇಕೆಂದು ಕೋರಿದರು. ಈ ಹಿನ್ನೆಲೆಯಲ್ಲಿ ಅನೇಕ ಸಂಶೋಧನೆಗಳನ್ನು ಒಣಬೇಸಾಯ ಕೃಷಿ ಪದ್ದತಿಯಲ್ಲಿ ನಡೆಸಲು ಅನುಕೂಲ ವಾಗುವಂತೆ ಸರ್ಕಾರ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅನುಮತಿ ನೀಡಬೇಕಲ್ಲದೆ, ಸರ್ಕಾರ ೯೨ ಎಕರೆ ಜಮೀನನ್ನು ಕೃಷಿ ವಿಶ್ವವಿದ್ಯಾಲಯಕ್ಕೂ ಹಸ್ತಾಂತರಿ ಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಶಾಸಕ ಟಿ.ರಘುಮೂರ್ತಿಯವರ ಒಣಬೇಸಾಯ ಪದ್ಧತಿ ಬಲವರ್ಧನೆ ಹಾಗೂ ಕೃಷಿ ಸಂಶೋಧನಾ ಕೇಂದ್ರಕ್ಕೆ ಜಮೀನು ಮಂಜೂರು ಮಾಡಿದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಕ್ಕೆ ರೈತರ ಪರವಾಗಿ ಶಾಸಕರಿಗೆ ಇರುವ ಆಸಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿ, ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಕುರಿತಂತೆ ಸರ್ಕಾರ ಮಟ್ಟದಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಪರಿಣಿತ ತಂಡವನ್ನು ರಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದು, ಅವರು ಸಹ ಸದರಿ ೯೨ ಎಕರೆ ಜಮೀನನ್ನು ವಿಶೇಷ ಶೇ.೫೦ರ ಸಬ್ಸಿಡಿಯಡಿಯಲ್ಲಿ ಒಟ್ಟು ೨೭ ಕೋಟಿ ರು. ಹಣ ನೀಡುವಂತೆ ಶಿಫಾರಸ್ಸು ಮಾಡಿದ್ದು, ಈ ಸಂಪೂರ್ಣ ಮಾಹಿತಿ ಪರಿಣಿತ ತಂಡದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.