ಸಾರಾಂಶ
ಹಿರೇಕೆರೂರು: ಕಾಂಗ್ರೆಸ್ ಪಕ್ಷ ಐತಿಹಾಸಿಕವಾದದ್ದು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಬರಗಾಲ ಪರಿಸ್ಥಿತಿ ಇದ್ದರೂ ರಾಜ್ಯದ ಜನತೆ ನಿಶ್ಚಿಂತೆಯಾಗಿ ಬದುಕು ಸಾಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು. ಸದುಪಯೋಗ ಪಡಿಸಿಕೊಳ್ಳುತ್ತೀರುವುದು ಕಾಣಬಹುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರ ಮಾತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿಯವರ ಸುಳ್ಳು ಭರವಸೆಗಳನ್ನು ದೇಶದ ಜನತೆ ಅರಿತಿದ್ದಾರೆ. ಆದರೆ ಕಾಂಗ್ರೆಸ್ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿ ಜನರಲ್ಲಿ ಮನೆ ಮಾಡಿದೆ. ಹೀಗಾಗಿ ಜನರ ಬವಣೆ ಅರಿತವರು ಮಾತ್ರ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ. ಅಂತಹ ಯುವ ನಾಯಕರಲ್ಲಿ ಆನಂದ ಒಬ್ಬರು. ವಿಧಾನಸಭಾ ಚುನಾವಣೆಯಲ್ಲಿ ನನಗೆ ಹೇಗೆ ಬೆಂಬಲ ನೀಡಿ ನನ್ನನ್ನು ಹೇಗೆ ಗೆಲ್ಲಿಸಿದಿರೋ ಹಾಗೇ ಈಗ ಆನಂದ ಅವರಿಗೆ ಮತ ನೀಡುವ ಮೂಲಕ ಒಬ್ಬ ಯುವ ನಾಯಕನ್ನು ನಿಮ್ಮ ಕ್ಷೇತ್ರದ ಜನತೆಯ ಸೇವೆಗೆ ಅಣಿಗೊಳಿಸೋಣ ಎಂದರು.ಸಂದರ್ಭದಲ್ಲಿ ಹಿರೇಕೆರೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮಡಿವಾಳರ, ಷಣ್ಮುಖಯ್ಯ ಮಳೆಮಠ, ಮಹೇಶ್ ಗುಬ್ಬಿ, ಮಲ್ಲಿಕಾರ್ಜುನ ಬುರುಡಿಕಟ್ಟಿ, ರಮೇಶ್ ಬಂಡಿವಡ್ಡರ್, ಶಂಭು ಬರಮಣ್ಣನವರ, ಶಿವರಾಜ ಹರಿಜನ, ದಾದಾಪಿರ್ ರಾಣಿಬೆನ್ನೂರು, ಸಿದ್ದಣ್ಣ ಹಂಪಣನವರ ಹಾಗೂ ಸಾತೇನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಇದ್ದರು,