ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಸಂಭ್ರಮ 50ರ ಸ್ವಾತಂತ್ರ್ಯೋತ್ಸವ ಅಂಗವಾಗಿ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಅತಿದೊಡ್ಡ ಗ್ರಾಹಕ ಮೇಳವು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 15 ರಿಂದ 11 ರಿಂದ ರಾತ್ರಿ 9.30 ರವರೆಗೆ ತೆರೆದಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.ಸೈಮನ್ ಎಕ್ಸಿಬಿಟರ್ಸ್ನಿರ್ದೇಶಕ ಎಂ.ಎಸ್. ನಾಗಚಂದ್ರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಕ್ಸ್ಪೋ ಸಮಯವನ್ನು ಸಂಜೆ 4 ರಿಂದ ರಾತ್ರಿ 9.30ಕ್ಕೆ ಬದಲಾಗಿ ಬೆಳಗ್ಗೆ 11 ರಿಂದ ರಾತ್ರಿ 9.30 ರವರೆಗೆ ಬದಲಾಯಿಸಲು ನಿರ್ಧರಿಸಿದ್ದೇವೆ. ಈ ಬದಲಾವಣೆಯು ಸ್ವಾತಂತ್ರ್ಯ ದಿನಕ್ಕೆ ಮಾತ್ರ ಅನ್ವಯಿಸುತ್ತದೆ. ಉಳಿದ ದಿನಗಳಲ್ಲಿ ಎಕ್ಸ್ಪೋ ಸಾಮಾನ್ಯ ಸಮಯದಲ್ಲಿ ಅಂದರೆ ಸಂಜೆ 4 ರಿಂದ ರಾತ್ರಿ 9.30ರ ನಡುವೆ ತೆರೆದಿರುತ್ತದೆ ಎಂದು ಹೇಳಿದರು.ನಾಲ್ಕು ಪರಿಕಲ್ಪನೆ ಆಧರಿಸಿದ ಎಕ್ಸ್ಪೋ ನಡೆಸಲಾಗುತ್ತಿದೆ. ರೋಬೋಟಿಕ್ ಬಟರ್ಫ್ಲೈ, ರೋಬೋಟಿಕ್ ಅನಿಮಲ್ ಕಿಂಗ್ ಡಮ್, ಹಿಮಾಲಯನ್ ಅನಿಮಲ್ಸ್ ಮತ್ತು ಅವತಾರ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಎಕ್ಸ್ಪೋದಲ್ಲಿ ಗೃಹೋಪಯೋಗಿ ವಸ್ತುಗಳು, ಡ್ರೆಸ್ ಮೆಟೀರಿಯಲ್ ಗಳು, ರೆಡಿಮೇಡ್ ಬಟ್ಟೆ, ಸೀರೆ, ಕುರ್ತಾ ಪೈಜಾಮ, ಶರ್ಟ್ಮತ್ತು ಸೂಟಿಂಗ್ ಲಭ್ಯವಿವೆ. ಹಲವು ರೀತಿಯ ಮಸಾಲಾ ಪುಡಿಗಳು, ಜೇನುತುಪ್ಪ, ಚಾಕೊಲೇಟ್ಗಳು, ಚಟ್ನಿ ಪುಡಿ, ಉಪ್ಪಿನಕಾಯಿ, ಒಣ ಹಣ್ಣುಗಳು ಸಹ ಮಾರಾಟಕ್ಕೆ ಇವೆ.ಜು. 25 ರಂದು ಆರಂಭವಾದ ಒಂದು ತಿಂಗಳ ಕರ್ನಾಟಕ ಸಂಭ್ರಮ 50 ಗ್ರಾಹಕರ ಮೇಳವು ಆ. 25 ರಂದು ಮುಕ್ತಾಯಗೊಳ್ಳಲಿದೆ.