ಜಿಲ್ಲೆಯಾದ್ಯಂತ ಸಡಗರದ ದಸರಾ ಉತ್ಸವ

| Published : Oct 13 2024, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ) ನಾಡಹಬ್ಬ ದಸರಾ ಉತ್ಸವ ನಿಮಿತ್ತ ಘಟಸ್ಥಾಪನೆ, ದೇವಿ ಆರಾಧನೆ, ಮೌನಾನುಷ್ಠಾನ, ದೇವಿ ಪುರಾಣ, ಅಲಂಕಾರಿಕ ಪೂಜೆಗಳು, ವೃತಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಕಲ್ಲಟ್ಟಿ ಗಲ್ಲಿ ಆದಿಶಕ್ತಿ ತರುಣ ಮಂಡಳಿಯವರು ಪ್ರತಿಷ್ಠಾಪಿಸಿದ ಆದಿಶಕ್ತಿದೇವಿ ಮೂರ್ತಿ ಸಂಭ್ರಮ ೨೬ನೇ ವರ್ಷದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಿದವು. ರಂಗೋಲಿ ಸ್ಪರ್ಧೆ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗುವ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಹೋಮ, ಉಡಿತುಂಬುವ ಮಹಾಪ್ರಸಾದ ವಿತರಣೆ, ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ನಾಡಹಬ್ಬ ದಸರಾ ಉತ್ಸವ ನಿಮಿತ್ತ ಘಟಸ್ಥಾಪನೆ, ದೇವಿ ಆರಾಧನೆ, ಮೌನಾನುಷ್ಠಾನ, ದೇವಿ ಪುರಾಣ, ಅಲಂಕಾರಿಕ ಪೂಜೆಗಳು, ವೃತಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಕಲ್ಲಟ್ಟಿ ಗಲ್ಲಿ ಆದಿಶಕ್ತಿ ತರುಣ ಮಂಡಳಿಯವರು ಪ್ರತಿಷ್ಠಾಪಿಸಿದ ಆದಿಶಕ್ತಿದೇವಿ ಮೂರ್ತಿ ಸಂಭ್ರಮ ೨೬ನೇ ವರ್ಷದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಿದವು. ರಂಗೋಲಿ ಸ್ಪರ್ಧೆ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗುವ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಹೋಮ, ಉಡಿತುಂಬುವ ಮಹಾಪ್ರಸಾದ ವಿತರಣೆ, ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಹೋಮ-ಯಜ್ಞ, ದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಸ್ಥಳೀಯ ಗೌರಿ-ಗಣೇಶ ಮಹಿಳಾ ಸಂಘದವರು ಹಮ್ಮಿಕೊಂಡಿದ್ದರು. ನೂರಾರು ಮುತ್ತೈದೆಯರು ಭಾಗಿಯಾಗಿದ್ದರು. ಭೋಜನದ ಮಹಾಪ್ರಸಾದ ಜರುಗಿತು.ಆದರ್ಶ ದಂಪತಿ ಕಾರ್ಯಕ್ರಮ, ಸಂಜೆ ಹರದೇಸಿ-ನಾಗೇಸಿ ಡೊಳ್ಳಿನ ಪದಗಳು ಜರುಗಿ ಕಲಾಪ್ರೇಮಿಗಳ ಗಮನ ಸೆಳೆದವು. ಶನಿವಾರ ವಿಸರ್ಜನಾ ಕಾರ್ಯಕ್ರಮದೊಂದಿಗೆ ೨೬ನೇ ವರ್ಷದ ಕಾರ್ಯಕ್ರಮಗಳು ಸಂಪನ್ನಗೊಂಡವು.---------