ಮೋದಿ ಕೈ ಬಲಪಡಿಸುವುದು ಕಾರ್ಯಕರ್ತರ ಕರ್ತವ್ಯ: ಉಮೇಶ್ ಕಾರಜೋಳ

| Published : Apr 15 2024, 01:25 AM IST / Updated: Apr 15 2024, 08:40 AM IST

ಮೋದಿ ಕೈ ಬಲಪಡಿಸುವುದು ಕಾರ್ಯಕರ್ತರ ಕರ್ತವ್ಯ: ಉಮೇಶ್ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರ ಕೈ ಬಲಪಡಿಸುವುದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.

ಹಿರಿಯೂರು: ನರೇಂದ್ರ ಮೋದಿ ಅವರ ಕೈ ಬಲಪಡಿಸುವುದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು. ತಾಲೂಕಿನ ಎಂಡಿ ಕೋಟೆ ಪಂಚಾಯಿತಿ ವ್ಯಾಪ್ತಿಯ ಮದ್ದನಕುಂಟೆ, ಅಡವಿ ರಾಮಜೋಗಿಹಳ್ಳಿ, ಬಸಪ್ಪನಮಾಳಿಗೆ, ಸೊಂಡೆಕೆರೆ ಮುಂತಾದ ಗ್ರಾಮಗಳಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರ ಪರವಾಗಿ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಪಕ್ಷ ಗೆದ್ದು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ಎಲ್ಲಾ ಕಾರ್ಯಕರ್ತರ ಸಂಕಲ್ಪವಾಗಿದೆ. ದೇಶದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿರುವ‌ ಬಿಜೆಪಿ ಸಾರಥ್ಯದಲ್ಲಿ ದೇಶ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಈ ಅಭಿವೃದ್ಧಿ ಪರ್ವ ಮುಂದುವರೆಯಲು‌ ಮತ್ತೊಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಬೇಕಿದೆ. ಕಳೆದ 10 ವರ್ಷದ ಅವಧಿಯಲ್ಲಿ ದೇಶದಲ್ಲಿ ಗಮನಾರ್ಹ ‌ಬದಲಾವಣೆಗಳಾಗಿವೆ. ಜನತೆ ಮೋದಿ ಅವರ ಸ್ವಾಭಿಮಾನ, ಸ್ವಚ್ಛ ಸುಂದರವಾದ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ.

 ಸದಾ ಕೀಟಲೆ ಮಾಡುತ್ತಿದ್ದ ಪಾಕಿಸ್ತಾನ್‌ಗೆ ತಕ್ಕ ಉತ್ತರ ನೀಡಿದ್ದು, ಕಾಶ್ಮೀರ ಪ್ರತ್ಯೇಕ ಸ್ಥಾನಮಾನ ರದ್ದುಗೊಳಿಸಿ ಅಲ್ಲಿ ಅಭಿವೃದ್ಧಿ ಶಕೆ‌ ಆರಂಭಿಸಿದ್ದಾರೆ. ದೇಶಾಭಿಮಾನದ ಆಡಳಿತ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಅದೇ ತೆರನಾಗಿ ಉಜ್ವಲ ಯೋಜನೆ, ಜನಧನ್, ಕಪ್ಪು ಹಣದ ವಿರದ್ಧ ಸಮರ, ಡಿಜಿಟಲ್ ಇಂಡಿಯಾ, ಮುದ್ರಾ ಯೋಜನೆ, ಕಿಸಾನ್ ಸಮ್ಮಾನ್ ಹೀಗೆ ರೈತ ಹಾಗೂ ಶ್ರೀಸಾಮಾನ್ಯನ ಬದುಕು ಸುಧಾರಿಸುವ ಅನೇಕ ಯೋಜನೆಗಳ ಜಾರಿ ಮೂಲಕ ಇಡೀ ದೇಶದ ಜನತೆಯ ಮನ‌ ಗೆದ್ದಿದ್ದಾರೆ. ಅಷ್ಟೇ ಏಕೆ ಎದುರಾಳಿ‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಬಿಜೆಪಿ ‌ನಾಲ್ಕು ನೂರಕ್ಕೂ ಹೆಚ್ಚು ‌ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದಾರೆ. ಮೋದಿಜಿ ಅವರ ಸ್ವಚ್ಛ ಆಡಳಿತ ವಿರೋಧಿಗಳ ನಿದ್ದೆಗೆಡಿಸಿದೆ.

 ಈ ಹಿಂದೆ ಯುಪಿಎ ಅವಧಿಯಲ್ಲಿ ಹಗರಣಗಳ ಸುದ್ದಿ ಕೇಳಿ ಬರುತ್ತಿತ್ತು. ಈಗ ಕೇವಲ ಅಭಿವೃದ್ಧಿ ಎಂಬ ಪದವೇ ಕೇಳಿ ಬರುತ್ತಿದೆ. ಆದ್ದರಿಂದ ಈ ಬಾರಿಯೂ ಸಹ ಮತದಾರರು ಮೋದಿಯವರ ಆಡಳಿತ ಮುಂದುವರಿಕೆಗೆ ಮತ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಮಣ್ಣ, ರಘು, ಜನಾರ್ಧನ್, ಶಿವಣ್ಣ, ಸಂದೀಪ್, ಪರಮೇಶ್, ಆದರ್ಶ ಯಾದವ್ ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಹಾಜರಿದ್ದರು.