ಸಾರಾಂಶ
ಸರ್ಕಾರದ ಘೋಷಣೆಯಂತೆ ಆಸ್ತಿಯನ್ನು ಬೇರೆಯಾರಿಗೂ ಮಾರಾಟ ಮಾಡಲಾಗದಂತೆ ಕಾವೇರಿ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮರಾಜ ಕ್ಷೇತ್ರದ್ದಲಿ ಇ-ಖಾತಾ ಅಭಿಯಾನಕ್ಕೆ ಶಾಸಕ ಕೆ. ಹರೀಶ್ ಗೌಡ ಚಾಲನೆ ನೀಡಿದರು.ಒಂಟಿಕೊಪ್ಪಲಿನ ಶ್ರೀ ರಾಮಮಂದಿರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು, ಫಲಾನುಭವಿಗಳಿಗೆ ಇ-ಖಾತಾ ಪತ್ರಗಳನ್ನು ನೀಡುವ ಮೂಲಕ ಶುಭ ಕೋರಿದರು.ನಂತರ ಶಾಸಕರು ಮಾತನಾಡಿ, ಸರ್ಕಾರದ ಘೋಷಣೆಯಂತೆ ಆಸ್ತಿಯನ್ನು ಬೇರೆಯಾರಿಗೂ ಮಾರಾಟ ಮಾಡಲಾಗದಂತೆ ಕಾವೇರಿ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ನಿಮ್ಮ ಆಸ್ತಿ ಸುರಕ್ಷತೆಗಾಗಿ ಎಂದು ಹೇಳಿದರು.ಪಾಲಿಕೆಗೆ ಹೋದರೆ ಲಂಚ ಕೇಳುತ್ತಾರೆ ಎಂದು ಕೆಲವರು ಹೇಳಿದರು. ಮಧ್ಯವರ್ತಿಗಳ ಮೂಲಕ ಖಾತೆ ಮಾಡಿಸಿಕೊಳ್ಳಲು ಯಾರು ಮುಂದಾಗುತ್ತಾರೆ ಅವರು ಹಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ನೇರವಾಗಿ ಹೋಗಿ ದಾಖಲೆ ಸಹಿತ ಅರ್ಜಿ ಸಲ್ಲಿಸಿದರೆ ಏಳು ದಿನಕ್ಕೆ ಇ-ಖಾತಾ ನೀಡಲಾಗುತ್ತದೆ. ಇನ್ನೂ ಸಾಕಷ್ಟು ಜನ ಆಸ್ತಿವಂತರು ಇ-ಖಾತೆ ಪಡೆಯಲು ಅರ್ಜಿ ಸಲ್ಲಿಸಿಲ್ಲ. ಕೂಡಲೇ ಸಾರ್ವಜನಿಕರು ಅರ್ಜಿ ಸಲ್ಲಿಸಿ, ನಿಮ್ಮ ಆಸ್ತಿ ಸುರಕ್ಷತೆಯೇ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.ಪಾಲಿಕೆ ಮಾಜಿ ಸದಸ್ಯೆ ಭಾಗ್ಯ, ವಲಯ ಕಚೇರಿ-6 ಆಯುಕ್ತೆ ಪ್ರತಿಭಾ, ಮುಖಂಡರಾದ ನಾಗಭೂಷಣ್, ಸುಶೀಲಾ, ರವಿ, ಗೋಪಿನಾಥ್ ಮೊದಲಾದವರು ಇದ್ದರು.