ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿದ್ಯುತ್ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಹಲವಾರು ಸಮಸ್ಯೆಗಳು ಪರಿಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ಆಗ್ರಹಿಸಿದರು.ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಇಂಧನ, ಕಂದಾಯ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿ, ಮಾತನಾಡಿ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಪಟ್ಟಿಮಾಡಿ ವಿವರಿಸಿ ಪರಿಹರಿಸಲು ಕೋರಿದ್ದಾರೆ. ಬೇಡಿಕೆಗಳು :ಜೆಸ್ಕಾಂ ನಿರ್ಲಕ್ಷ್ಯದಿಂದ ಯಾದಗಿರಿ ಜಿಲ್ಲೆಯ ಮಾತಾಮಾಣಿಕೇಶ್ವರ ನಗರದಲ್ಲಿ ವಡಿಗೇರಿ ತಾಲೂಕಿನ ಬಬಲಾದ ಗ್ರಾಮದ ನಿವಾಸಿ ಖಾಜಾ ಪಟೇಲ್ ಬೈಕ್ ಮೇಲೆ ತೆರಳುತ್ತಿದ್ದಾಗ ವಿದ್ಯುತ್ ಹೈಟೆನ್ಷನ್ ವೈರ್ (ತಂತಿ) ತುಂಡರಸಿ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರುಪಾಯಿಗಳ ಪರಿಹಾರ ಹಣವನ್ನು ನೀಡಬೇಕು ಮತ್ತು ನಿರ್ಲಕ್ಷ್ಯ ವಹಿಸಿದ ಇಲಾಖೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು.ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕೊಟ್ಟಾಗಿನಿಂದ ಇದ್ದಂತಹ ಹಳೆಯದಾದ ಕಂಬ ಮತ್ತು ವೈರ್ ತಂತಿಗಳು ಇದ್ದು ಇಲ್ಲಿಯತನಕ ಯಾವುದೇ ಬದಲಾವಣೆ ಮಾಡದೆ ಇರುವ ಕಾರಣ ಹೆಚ್ಚಾಗಿ ನಮ್ಮ ಜಿಲ್ಲೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸುತ್ತಿವೆ, ಎಲ್ಲ ಕಡೆ ಕಂಬಗಳು ಮತ್ತು ವೈರ್ ತಂತಿಗಳು ಸಂಪೂರ್ಣ ಬದಲಾಯಿಸಬೇಕು.ಅಕಾಲಿಕ ಮಳೆ ಗಾಳಿಯಿಂದ, ಆಲೀಕಲ್ಲು ಮಳೆಯಿಂದ ಯಾದಗಿರಿ ಜಿಲ್ಲೆಯಲ್ಲಿ ಭತ್ತ, ಸಜ್ಜೆ, ಶೆಂಗಾ, ಮೆಕ್ಕೆಜೋಳಾ , ಮುಂತಾದ ಹಿಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು ತುರ್ತಾಗಿ ಬೆಳೆ ಸಮೀಕ್ಷೆ ಮಾಡಿಸಿ ಪ್ರತಿ ಎಕರೆಗೆ 30 ಸಾವಿರ ರುಪಾಯಿಗಳ ಪರಿಹಾರ ಹಣವನ್ನು ನೀಡಬೇಕು, ರೈತರ ಜಮೀನಗಳಿಗೆ ಶಾಶ್ವತವಾಗಿ ಹೋಗಲು ಕಾಲುದಾರಿ, ಬಂಡಿದಾರಿ, ವಹಿವಾಟುದಾರಿ, ಕೆಲವು ಸಮಸ್ಯೆ ಇರುವಂತ ದಾರಿಗಳನ್ನು ಸರ್ಕಾರವೇ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.ರೈತರ ಜಮೀನುಗಳಿಗೆ ನಿರಂತರವಾಗಿ ಹಗಲಿನಲ್ಲಿ 12 ತಾಸು ವಿದ್ಯತ್ ಕೃಷಿ ಪಂಪೆಸೆಟ್‌ಗಳಿಗೆ ನೀಡಬೇಕು ಮತ್ತು ಶೀಘ್ರ ಸಂಪರ್ಕ ಯೋಜನೆ ಮತ್ತು ಅಕ್ರಮ – ಸಕ್ರಮ ಯೋಜನೆಗಳು ಪುನ: ಪ್ರಾರಂಭಿಸಬೇಕು,ವಿದ್ಯುತ್ ಅಪಘಾತದಿಂದ ಹಾನಿಯಾದ ಜನ-ಜಾನುವಾರು , ಮನೆಗಳು ಮತ್ತು ಹೊಲಗದ್ದೆಗಳ ಬೆಳೆಹಾನಿಗಳಿಗೆ ಪರಿಹಾರ ತುರ್ತಾಗಿ ನೀಡಬೇಕು, ಹಾಗೂ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತವಾಗಿ ಕಂಬಗಳು ಮತ್ತು ಕೇಬಲ್‌ಗಳು ಹಾಕಿ ವಿದ್ಯತ್ ಸೌಲಭ್ಯಗಳನ್ನು ಒದಗಿಸಬೇಕು.ವಿದ್ಯುತ್ ಇಲಾಖೆಯ ಅಧಿಕಾರಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಮತ್ತು ರೈತರೊಂದಿಗೆ ಅಸಭ್ಯವಾಗಿ ವರ್ತಿಸುವದನ್ನು ಬೀಟ್ಟು ಸೌಜನ್ಯದಿಂದ ನಡೆದುಕೊಳ್ಳುವಂತೆ ಆದೇಶ ಮಾಡಬೇಕು, ಜಮೀನಿನಲ್ಲಿ ಮನೆ ಇರುವಂತವುಗಳಿಗೆ ನಿರಂತರ ವಿದ್ಯುರ್ ಸಂಪರ್ಕ ತುರ್ತಾಗಿ ನೀಡಬೇಕು, ಹಾಗೂ ರಾತ್ರಿ ವೇಳೆಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಜಿಲ್ಲೆಯ ಶಹಾಪೂರ ತಾಲೂಕಿನ ದೋರಹನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಥ್ರೀ ಫೇಸ್ ವಿದ್ಯುತ್ ಅವಶ್ಯಕತೆಯಿದ್ದು, ಬೇಗ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಸಾಹುಕಾರ ಬಲಕಲ್, ಯಾದಗಿರಿ ತಾಲ್ಲೂಕು ಅದ್ಯಕ್ಷ ಈಶಪ್ಪ ಬಂದಳ್ಳಿ, ಪರಮೇಶ ಆಂದೇಲಿ, ಶಿವಮೂರ್ತಿ ಪಸಪುಲ್, ಮಹಾನಂದಯ್ಯ ಹಿರೇಮಠ, ಉಸ್ಮಾನ್, ಬಸವರಾಜ ಸೇರಿದಂತೆ ಇನ್ನಿತರರು ಇದ್ದರು.