ಸಾರಾಂಶ
ಬದುಕಲ್ಲಿ ಆರೋಗ್ಯಯುತ ಆಹಾರ ಸೇವನೆ ಮಾಡಿ ಎಂದು ಎಂದು ಢಪಳಾಪುರ ವಿದ್ಯಾವರ್ದಕ ಸಂಘದ ನಿರ್ದೇಶಕಿ ಕವಿತಾ ಢಪಳಾಪುರ ಹೇಳಿದರು.
ಮಹಾಲಿಂಗಪುರ: ಬದುಕಲ್ಲಿ ಆರೋಗ್ಯಯುತ ಆಹಾರ ಸೇವನೆ ಮಾಡಿ ಎಂದು ಎಂದು ಢಪಳಾಪುರ ವಿದ್ಯಾವರ್ದಕ ಸಂಘದ ನಿರ್ದೇಶಕಿ ಕವಿತಾ ಢಪಳಾಪುರ ಹೇಳಿದರು. ಅವರು ಡಿವಿವಿಎಸ್ ಪ್ರೀ-ಸ್ಕೂಲ್‌ನಲ್ಲಿ ಪೋಷಕರಿಗಾಗಿ ಆಯೋಜಿಸಿದ್ದ ಆರೋಗ್ಯಕರ ಆಹಾರ ತಯಾರಿ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಪ್ರಿನ್ಸಿಪಾಲ್ ಲೂಯಿಸ್ ಬಾರೆಟ್ಟೋ ಮಾತನಾಡಿದರು. ಇಂದಿನ ಕಾರ್ಯಕ್ರಮದಲ್ಲಿ ಡಿವಿವಿಎಸ್ ಶಾಲೆಯ ನೃತ್ಯಗುರು ಶ್ರೀ ಅಶೋಕ್ ಅಡುಗೆಗೆ ನೀಡಿದ ವಿನ್ಯಾಸ ಹಾಗೂ ಸೃಜನಶೀಲತೆ ಅವಲೋಕಿಸಿದರು. ಈ ಸಂದರ್ಭದಲ್ಲಿ ಡಿವಿವಿಎಸ್ ಪ್ರೀ-ಸ್ಕೂಲ್‌ನ ಶೈಕ್ಷಣಿಕ ಸಂಯೋಜಕರಾದ ಸುಶ್ರೀ ಹುಮೈರಾ ದ್ರಾಕ್ಷಿ ಇತರರು ಇದ್ದರು.