ಸಾರಾಂಶ
ಕಳೆದ ಎರಡು ವರ್ಷಗಳ ಹಿಂದೆ ನಗರಸಭೆಯವರು ಸ್ಥಾಪಿಸಿರುವ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ ಹಿಡಿದಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗಿದೆ.
ತುಕ್ಕು ಹಿಡಿದ ಯಂತ್ರಗಳು, ಜನತೆಗೆ ಶುದ್ಧ ಕುಡಿಯುವ ನೀರಿನ ಅಭಾವ
ಇದ್ದರೂ ಇಲ್ಲದಂತಿರುವ ಘಟಕಗಳುರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿಕಳೆದ ಎರಡು ವರ್ಷಗಳ ಹಿಂದೆ ನಗರಸಭೆಯವರು ಸ್ಥಾಪಿಸಿರುವ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ ಹಿಡಿದಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗಿದೆ.
2021-22ನೇ ಸಾಲಿನಲ್ಲಿ ನಗರಸಭೆಯವರು 14ನೇ ಹಣಕಾಸು ಯೋಜನೆಯಡಿಯಲ್ಲಿ ನಾಲ್ಕು ಕುಡಿಯುವ ನೀರಿನ ಶುದ್ದೀಕರಣದ ಘಟಕಗಳನ್ನು ಸ್ಥಾಪಿಸಿದ್ದರು. ಒಂದು ಘಟಕಕ್ಕೆ ₹12 ಲಕ್ಷ ವೆಚ್ಚಮಾಡಿ ತಾತ್ಕಲಿಕ ಶೆಡ್, ಯಂತ್ರಗಳು, ವಿದ್ಯುತ್ ಸಂಪರ್ಕ ಮತ್ತು ಬೋರ್ ವೆಲ್ ಹಾಕಿಸಲಾಗಿತ್ತು. ಆದರೆ ಒಂದು ಘಟಕಕ್ಕೆ ವಿದ್ಯುತ್ ಸಂಪರ್ಕ ಕೊರತೆ ಇದ್ದರೆ, ಇನ್ನೊಂದು ಘಟಕಕ್ಕೆ ನೀರಿನ ಕೊರತೆ ಹಾಗೂ ಟೆಂಡರ್ ಪ್ರಕ್ರಿಯೆ ಸೇರಿದಂತೆ ವಿವಿಧ ಕೊರತೆಯಿಂದ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.ಎಲ್ಲಿಲ್ಲಿ ಘಟಕಗಳು:ಪ್ರಮುಖವಾಗಿ ಪೊಲೀಸ್ ಠಾಣೆಯ ಸಮುಚ್ಚಯ, ನಗರಸಭೆ ಮುಂಭಾಗ, ಬಸ್ ನಿಲ್ದಾಣ ಮತ್ತು ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ನಾಲ್ಕು ಘಟಕಗಳು ಪ್ರಾರಂಭವಾದರೂ ಒಂದಿಲ್ಲ ಒಂದು ಸಮಸ್ಯೆಯಿಂದಾಗಿ ಕಾರ್ಯಾಚರಣೆ ಮಾಡುತ್ತಿಲ್ಲ. ಈ ಘಟಕಗಳಿಂದ ಇದುವರೆಗೆ ಒಬ್ಬರೂ ನೀರು ಪಡೆದಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ.ಘಟಕಗಳು ಸರಿಯಾದ ರೀತಿಯಲ್ಲಿ ಬಳಕೆಯಾಗದ ಕಾರಣ ಒಳಗಿನ ಯಂತ್ರಗಳು ತುಕ್ಕು ಹಿಡಿದಿವೆ. ಕೆಲ ಘಟಕಗಳಲ್ಲಿ ಯಂತ್ರಗಳು ಕಳ್ಳತನವಾಗಿರುವ ಬಗ್ಗೆ ಅನುಮಾನ ಉಂಟಾಗಿದೆ.ಕಾಟಾಚಾರಕ್ಕೆ ಟೆಂಡರ್:
ನಗರಸಭೆಯಿಂದ ಘಟಕಗಳ ನಿರ್ವಹಣೆಗಾಗಿ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಕೆಲ ವ್ಯಕ್ತಿಗಳು ಟೆಂಡರ್ ಪಡೆದಿದ್ದರೂ ಸಹ ನಗರಸಭೆಯವರಿಗೆ ಮುಂಗಡ ಹಣ ಪಾವತಿಸದೇ ಇರುವುದು, ಇನ್ನು ಕೆಲವರು ವಿದ್ಯುತ್ ಬಾಕಿ ಉಳಿಸಿರುವುದರಿಂದ ಘಟಕಗಳು ಇದ್ದರೂ ಇಲ್ಲದಂತಾಗಿವೆ. ಬಸ್ ನಿಲ್ದಾಣದಲ್ಲಿರುವ ಘಟಕವನ್ನು ಸಾರಿಗೆ ಇಲಾಖೆಯವರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲಿ ಹೆಚ್ಚಿನ ಅಗತ್ಯವಿದ್ದರೂ ಸಮರ್ಪಕವಾಗಿ ಪ್ರಾರಂಭ ಮಾಡಿಲ್ಲ.ನಗರಸಭೆಯ ವ್ಯಾಪ್ತಿಯಲ್ಲಿರುವ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ ಬಂದಿದ್ದು, ಅದು ದೂರವಾಗಿ ನಗರದ ಜನತೆ ಯಾವಾಗ ಶುದ್ಧ ಕುಡಿಯುವ ನೀರು ಕುಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
-----(ಕೋಟ್)
ಎರಡು ವರ್ಷಗಳ ಹಿಂದೆ ನಗರಸಭೆಯ ವ್ಯಾಪ್ತಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ಕೆಲ ಘಟಕಗಳಲ್ಲಿ ಯಂತ್ರಗಳು ಕೆಟ್ಟು ಹೋಗಿವೆ. ಟೆಂಡರ್ ಕರೆದರೂ ಯಾರೂ ಬಾರದ ಕಾರಣ ನನೆಗುದಿಗೆ ಬಿದ್ದಿವೆ. ಶೀಘ್ರದಲ್ಲಿ ಘಟಕಗಳನ್ನು ಪ್ರಾರಂಭಿಸಲಾಗುವುದು.ಶಂಕರಗೌಡ
ಎಇಇ ನಗರಸಭೆ