ಬೇಗೂರು ಸರ್ಕಾರಿ ಪಿಯು ಕಾಲೇಜಿನಿಂದ ಆಯೋಜನೆ । ಪರಿಸರದ ಬಗ್ಗೆ ಜಾಗೃತಿ
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ಆಯೋಜಿಸಿದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ ನಡೆಯಿತು.ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು ಪರಿಸರ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರದ ಸೂಕ್ಷ್ಮತೆ ಹಾಗೂ ಪರಿಸರ ಜವಾಬ್ದಾರಿ ಬಗ್ಗೆ ಮೊದಲಿಗೆ ಅರಿವು ಮೂಡಿಸಿದರು.ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾಡು ನಾಶ, ಅರಣ್ಯ ಒತ್ತುವರಿ ಹಾಗೂ ಮನುಷ್ಯನ ಸಂವೇದನ ರಹಿತ ಜೀವನ ಶೈಲಿಯೇ ಪ್ರಮುಖ ಕಾರಣ. ಅರಣ್ಯ ನಾಶದಿಂದಾಗಿ ಆನೆ, ಹುಲಿ ಚಿರತೆಗಳು ನಾಡಿನೆಡೆ ಹೆಜ್ಜೆ ಹಾಕುತ್ತಿವೆ ಎಂದು ವಿಶ್ಲೇಷಿಸಿದರು.ಪ್ರತಿಯೊಬ್ಬರು ಪರಿಸರ ಹಾಗೂ ವನ್ಯಜೀವಿಗಳೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿತಾಗ ಮಾತ್ರ ಈ ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಮಾನವನ ಹಸ್ತಕ್ಷೇಪ ಅತಿಯಾದ ಕಾರಣ ಪರಿಸರದ ಗುಣಮಟ್ಟ ಕುಸಿಯುತ್ತಿದೆ. ನದಿಗಳ ಮಾರ್ಗ ಬದಲಿಸುವಿಕೆ, ಕಾಡಿನೊಳಗೆ ಸುರಂಗ ಮಾರ್ಗ ದಂತ ಅವೈಜ್ಞಾನಿಕ ಕೆಲಸ ಕೇವಲ ವನ್ಯಜೀವಿಗಳಿಗಲ್ಲದೆ ಮನುಕುಲಕ್ಕೆ ಕುತ್ತಾಗಬಹುದು ಎಂದರು.ಇಕೋ ಕ್ಲಬ್‌ನ ಕಾರ್ಯದರ್ಶಿ ಜಿ. ಷಡಕ್ಷರಸ್ವಾಮಿ ಮಾತನಾಡಿ, ‘ಪ್ರಾಣಿ, ಪಕ್ಷಿ, ಮರ, ಗಿಡಗಳಿಗೆ ಮನುಷ್ಯರಂತೆಯೇ ಜೀವ ಇರುತ್ತದೆ. ನಮಗಾದಂತೆಯೇ ಹಸಿವು ಬಾಯಾರಿಕೆ ಆಗುತ್ತವೆ. ಈ ಸೂಕ್ಷ್ಮತೆ ಅರಿತುಕೊಂಡು ಪರಿಸರದೊಂದಿಗೆ ಸಹ ಜೀವನ ನಡೆಸಬೇಕು’ ಎಂದರು.ಇದೇ ಸಂದರ್ಭದಲ್ಲಿ ಇಕೋ ಕ್ಲಬ್ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ, ಕ್ವಿಜ್, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪರಿಸರ ನಡಿಗೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುಟ್ಟಸ್ವಾಮಿ, ಮಂಜುನಾಥ್, ಸುರೇಶ್, ಚಂದನ್, ರೂಪಾದೇವಿ ಇದ್ದರು.---೨೭ಜಿಪಿಟಿ೧ಗೋಪಾಲಸ್ವಾಮಿ ಬೆಟ್ಟದಲ್ಲಿ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗೋಪಾಲಸ್ವಾಮಿ ಬೆಟ್ಟದಲ್ಲಿ ಪರಿಸರ ನಡಿಗೆ ನಡೆಸಿದರು.ಗೋಪಾಲಸ್ವಾಮಿ ಬೆಟ್ಟದಲ್ಲಿ ಪರಿಸರ ನಡಿಗೆ
ತಾಲೂಕಿನ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ಆಯೋಜಿಸಿದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.