ಕೈಗಾರಿಕೆ ಬೆಳವಣಿಗೆಯಿಂದ ದೇಶ ಆರ್ಥಿಕ ಅಭಿವೃದ್ಧಿ

| Published : Jul 01 2024, 01:52 AM IST

ಕೈಗಾರಿಕೆ ಬೆಳವಣಿಗೆಯಿಂದ ದೇಶ ಆರ್ಥಿಕ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ ಕೇಶವ ಕಲಾಭವನದಲ್ಲಿ ಆಯೋಜಿಸಿದ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸಂಪಾದನಾ ಸ್ವಾಮಿಜೀ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕೈಗಾರಿಕೆಗಳು ಬೆಳೆದರೆ ನಗರಗಳು ಬೆಳೆಯುತ್ತವೆ. ನಗರಗಳು ಬೆಳೆದರೆ ನಿರುದ್ಯೋಗ ನಿವಾರಣೆಯಾಗುತ್ತದೆ. ನಿರುದ್ಯೋಗ ನಿವಾರಣೆಯಾದರೆ ದೇಶ ಆರ್ಥಿಕವಾಗಿ ಬೆಳೆಯುತ್ತದೆ ಎಂದು ರೋಟರಿ ವಲಯ ನಿರ್ದೇಶಕ ಮಹೇಶ ಕೊಟಬಾಗಿ ಹೇಳಿದರು.

ಪಟ್ಟಣದ ಕೇಶವ ಕಲಾ ಭವನದಲ್ಲಿ ಹಮ್ಮಿಕೊಂಡ ಚಿಕ್ಕೋಡಿ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ 50 ವರ್ಷಗಳಲ್ಲಿ ಚಿಕ್ಕೋಡಿ ಸಾಕಷ್ಟು ಬೆಳೆದಿದ್ದು, ಮುಂದಿನ 10 ವರ್ಷಗಳಲ್ಲಿ ಚಿಕ್ಕೋಡಿ ರಾಜ್ಯದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಲಿದ್ದು, ರೋಟರಿ ಕ್ಲಬ್ ಚಿಕ್ಕೋಡಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಸಮಾಜದಲ್ಲಿನ ಕೊರತೆಯನ್ನು ನೀಗಿಸುವ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿದೆ. ಪ್ರಜ್ಞಾವಂತ ನಾಗರಿಕರೇ ಹೆಚ್ಚಿರುವ ರೋಟರಿ ಕ್ಲಬ್ ಸೇವೆ ಜನರಿಗೆ ಇನ್ನಷ್ಟು ತಲುಪುವಂವತಾಗಬೇಕು ಎಂದು ಸಲಹೆ ನೀಡಿದರು.

ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಯಲ್ಲಿ ರೋಟರಿ ಕ್ಲಬ್ 50 ವರ್ಷ ಪೂರೈಸಿದ್ದು, ನಾನು ಕ್ಲಬ್ ಸದಸ್ಯನಾಗಿದ್ದು ಹೆಮ್ಮೆ ಎನಿಸುತ್ತದೆ. ರೋಟರಿ ಕ್ಲಬ್‌ ಮಾಡಿದ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.

ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿಯನ್‌ಗಳಾದ ಅವಿನಾಶ ಪೋತದಾರ, ಶರದ ಪೈ, ಬಬನ್ ದೇಶಪಾಂಡೆ, ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ಪಡಲಾಳೆ, ಕಾರ್ಯದರ್ಶಿ ಶಿರಿಶ್ ಮೆಹ್ತಾ, ಉಪ ಪ್ರಾಂತ ಪಾಲ ಮಕರಂದ ಕುಲಕರ್ಣಿ, ಸಂಸ್ಥಾಪಕ ಸದಸ್ಯ ವಿಜಯ ಮಾಂಜರೇಕರ, ಉದಯ ಪಾಟೀಲ, ಶಿವಕುಮಾರ ಹಂಜಿ ಮುಂತಾದವರು ಉಪಸ್ಥಿತರಿದ್ದರು.