ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ: ಶೌಕತಅಲಿ

| Published : Feb 13 2024, 12:46 AM IST

ಸಾರಾಂಶ

ಕೇವಲ ತೋರಿಕೆಗಾಗಿ ಆಂಗ್ಲಭಾಷೆ ಅಭ್ಯಾಸಕ್ಕೆ ಕಳುಹಿಸಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿಯೇ ಕಲಿಸಿದರೆ ಒಳ್ಳೆಯ ಭವಿಷ್ಯವಿದೆ. ಕೇವಲ ತೋರಿಕೆಗಾಗಿ ಆಂಗ್ಲಭಾಷೆ ಅಭ್ಯಾಸಕ್ಕೆ ಕಳುಹಿಸಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಕಾಳಗಿ ತಾಲೂಕು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಇತಿಹಾಸ ಉಪನ್ಯಾಸ ಶೌಕತಅಲಿ ನಾವದಗಿಕರ ಅಭಿಪ್ರಾಯವ್ಯಕ್ತಪಡಿಸಿದರು.

ಪಟ್ಟಣದ ಚಂದಾಪೂರ ನಗರದ ಶಾರಾದಾ ಹಿರಿಯ ಪ್ರಾಥಮಿಕ ಶಾಲೆ ೨೪ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ವಿವಿಧ ಉನ್ನತಮಟ್ಟದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಸರಕಾರಿ ವಿವಿಧ ಹುದ್ದೆಗಳನ್ನು ನೇಮಕವಾಗಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಬಡವರ ಮಕ್ಕಳೇ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದು ಬಡವರ ಮಕ್ಕಳ ಒಳತಿಗಾಗಿ ಶ್ರಮಿಸುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರಜಿಯಾಬೇಗಮ ನಾವದಗಿಕರ ವಹಿಸಿದ್ದರು. ಶಾರದಾ ಶಾಲೆ ೨೪ನೇ ವಾರ್ಷಿಕೋತ್ಸವವನ್ನು ಪುರಸಭೆ ಮಾಜಿ ಉಪಾಧ್ಯಕ್ಷತೆ ಸುಲೋಚೆನಾ ಕಟ್ಟಿ ಉದ್ಘಾಟಿಸಿದರು. ಸಾಮಾಜಿಕ ಹೋರಾಟಗಾರ ರಾಧಾಕೃಷ್ಣ ಕಟ್ಟಿ, ಕೃತಿಕಾ ತರಬೇತಿ ಕೇಂದ್ರ ತರಬೇತಿದಾರ ವಿಶ್ವನಾಥ ದೇಸಾಯಿ ಆಗಮಿಸಿದ್ದರು.

ಮುಖ್ಯಶಿಕ್ಷಕಿ ಕರಿಶ್ಮಾ ಸ್ವಾಗತಿಸಿದರು ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು ಶಿಕ್ಷಕಿಯರಾದ ಅಮೂಲ್ಯ ಕಾವೇರಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರ ಮನರಂಜಿಸಿದವು.