ಸಾರಾಂಶ
ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ ತುರ್ವಿಹಾಳ
ಜೀವ ಭಯದಲ್ಲಿ ಶಾಲಾ ಮಕ್ಕಳು ಎಂಬ ಶೀರ್ಷಿಕೆಯಡಿ ಕಳೆದ ಜು.17ರಂದು ''''''''ಕನ್ನಡಪ್ರಭದಲ್ಲಿ'''''''' ಪ್ರಕಟಗೊಂಡ ವರದಿಗೆ ಶಿಕ್ಷಣ ಇಲಾಖೆ ಎಚ್ಚೇತ್ತುಕೊಂಡಿದೆ.
ಕೆಪಿಯಲ್ಲಿ ವರದಿ ಪ್ರಕಟಾಗುತ್ತಿದ್ದಂತೆ ಪಟ್ಟಣದ ರಾಘವೇಂದ್ರ ಕ್ಯಾಂಪ್ ಶಾಲೆಗೆ ಭೆಟಿ ನೀಡಿ ನೂತನ ಎರಡು ಕೋಠಡಿಗಳನ್ನು ನಿರ್ಮಿಸಲು ತಯಾರಿ ನಡೆಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಶಾಲೆಯ ಮೇಲ್ಛಾವಣಿ ತಾತ್ಕಾಲಿಕವಾಗಿ ರೀಪೇರಿ ಮಾಡಿಸುವದಾಗಿ ಶಾಸಕ ಆರ್.ಬಸನಗೌಡ ತಿಳಿಸಿದ್ದಾರೆ ಎಂದು ಶಾಲಾ ಮುಖ್ಯ ಗುರುಗಳು ಗಂಗಾಧರ ಸಂತಸ ವ್ಯಕ್ತ ಪಡಿಸಿದರು.ಶಾಸಕರು ಶಾಲಾ ಮಕ್ಕಳ ಬಗ್ಗೆ ಕಾಳಜಿವಹಿಸಿ ನೂತನ ಕಟ್ಟಡ ನಕಾಶೆಯನ್ನು ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಶನಿವಾರ ಶಾಲೆ ಬೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಮಕ್ಕಳು ನಿತ್ಯ ಸಮಸ್ಯೆಯನ್ನೇ ಎದುರುರಿಸುತ್ತಿದ್ದರು ಆದರೇ ಇದನ್ನು. "ಕನ್ನಡಪ್ರಭ ಪತ್ರಿಕೆ " ಯಲ್ಲಿ ಪ್ರಕಟಗೊಂಡ ವರದಿ ಬೆನ್ನಲ್ಲೇ ಅಧಿಕಾರಿಗಳು ನೂತನ ಶಾಲೆಯ ಪ್ರಸ್ತಾವನೆಗೆ ಮುಂದಾಗಿರುವುದು ತುಂಬಾ ಸಂತಸ ತಂದಿದೆ ಎಂದು ಪಾಲಕ ಹೆಳಿದರು.