ಸಾರಾಂಶ
ನಾವು ಗಳಿಸಿದ ಆಸ್ತಿ, ಅಂತಸ್ತು ಮತ್ತು ಸಂಪತ್ತು ಯಾವುದು ಕೊನೆಯವರೆಗೆ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಹನುಮಸಾಗರ: ತಾಯಿ ಜೀವ ನೀಡಿದರೆ, ಶಿಕ್ಷಕರು ಭವಿಷ್ಯ ರೂಪಿಸುವ ಶಿಕ್ಷಣ ನೀಡುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ಬಿ. ತಳವಾರ ಹೇಳಿದರು.
ಸಮೀಪದ ಹನುಮನಾಳ ಗ್ರಾಮದಲ್ಲಿ 1995-96 ನೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಗಳಿಸಿದ ಆಸ್ತಿ, ಅಂತಸ್ತು ಮತ್ತು ಸಂಪತ್ತು ಯಾವುದು ಕೊನೆಯವರೆಗೆ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಚ್. ರಾಜಣ್ಣ,ಎಂ.ಬಿ. ಬಾಲರೆಡ್ಡಿ, ಟಿ.ಎಚ್. ಕೆರೂರ್, ವಿ.ಬಿ. ಉಪ್ಪಿ, ಚಂದ್ರಶೇಖರಯ್ಯ, ವೀರಪ್ಪ, ಹನಮಪ್ಪ ಬೆನಾಳ, ಹನುಮಪ್ಪ, ಶಿವಪ್ಪ, ಜಯದೇವಿ, ಬರಮಮ್ಮ, ಅಕ್ಕಮಹಾದೇವಿ, ಶ್ರೀದೇವಿ ಹಾಗೂ ವಿದ್ಯಾರ್ಥಿಗಳಾದ ಶಾಂತಮೂರ್ತಿ, ವೀರೇಶ, ಗೋಪಾಲ, ಹುಲ್ಲಪ್ಪ, ಮಲ್ಲಿಕಾರ್ಜುನ, ಶಿವರುದ್ರಯ್ಯ, ಶ್ರೀಧರ, ಲಾಲಪ್ಪ, ಮುರಳಿಧರ, ಬಾಲಪ್ಪ, ಶಿವರೆಡ್ಡಿ, ಮಹಾಂತೇಶ, ಗಂಗಾಧರ, ಶರಣಮ್ಮ.ಟಿ, ಶೋಭಾ, ವೀಣಾ, ಶರಣಮ್ಮ ಸಿ.ಸುವರ್ಣ, ಮುತ್ತವ್ವ ಇತರರು ಇದ್ದರು.