ಸಾರಾಂಶ
ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಹಾಗೂ ಸರ್ವಜನಾಂಗದ ಆರ್ಥಿಕವಾಗಿ ದುರ್ಬಲ ವರ್ಗದ ಬಡ ಜನರಿಗೆ ಕೈಗೆಟುಕುವ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕಿಸಿ ಕೊಡುತ್ತಿರುವ ಅಂಜುಮನ್ ಸಂಸ್ಥೆ ಕಾರ್ಯ ಶ್ಲಾಘನೀಯ.
ಹೊಸಪೇಟೆ: ಅಂಜುಮನ್ ಖಿದ್ಮತೆ ಇ- ಇಸ್ಲಾಂ ಕಮಿಟಿ ಘಟಕದ ವತಿಯಿಂದ ನಗರದ ಅಂಜುಮನ್ ಆಸ್ಪತ್ರೆಯಲ್ಲಿ ಭಾನುವಾರ ಆರೋಗ್ಯ ತಪಾಸಣೆ ಹಾಗೂ ವಿಶೇಷವಾಗಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ನೂತನ ಸ್ಕ್ಯಾನಿಂಗ್ ಮಷಿನ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಹಾಯಕ ಆಯುಕ್ತ ಅಕ್ರಂ ಪಾಷಾ ಅವರು ಸ್ಕ್ಯಾನಿಂಗ್ ಮಷೀನ್ ಉದ್ಘಾಟಿಸಿ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಎರಡನೆಯದಾದ ಆರೋಗ್ಯಕರ ಚಿಕಿತ್ಸೆಗಾಗಿ ಹಾಗೂ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಸರ್ಕಾರಿ ವಲಯದ ಜತೆಗೆ ಖಾಸಗಿ ವಲಯದ ಸಹಭಾಗಿತ್ವ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಹಾಗೂ ಸರ್ವಜನಾಂಗದ ಆರ್ಥಿಕವಾಗಿ ದುರ್ಬಲ ವರ್ಗದ ಬಡ ಜನರಿಗೆ ಕೈಗೆಟುಕುವ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕಿಸಿ ಕೊಡುತ್ತಿರುವ ಅಂಜುಮನ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.ಅಂಜುಮನ್ ಕಮಿಟಿ ಅಧ್ಯಕ್ಷ ಎಚ್ಎನ್ಎಫ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳಿಗೆ ಹೊರೆಯಾಗದಂತೆ ಹಾಗೂ ಪ್ರತಿಯೊಂದು ಜಾತಿ ಜನಾಂಗದವರೆಗೂ ಅತ್ಯಂತ ಕಡಿಮೆ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನಮ್ಮ ಸಂಸ್ಥೆ ವತಿಯಿಂದ ನೀಡುತ್ತಿದ್ದೇವೆ. ಅಂಜುಮನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ದರ, ರಕ್ತ ಪರೀಕ್ಷೆ, ಔಷಧ ಇತ್ಯಾದಿಗಳನ್ನು ಅತ್ಯಂತ ಕಡಿಮೆ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಮುಖಂಡರಾದ ಸಾಲಿ ಸಿದ್ದಯ್ಯ, ಸತ್ಯನಾರಾಯಣ, ಕೆ. ನಾಗರಾಜ್, ರವಿಶಂಕರ್, ನಗರಸಭೆ ಸದಸ್ಯ ಮಾಳಗಿ ಅಸ್ಲಾಂ, ಅಂಜುಮನ ಸಂಸ್ಥೆಯ ವೈದ್ಯರಾದ ಡಾ. ರೋಹಿನ ಎಂ. ಮತ್ತು ಅಮನ್ ಜಹಾನ್ ಹಾಗೂ ಸಿಬ್ಬಂದಿಗಳಾದ ದೇವಿ, ಗೀತಾ, ರತ್ನ, ನಂದಿನಿ, ಸುಷ್ಮಾ, ಗಾಂಧಿಯಮ್ಮ ಹಾಗೂ ಅಂಜುವನ್ ಕಮಿಟಿಯ ಉಪಾಧ್ಯಕ್ಷ ಎಂ. ಫಿರೋಜ್ ಖಾನ್, ಕಾರ್ಯದರ್ಶಿ ಎಂ.ಡಿ. ಅಬೂಬಕ್ಕರ್, ಖಜಾಂಚಿ ಜಿ. ಅನ್ಸರ್ ಬಾಷಾ, ಸಹ ಕಾರ್ಯದರ್ಶಿ ಡಾ. ಎಂ.ಡಿ. ದುರ್ವೇಶ್ ಮೈನುದ್ದಿನ್ ಹಾಗೂ ಸದಸ್ಯರಾದ ಕೋತ್ವಾಲ್ ಮೊಹಮ್ಮದ್ ಮೋಸಿನ್,ಸದ್ದಾಮ್ ಹುಸೇನ್, ಎಲ್. ಗುಲಾಮ್ ರಸೂಲ್ ಮತ್ತಿತರರಿದ್ದರು. ಉಚಿತ ತಪಾಸಣಾ ಶಿಬಿರದಲ್ಲಿ157 ಜನ ಸಾಮಾನ್ಯ ತಪಾಸಣೆ ಮಾಡಿಸಿಕೊಂಡರೆ, 52 ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.