ಸ್ವಾಭಿಮಾನ, ವ್ಯಕ್ತಿತ್ವ ಹೊಂದಲು ಶಿಕ್ಷಣ ಮುಖ್ಯ

| Published : Dec 20 2023, 01:15 AM IST

ಸ್ವಾಭಿಮಾನ, ವ್ಯಕ್ತಿತ್ವ ಹೊಂದಲು ಶಿಕ್ಷಣ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಸರ್ಕಾರಿ ಸರ್ದಾರ್ ಪಪೂ ಕಾಲೇಜು ಇವರ ಸಹಯೋಗದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್‌ ಓದು ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಎಚ್‌.ಬಿ ಮಾಚನಾಡಿ, ಬೆಳಗಾವಿ ಜೀವಣದಲ್ಲಿ ಸ್ವಾಭಿಮಾನ ಬದುಕು ನಡೆಸಲು ಹಾಗೂ ಒಳ್ಳೆಯ ವ್ಯಕ್ತಿತ್ವ ಹೊಂದಲು ಪ್ರತಿಯೊಬ್ಬರಿಗೂ ಶಿಕ್ಷಣ ಕಲಿಯುವುದು ಪ್ರಮುಖವಾಗಿದೆ. ಎಂದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜೀವಣದಲ್ಲಿ ಸ್ವಾಭಿಮಾನ ಬದುಕು ನಡೆಸಲು ಹಾಗೂ ಒಳ್ಳೆಯ ವ್ಯಕ್ತಿತ್ವ ಹೊಂದಲು ಪ್ರತಿಯೊಬ್ಬರಿಗೂ ಶಿಕ್ಷಣ ಕಲಿಯುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಇಂದಿನ ಯುವ ಜನರು ಕಾಲೇಜು ವಿದ್ಯಾರ್ಥಿ ಜೀವನ ವ್ಯರ್ಥ ಮಾಡದೇ ಶ್ರದ್ಧೆಯಿಂದ ಸಾಧನೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಎಚ್‌.ಬಿ ಹೇಳಿದರು.

ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಸರ್ಕಾರಿ ಸರ್ದಾರ್ ಪಪೂ ಕಾಲೇಜು ಇವರ ಸಹಯೋಗದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್‌ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರರವರು ಕಷ್ಟ ಜೀವನದಲ್ಲಿ ಓದಿನಲ್ಲಿ ಎಂದೂ ಹಿಂದೆ ಬೀಳದೆ ಶ್ರಮವಹಿಸಿ ಶಿಕ್ಷಣ ಕಲಿತು ಎಲ್ಲರಿಗೂ ದಾರಿದೀಪವಾಗಿದ್ದಾರೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್‌ ಅಧಿಕಾರಿ ಎಂ.ಎಂ.ಮುಲ್ಲಾ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಓದಿನ ಕಲಿಕೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಅದು ನಿಮ್ಮ ಜೀವನ ಬದುಕಿಗೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.

ಎಸ್.ಆರ್.ಕಲಹಾಳ ಅವರು ಡಾ.ಬಾಬಾಸಾಹೇಬರ್‌ ಅಮೂಲ್ಯ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ಸಮಾರಂಭದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ವೈ.ಎಂ.ಪಾಟೀಲ ವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಆಶು ಭಾಷಣ, ಗಾಯನ ಹಾಗೂ ನಿಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಸಂವಿಧಾನ ಪುಸ್ತಕ, ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಿಜಾಮೋದ್ದೀನ್‌.ಎಸ್, ಎ.ಬಿ.ಜಿಡ್ಡಿಮನಿ, ವಿ.ಪಿ.ಹತ್ತಿ, ಧಾಮಣೆ, ಎಸ್.ಎಸ್.ತಟಗಾರ, ಪರವೀಣ ಬಾನು, ಗಿರೀಶ ಕಬಟೆ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.