ಸುತ್ತೂರು ಜೆಎಸ್ಎಸ್ ನಲ್ಲಿ ಶೈಕ್ಷಣಿಕ ವಸ್ತುಪ್ರದರ್ಶನ

| Published : Dec 22 2024, 01:32 AM IST

ಸಾರಾಂಶ

ಜನರಿಗೆ ಉತ್ತಮ ವಿಷಯ ಜ್ಞಾನವನ್ನು ತಿಳಿಸಿಕೊಡುವ ಆಕರ್ಷಕವಾದ 67 ಮಾದರಿಗಳು 2025 ರ ಜನವರಿಯಲ್ಲಿ ನಡೆಯುವ ಸುತ್ತೂರು ಜಾತ್ರೆಯ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಲಸ್ಟರ್ ಮಟ್ಟದ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಿತ್ತು.

ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಜೆಎಸ್ಎಸ್ ಶಾಲೆಗಳಾದ ಸುತ್ತೂರು, ಹಳ್ಳಿಕೆರೆಹುಂಡಿ, ಹುಲ್ಲಹಳ್ಳಿ, ಮಹದೇವನಗರ, ನಂಜನಗೂಡು ಬಾಲಕಿಯರ ಪ್ರೌಢಶಾಲೆಗಳ ಶಾಲಾ ಹಂತದಲ್ಲಿ ಭೂಮಿ ಮತ್ತು ಬಾಹ್ಯಾಕಾಶ, ಸಮಾಜ ವಿಜ್ಞಾನ, ಜೀವಶಾಸ್ತ್ರ, ಕೃಷಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕ್ರೀಡೆ ಮತ್ತು ಭಾಷೆಗಳಿಂದ ಆಯ್ದ ಒಟ್ಟು 130, ಹಿರಿಯ ಪ್ರಾಥಮಿಕ ಶಾಲೆಯ 47 ಮಾದರಿಗಳು ಪ್ರದರ್ಶನಗೊಂಡವು. ಇದರಲ್ಲಿ ಜನರಿಗೆ ಉತ್ತಮ ವಿಷಯ ಜ್ಞಾನವನ್ನು ತಿಳಿಸಿಕೊಡುವ ಆಕರ್ಷಕವಾದ 67 ಮಾದರಿಗಳು 2025 ರ ಜನವರಿಯಲ್ಲಿ ನಡೆಯುವ ಸುತ್ತೂರು ಜಾತ್ರೆಯ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.

ತೀರ್ಪುಗಾರರಾಗಿ ಶಿವಮಾದಪ್ಪ, ನಟರಾಜು, ಡಾ. ಮಹದೇವಪ್ರಸಾದ್, ಶಿವಪ್ರಸಾದ್, ಅರ್ಜುನ್, ಬಿಳಿಗಿರಿ, ಮಹದೇವಸ್ವಾಮಿ, ನಾಗರಾಜಚಾರ್, ಅರಳಿಕಟ್ಟೆ ರಾಜಪ್ಪ ಇದ್ದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಸಹ ನಿರ್ದೇಶಕ ಶಿವಮಾದಪ್ಪ, ವಿಷಯ ಪರಿವೀಕ್ಷಕ ಎಸ್.ಸಿ. ಚನ್ನಬಸಪ್ಪ, ನಾಗರಾಜು, ಎನ್. ರೇಣುಕಸ್ವಾಮಿ, ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ ಹಾಗೂ ಮಾರ್ಗದರ್ಶಕ ಶಿಕ್ಷಕರು, ಕ್ಲಸ್ಟರ್ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.