ಸಾರಾಂಶ
ಶೇ. 32 ರಷ್ಟು ಮಾತ್ರ ಬಿತ್ತನೆ, ದುಬಾರಿ ಬಿತ್ತನೆ ಬೀಜ । ಮಳೆಯಲ್ಲಿ ಏರುಪೇರು, ಜಮೀನಿನಲ್ಲಿ ಹೆಚ್ಚಿದ ತೇವಾಂಶ
ಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ ವರ್ಷ ಆಲೂಗೆಡ್ಡೆ ಫಸಲು ಹಲವು ಹಂತಗಳಲ್ಲಿ ಕಂಟಕ ಎದುರಿಸಿದ್ದರ ಪರಿಣಾಮ ಈ ಬಾರಿ ಬಿತ್ತನೆಯಲ್ಲಿ ಭಾರೀ ಹಿನ್ನಡೆಯಾಗಿದೆ.ಕಳಪೆ ಬಿತ್ತನೆ ಬೀಜ, ಮಳೆಯಲ್ಲಿ ಏರುಪೇರು, ಅಂಗಮಾರಿ ರೋಗ, ಬೆಲೆಯಲ್ಲಿ ಏರಿಳಿತದಿಂದಾಗಿ ರೈತರು ಈ ಬಾರಿ ಆಲೂಗೆಡ್ಡೆ ಬೆಳೆಯಲು ಮನಸ್ಸು ಮಾಡಿಲ್ಲ. ಹಾಗಾಗಿ ಶೇ. 32 ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಶೇ. 55 ರಷ್ಟಾಗಿತ್ತು. ಅಂದರೆ, ಈ ವರ್ಷ ಮತ್ತಷ್ಟು ಕುಸಿದಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಆಲೂಗೆಡ್ಡೆ ಬೆಳೆ ವಿಸ್ತೀರ್ಣ ಕಡಿಮೆಯಾಗುತ್ತಿದೆ.ಚಿತ್ರಣ:
ಜಿಲ್ಲೆಯ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳ ಕೆಲವು ಭಾಗಗಳಲ್ಲಿ ಮಾತ್ರ ಮುಂಗಾರಿನಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಹೆಚ್ಚು ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿದೆ. ಕೆಲವೆಡೆ ಪೆಪ್ಸಿ ಕಂಪನಿಯವರೇ ರೈತರಿಗೆ ಆಲೂಗೆಡ್ಡೆ ಬಿತ್ತನೆ ಬೀಜ, ಔಷಧಿಗಳನ್ನು ಕೊಟ್ಟು, ರೈತರು ಬೆಳೆದ ಆಲೂಗೆಡ್ಡೆ ಕಂಪನಿಯವರೇ ಖರೀದಿ ಮಾಡುತ್ತಿದ್ದಾರೆ. ಆದರೆ, ಹೆಚ್ಚಿನ ರೈತರು ಸ್ವಂತ ಬಂಡವಾಳ ಹಾಕಿ ಬೆಳೆ ಬೆಳೆಯುತ್ತಿದ್ದಾರೆ.ನೆರೆಯ ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಅಂಗಮಾರಿ ರೋಗದಿಂದಾಗಿ ಅಲ್ಲೂ ಕೂಡ ವಿಸ್ತೀರ್ಣ ಕಡಿಮೆಯಾಗಿದೆ. ಸದ್ಯ ಅರಸೀಕೆರೆ ಮತ್ತು ಅರಕಲಗೂಡು ತಾಲೂಕುಗಳಲ್ಲಿ ಮಾತ್ರ ಆಲೂಗೆಡ್ಡೆ ಬೆಳೆಯಲಾಗುತ್ತಿದೆ. ಇಲ್ಲಿ ಪೆಪ್ಸಿ ಕಂಪನಿ ಬೀಜವನ್ನು ಬಿತ್ತನೆ ಮಾಡಲಾಗುತ್ತಿದೆ.
ಕಳೆದ ವರ್ಷ ಬಿತ್ತನೆ ಬೀಜ ಕ್ವಿಂಟಾಲ್‌ಗೆ 1300 ರು. ಇತ್ತು. ಈ ವರ್ಷದಲ್ಲಿ 2500 ರು.ಗೆ ಏರಿಕೆಯಾಗಿದೆ. ಗೊಬ್ಬರ, ಔಷಧಿ ಹಾಗೂ ನಿರ್ವಹಣೆ ಮಾಡುವ ವೆಚ್ಚವೂ ದುಬಾರಿಯಾಗಿದೆ. ಇಷ್ಟೆಲ್ಲಾ ಬಂಡವಾಳ ಹಾಕಿದರೆ ಕ್ವಿಂಟಾಲ್‌ಗೆ 3000 ರು. ಬಂದರೆ ಒಂದಿಷ್ಟು ಲಾಭವಾಗಬಹುದು. ಆದರೆ, ಇತ್ತೀಚಿನ ವರ್ಷಗಳಲ್ಲಿ 800 ರು. ದಾಟಿಲ್ಲ. ಕಳೆದ 3 ವರ್ಷದ ಹಿಂದೆ ಒಳ್ಳೆಯ ಬೆಲೆ ಬಂದಿತ್ತು ಎಂದು ರೈತರು ಹೇಳುತ್ತಿದ್ದಾರೆ.ರೈತರ ಚಿತ್ತ ತರಕಾರಿಯತ್ತ:ಮುಂಗಾರಿನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆಯ ಗುರಿ 17,187.90 ಹೆಕ್ಟೇರ್, ಈ ವರ್ಷದಲ್ಲಿ 11,050.7 (ಶೇ.64) ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆಲೂಗೆಡ್ಡೆ ಬೆಳೆಯುತ್ತಿದ್ದ ರೈತರು ಟೊಮ್ಯಾಟೊ ಹಾಗೂ ತರಕಾರಿ ಬೆಳೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ. ಇದಕ್ಕೆ ಕಾರಣ, ಮುಂಗಾರು ಮಳೆ ಏರುಪೇರು. ಈ ಬಾರಿ ಜೂನ್ ಮಾಹೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬರಲಿಲ್ಲ. ಹಾಗಾಗಿ ಸಕಾಲದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ, ಆದರೆ, ಜುಲೈನಲ್ಲಿ ಸತತವಾಗಿ 2 ವಾರಗಳ ಮಳೆ ಬಿದ್ದಿರುವ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಾಗಿ ಆಲೂಗೆಡ್ಡೆ ಫಸಲು ಗೆಡ್ಡೆ ಕಟ್ಟಲು ಅಡಚಣೆಯಾಗಿದ್ದು, ಗಿಡಗಳು ಸೊರಗಿ ಹೋಗಿವೆ. ಇಂದಿಗೂ ಕೂಡ ಹಲವು ಹೊಲಗಳಲ್ಲಿ ನೀರು ನಿಂತಿದೆ. ಹೊಲಗಳಲ್ಲಿ ಕಳೆ ಕೀಳಲು, ಗೊಬ್ಬರ ಹಾಕಲು ಮಳೆ ಅಡ್ಡಿ ಪಡಿಸಿತ್ತು. ಈ ಬಾರಿ ಆಲೂಗೆಡ್ಡೆ ಈ ಎಲ್ಲಾ ಸಮಸ್ಯೆಯನ್ನು ಆರಂಭದಲ್ಲಿ ಎದುರಿಸಿತ್ತು.
---- ಬಾಕ್ಸ್--------------------------------------------------------------
ಬೆಳೆಗಳುಬಿತ್ತನೆ ಗುರಿಬಿತ್ತನೆಯಾದ ಪ್ರದೇಶ ಶೇ.--------------------------------------------------------------
ಈರುಳ್ಳಿ 10950.8 7672.9070%
--------------------------------------------------------ಆಲೂಗೆಡ್ಡೆ2727.51 865 32%
-------------------------------------------------------ಮೆಣಸಿನಕಾಯಿ762 175 23
-------------------------------------------------------ಟೊಮ್ಯಾಟೊ1200 1170 98
------------------------------------------------------ಇತರೆ ತರಕಾರಿ1547.62 1167.875
--------------------------------------------------------ಒಟ್ಟು 17187.90 11050.764------------------------------------------------------ಮಳೆಯ ಏರುಪೇರಿನಿಂದ ಆಲೂಗೆಡ್ಡೆ ಬೆಳೆಗೆ ಹಲವೆಡೆ ಹಾನಿ ಸಂಭವಿಸುತ್ತಿದೆ. ಒಳ್ಳೆಯ ಬೆಲೆ ಸಿಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಲೂಗೆಡ್ಡೆ ಬೆಳೆದರೆ ಕೈ ಸುಟ್ಟಿಕೊಳ್ಳಬೇಕಾಗುತ್ತದೆ. ಅದ್ದರಿಂದ ರೈತರು ತರಕಾರಿ ಬೆಳೆಯನ್ನು ಬೆಳೆ ಯುತ್ತಿದ್ದಾರೆ. ಇದರಿಂದಾಗಿ ಒಂದಿಷ್ಟು ಹಣಕಾಸಿನ ತೊಂದರೆ ದೂರವಾಗಲಿದೆ.- ಪುಟ್ಟೇಗೌಡ ಬಿಳೇಕಲ್ಲುಪೋಟೋ ಫೈಲ್ ನೇಮ್ 4 ಕೆಸಿಕೆಎಂ 5
-ಚಿಕ್ಕಮಗಳೂರು ತಾಲೂಕಿನ ಹಂಪಾಪುರ ಗ್ರಾಮದ ಬಳಿ ಬೆಳೆದಿರುವ ಆಲೂಗೆಡ್ಡೆ ಗಿಡಗಳು.ಪೋಟೋ ಫೈಲ್ ನೇಮ್ 4 ಕೆಸಿಕೆಎಂ 3--
ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದ ಬಳಿ ಆಲೂಗೆಡ್ಡೆ ಹೊಲದಲ್ಲಿ ನಿಂತಿರುವ ಮಳೆಯ ನೀರು.ಪೋಟೋ ಫೈಲ್ ನೇಮ್ 4 ಕೆಸಿಕೆಎಂ 4