ಗಂಗಾವತಿ ನಗರದ ಶ್ರೀ ಕಲಾನಿಕೇತನ ಸಾಂಸ್ಕೃತಿಕ ವೇದಿಕೆಯಲ್ಲಿ ಹಾಸ್ಯ ಲೋಕ ಸಂಘಟನೆ ನಗೆ ಮಾಧುರ್ಯ ಕಾರ್ಯಕ್ರಮ ಏರ್ಪಡಿಸಿತ್ತು. ಹಾಸ್ಯ ಸಾಹಿತಿ ಬಿ. ಪ್ರಾಣೇಶ, ಇಂದುಮತಿ ಸಾಲಿಮಠ, ಡಾ. ಬಸವರಾಜ ಬೆಣ್ಣೆ, ಚಿದಾನಂದ ಕೀರ್ತಿ ಅವರಿಂದ ಹಾಸ್ಯ ಸಂಜೆ ಜರುಗಿತು.

ಗಂಗಾವತಿ: ನಗರದಲ್ಲಿ ಭವ್ಯ ಕಲಾ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಶ್ರೀ ಕಲಾನಿಕೇತನ ಸಾಂಸ್ಕೃತಿಕ ವೇದಿಕೆಯಲ್ಲಿ ಹಾಸ್ಯ ಲೋಕ ಸಂಘಟನೆ ಏರ್ಪಡಿಸಿದ್ದ ನಗೆ ಮಾಧುರ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರವು ಐತಿಹಾಸಿಕ, ಮತ್ತು ವಾಣಿಜ್ಯ ಸೇರಿದಂತೆ ಸಾಂಸ್ಕೃತಿಕವಾಗಿ ಪ್ರಗತಿಯತ್ತ ಸಾಗಿದೆ. ಇದಕ್ಕೆ ಸಾಕ್ಷಿಯಂತೆ ಅಂಜನಾದ್ರಿ ಪ್ರಗತಿಯಾಗುತ್ತಿದ್ದು, ದೇಶ ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅದರಂತೆಯೇ ಕಲಾವಿದರ ತವರೂರು ಎನಿಸಿಕೊಳ್ಳುತ್ತಿರುವ ಗಂಗಾವತಿ ನಗರಕ್ಕೆ ಭವ್ಯ ರಂಗ ಮಂದಿರ ಅವಶ್ಯಕತೆ ಇದೆ. ನಮ್ಮವರೇ ಆಗಿರುವ ಸ್ಥಳೀಯ ಶಾಸಕರಿಗೆ ಅನುದಾನ ನೀಡುವಂತೆ ಶಿಫಾರಸು ಮಾಡುವುದಾಗಿ ಹೇಳಿದರು.

ಹಾಸ್ಯ ಲೋಕ ಸಂಘಟನೆಯ ಅಧ್ಯಕ್ಷ, ಪತ್ರಕರ್ತ ಎಸ್.ಎಂ. ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಸೋಮನಾಥ ಪಟ್ಟಣಶೆಟ್ಟಿ, ಸುವರ್ಣ ಸಾಧಕಿ ಪುರಸ್ಕೃತೆ ಡಾ. ಸಿ. ಮಹಾಲಕ್ಷ್ಮೀ ಕೇಸರಹಟ್ಟಿ, ಕಲಾವಿದ ಕಾಸಿಂ ಅಲಿ ಮುದ್ದಾಬಳ್ಳಿ, ಗಾಯಕ ಖಾಜವಲಿ, ಮಂಜುನಾಥ ಹೊಸಕೇರಾ ಅವರನ್ನು ಸನ್ಮಾನಿಸಲಾಯಿತು.

ಹಾಸ್ಯ ಲೋಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ. ಪರಶುರಾಮಪ್ರಿಯ ಅವರು 17 ವರ್ಷಗಳಿಂದ ನಡೆಯುತ್ತ ಬಂದಿರುವ ಹಾಸ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಆನಂತರ ಜ್ಯೂ. ವಿಷ್ಣುವರ್ಧನ ಅವರಿಂದ ನೃತ್ಯರೂಪಕ ನಡೆಯಿತು. ಈ ವೇಳೆ ಹಾಸ್ಯ ಸಾಹಿತಿ ಬಿ. ಪ್ರಾಣೇಶ, ಇಂದುಮತಿ ಸಾಲಿಮಠ, ಡಾ. ಬಸವರಾಜ ಬೆಣ್ಣೆ, ಚಿದಾನಂದ ಕೀರ್ತಿ ಅವರಿಂದ ಹಾಸ್ಯ ಸಂಜೆ ಜರುಗಿತು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯಸ್ವಾಮಿ, ಬಿಜೆಪಿ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ. ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯ ವಾಸುದೇವ ನವಲಿ, ಪತ್ರಕರ್ತರಾದ ರಾಮಮೂರ್ತಿ ನವಲಿ, ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಪತ್ರಕರ್ತ ಎಂ.ಜೆ. ಶ್ರೀನಿವಾಸ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ನಾಗರಾಜ್ ಇಂಗಳಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶರಣಬಸಪ್ಪನಾಯಕ, ಚಿತ್ರ ನಟ ವಿಷ್ಣು ಜೋಷಿ, ಪಿಜಿಬಿ ಬ್ಯಾಂಕ್ ನಿವೃತ್ತ ಅಧಿಕಾರಿ ಟಿ. ಆಂಜನೇಯ, ಡಾ. ಶಿವಕುಮಾರ ಮಾಲೀಪಾಟೀಲ್, ವೆಂಕಣ್ಣ, ನಗರಸಭಾ ಸದಸ್ಯೆ ಸುನೀತಾ ಶ್ಯಾವಿ ಭಾಗವಹಿಸಿದ್ದರು.

ಎಸ್.ಎಂ. ಪಟೇಲ್ ಪ್ರಾರ್ಥಿಸಿದರು, ಸಿ. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಎಂ. ಪರಶುರಾಮಪ್ರಿಯ ವಂದಿಸಿದರು.