ಸಾರಾಂಶ
eighth year celebration of target group
ಚಿತ್ರದುರ್ಗ: ನಗರದ ಬ್ಯಾಂಕ್ ಕಾಲೋನಿಯ ಮುರುಘರಾಜೇಂದ್ರ ಆಟದ ಮೈದಾನದಲ್ಲಿ ಟಾರ್ಗೆಟ್ ಗ್ರೂಪ್ ವತಿಯಿಂದ 8ವರ್ಷದ ಸಂಭ್ರಮಾಚರಣೆ ನಿಮಿತ್ತ 81ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಟಾರ್ಗೆಟ್ ಗ್ರೂಪ್‍ನ ಮುಖ್ಯಸ್ಥ ಸಿದ್ದರಾಜು ಮಾತಾಡಿ, ಜನರು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಬದಲಾಗಿ ಎಲ್ಲ ಕಡೆ ಗಿಡಗಳು ಚೆನ್ನಾಗಿ ಬೆಳೆಸಿದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಯಾಗಿ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತದೆ ಎಂದರು. ಬ್ಯಾಂಕ್ ಕಾಲೋನಿ ನಿವಾಸಿ ನಾಗರಾಜ್ ಸಂಗಮ್, ಕಿರಣ್ ಶಂಕರ್, ರಾಜಶೇಖರ್, ತಿಪ್ಪೇಸ್ವಾಮಿ, ವರ್ಷ, ಅಧಿಕಾರಿ ಮಹನಂದಿ, ಚಂದ್ರಹಾಸ, ರೇಣುಕಮ್ಮ ಮತ್ತು ನಾಗರಾಜ್ ಹೇಮಂತ್ ಹಾಗೂ ಟಾರ್ಗೆಟ್ ಗ್ರೂಪ್‍ನ ಸದಸ್ಯರು ಇದ್ದರು.
-------------ಫೋಟೋ: 8 ಸಿಟಿಡಿ 4