ರಟ್ಟೀಹಳ್ಳಿಯಲ್ಲಿ ಇ- ಕೆವೈಸಿ ಅಭಿಯಾನಕ್ಕೆ ಚಾಲನೆ

| Published : Sep 14 2025, 01:05 AM IST

ರಟ್ಟೀಹಳ್ಳಿಯಲ್ಲಿ ಇ- ಕೆವೈಸಿ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ಎನ್ಎಂಎಂಎಸ್ ಇ- ಕೆವೈಸಿ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್. ಚಾಲನೆ ನೀಡಿದರು.

ರಟ್ಟೀಹಳ್ಳಿ: ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಮೌಲ್ಯೀಕರಣವನ್ನು ಇ- ಕೆವೈಸಿ ಮುಖಾಂತರ ಪೂರ್ಣಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್. ತಿಳಿಸಿದರು.ತಾಲೂಕಿನ ಮಕರಿ ಗ್ರಾಮದಲ್ಲಿ ಎನ್ಎಂಎಂಎಸ್ ಇ- ಕೆವೈಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಪ್ರಾಯೋಗಿಕವಾಗಿ 5 ಜಿಲ್ಲೆಗಳಲ್ಲಿ ಎಲ್ಲ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಮೌಲ್ಯೀಕರಣ ಅಭಿಯಾನದ ಮೂಲಕ ಸೆ. 30ರೊಳಗಾಗಿ ಇ- ಕೆವೈಸಿ ಮುಖಾಂತರ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅದರಂತೆ ತಾಲೂಕಿನ 19 ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗೆ ತರಬೇತಿ ನೀಡಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್ಎಂಎಂಎಸ್ ಇ- ಕೆವೈಸಿ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡುವ ಬಗ್ಗೆ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಡಂಗುರ ಸಾರುವುದು, ರೋಜಗಾರ್ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಅರಿವು ಮೂಡಿಸಲು ಈಗಾಗಲೇ ಸೂಚಿಸಿದ್ದು, ಗ್ರಾಪಂ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.

ಸಹಾಯಕ ನಿರ್ದೇಶಕರಾದ ಪ್ರದೀಪ್ ಗಣೇಶ್ಕರ್ ಮಾತನಾಡಿ, ಈ ತಿಂಗಳ ಅಂತ್ಯದೊಳಗೆ ನರೇಗಾ ಕೂಲಿಕಾರರು ಎನ್ಎಂಎಂಎಸ್ ಇ- ಕೆವೈಸಿ ಮಾಡಿಸಿಕೊಳ್ಳಬೇಕು. ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಿಡಿಒ, ಕಾರ್ಯದರ್ಶಿ, ಡಿಇಒ, ಬಿಎಫ್ಟಿ, ಜಿಕೆಎಂ ಅವರನ್ನು ಸಂಪರ್ಕಿಸಿದರೆ ಉಚಿತವಾಗಿ ಇ- ಕೆವೈಸಿ ಮಾಡಿಕೊಡಲಾಗುತ್ತದೆ ಎಂದರು.

ಮಕರಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ದಿನ ಒಂದು ಲಕ್ಷಕ್ಕೂ ಅಧಿಕ ಕರ ವಸೂಲಿ ಮಾಡಿದ ಪಿಡಿಒ, ಸಿಬ್ಬಂದಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಸನ್ಮಾನಿಸಿದರು.ತಾಲೂಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ಪಿಡಿಒ ಗಣೇಶ ಬಿದರಿ, ಕಾರ್ಯದರ್ಶಿ ಸೈಯದಾಪ್ರೀದಿ ಸೆರೆಗಾರ್, ಸಿಬ್ಬಂದಿ ಚಂದ್ರು, ಪ್ರಶಾಂತ, ಗೀತಾ ಉಪಸ್ಥಿತರಿದ್ದರು.