ಸಾರಾಂಶ
ಚುನಾವಣಾ ಕರ್ತವ್ಯ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಯ ಆತಂಕಪಡಬಾರದು. ಯಾವುದೇ ಸಂದೇಹಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು.
ಹೂವಿನಹಡಗಲಿ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕರ್ತವ್ಯವನ್ನು ಹೊರೆ ಎಂದು ಭಾವಿಸದೇ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕೆಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಇಲ್ಲಿನ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಗಳ ತರಬೇತಿ ವೀಕ್ಷಿಸಿಸುವ ಜತೆಗೆ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಕರ್ತವ್ಯ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಯ ಆತಂಕಪಡಬಾರದು. ಯಾವುದೇ ಸಂದೇಹಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಕರ್ತವ್ಯವನ್ನು ನಿರ್ಲಕ್ಷಿಸದೇ ಎಲ್ಲ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಶ್ರಮಿಸಬೇಕಿದೆ, ಪಕ್ಷಪಾತ ಮಾಡದೇ ವಿಶ್ವಾಸದಿಂದ, ಮುಕ್ತ ಮನಸ್ಸಿನಿಂದ ಕೆಲಸ ಮಾಡಬೇಕೆಂದು ಹೇಳಿದರು.ಸಹಾಯಕ ಚುನಾವಣಾಧಿಕಾರಿ ರಮೇಶಕುಮಾರ್, ತಹಸೀಲ್ದಾರ್ ಟಿ.ಜಗದೀಶ, ಜಿಲ್ಲಾ ತರಬೇತುದಾರ ಎ. ಕೊಟ್ರಗೌಡ, ತಾಲೂಕ ಮಟ್ಟದ ತರಬೇತುದಾರರು ಉಪಸ್ಥಿತರಿದ್ದರು.
650 ಜನ ಚುನಾವಣಾ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕೋಮಾರನಹಳ್ಳಿ ತಾಂಡಾ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಭೇಟಿ ನೀಡಿ ಪರಿಶೀಲಿಸಿದರು. ಅಂತರ್ ಜಿಲ್ಲಾ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಚುನಾವಣಾ ಅಕ್ರಮ ಎಸಗುವವರ ಮೇಲೆ ನಿಗಾ ಇಡಬೇಕೆಂದು ಹೇಳಿದರು.