ಸಾರಾಂಶ
ಕನಕಪುರ: ತಾಲೂಕಿನ ಕಸಬಾ ಹೋಬಳಿಯ ಚೌಕಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ರಾಮನಾಯಕ್ ಅಧ್ಯಕ್ಷರಾಗಿ, ರಮೇಶ್ ನಾಯಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನಕಪುರ: ತಾಲೂಕಿನ ಕಸಬಾ ಹೋಬಳಿಯ ಚೌಕಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ರಾಮನಾಯಕ್ ಅಧ್ಯಕ್ಷರಾಗಿ, ರಮೇಶ್ ನಾಯಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರಾಮ ನಾಯಕ್ ಹಾಗೂ ರಮೇಶ್ ನಾಯಕ್ ಇಬ್ಬರೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ರಾಮನಾಯಕ್ ಮಾತನಾಡಿ, ಚೌಕಸಂದ್ರದಲ್ಲಿ ನೂತನ ಡೈರಿ ಅಸ್ತಿತ್ವಕ್ಕೆ ಬಂದಿದ್ದು ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ಸದಸ್ಯರು ಹಾಗೂ ನಿರ್ದೇಶಕರ ಸಹಕಾರದಿಂದ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಉದ್ದೇಶ. ಹತ್ತಾರು ವರ್ಷಗಳಿಂದ ನಮ್ಮ ಗ್ರಾಮದ ಹಾಲು ಉತ್ಪಾದಕರು ಅಕ್ಕಪಕ್ಕದ ಗ್ರಾಮದ ಡೈರಿಗಳಿಗೆ ಸರಬರಾಜು ಮಾಡುತ್ತಿದ್ದರು. ಈಗ ಗ್ರಾಮದಲ್ಲೇ ಡೈರಿ ತೆರೆದಿರುವುದು ಹಾಲು ಉತ್ಪಾದಕರಿಗೆ ಅನುಕೂಲವಾಗಿದೆ. ಗ್ರಾಮದ ಅಭಿವೃದ್ಧಿಯೇ ನಮ್ಮ ಕರ್ತವ್ಯ ಎಂದರು.ಗ್ರಾಪಂ ಅಧ್ಯಕ್ಷೆ ಶಾಂತಿಭಾಯಿ ರವಿನಾಯಕ ಮಾತನಾಡಿ, ಚೌಕಸಂದ್ರದಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ಜನಾಂಗ, ಲಂಬಾಣಿ ಸಮುದಾಯಕ್ಕೆ ಸೇರಿದ ಎಲ್ಲರೂ ಆರ್ಥಿಕವಾಗಿ ಹಿಂದುಳಿದಿದ್ದು, ಬಹುತೇಕರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮಳೆ, ಗಾಳಿ, ಚಳಿಯಲ್ಲೂ ಅಕ್ಕಪಕ್ಕದ ಗ್ರಾಮಗಳಿಗೆ ಮೂರ್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಹಾಲು ಹಾಕಿ ಬರುತ್ತಿದ್ದರು. ಇದನ್ನು ಗಮನಿಸಿ ನಾವು ನಮ್ಮ ಊರಿನಲ್ಲೇ ಡೈರಿ ತೆರೆದವು. ಗ್ರಾಮದ ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ಗ್ರಾಪಂ ಸದಸ್ಯ ಲಲಿತಾಬಾಯಿ ಮಾದೇವನಾಯಕ್, ಮಾಜಿ ಸದಸ್ಯೆ ಧನಲಕ್ಷ್ಮಿಬಾಯಿಬಾಲನಾಯಕ್, ತಾಪಂ ಮಾಜಿ ಸದಸ್ಯೆ ಧನಲಕ್ಷ್ಮಿಬಾಯಿ ಚಂದ್ರನಾಯಕ್, ಸಂಘದ ಮುಖ್ಯ ಪ್ರವರ್ತಕ ಜಯರಾಮನಾಯಕ್ ಎಲ್ ಜಿ, ನಿರ್ದೇಶಕರಾದ ಗೋವಿಂದನಾಯಕ್, ಧನಂಜಯನಾಯಕ್, ಸಿದ್ದರಾಜ ನಾಯಕ್, ಗೋಪಾಲ ನಾಯಕ್, ರೂಪಾಬಾಯಿ, ಎಸ್.ಗೋವಿಂದ ನಾಯಕ್, ಜ್ಯೋತಿಬಾಯಿ, ಮುಖಂಡರಾದ ಶಿವಕುಮಾರ್, ನಾಯಕ್ ಶಿವಣ್ಣನಾಯಕ್, ಉಮೇಶ ನಾಯಕ್, ವೆಂಕಟಸ್ವಾಮಿ, ಬಾಬುರಿ ನಾಯಕ್, ಶ್ರೀನಿವಾಸನಾಯಕ್ ಇತರರು ಹಾಜರಿದ್ದರು.ಕೆಕೆಪಿ ಸುದ್ದಿ 1
ಕನಕಪುರ ತಾಲೂಕಿನ ಕಸಬಾ ಹೋಬಳಿ ಚೌಕಸಂದ್ರದ ನೂತನ ಡೈರಿ ಅಧ್ಯಕ್ಷ ರಾಮನಾಯಕ್ ಉಪಾಧ್ಯಕ್ಷ ರಮೇಶ್ ನಾಯಕ್ ಅವರನ್ನು ಸಂಘದ ಸದಸ್ಯರು, ನಿರ್ದೇಶಕರು ಅಭಿನಂದಿಸಿದರು.