ನಿರ್ದೇಶಕರ ಚುನಾವಣೆ: ನಾಮಪತ್ರ ಸಲ್ಲಿಸಲು ಅ.18 ಕೊನೆ ದಿನ

| Published : Oct 17 2024, 12:55 AM IST

ನಿರ್ದೇಶಕರ ಚುನಾವಣೆ: ನಾಮಪತ್ರ ಸಲ್ಲಿಸಲು ಅ.18 ಕೊನೆ ದಿನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಗೆ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅ.18 ಕೊನೆಯ ದಿನವಾಗಿದೆ. ಅ.16 ರವರೆಗೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ತಿಳಿಸಿದ್ದಾರೆ.

- ಅ.16 ರವರೆಗೆ 25 ನಾಮಪತ್ರಗಳು ಸಲ್ಲಿಕೆ: ಚುನಾವಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ಮಾಹಿತಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಗೆ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅ.18 ಕೊನೆಯ ದಿನವಾಗಿದೆ. ಅ.16 ರವರೆಗೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ತಿಳಿಸಿದ್ದಾರೆ.

ತಾಲೂಕಿನಲ್ಲಿ 24 ಸರ್ಕಾರಿ ಇಲಾಖೆಗಳಿದ್ದು. ಇಲಾಖಾವಾರು ಮತದಾರರು ಇದ್ದಾರೆ. ಕೃಷಿ ಇಲಾಖೆಯಲ್ಲಿ 10, ಪಶುಪಾಲನಾ ಇಲಾಖೆಯಲ್ಲಿ 47, ಕಂದಾಯ ಇಲಾಖೆಯಲ್ಲಿ 29 ಮತದಾರರಿದ್ದರೆ, ಇದೇ ಇಲಾಖೆಗೆ ಸಂಬಂಧಪಟ್ಟಂತೆ ಕ್ಷೇತ್ರ ಸಿಬ್ಬಂದಿ ಮತದಾರರು 60, ಲೋಕೋಪಯೋಗಿ ಇಲಾಖೆಯಲ್ಲಿ 11, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ 10, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 939, ಸರ್ಕಾರಿ ಪ್ರೌಢಶಾಲೆಯಲ್ಲಿ 311, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿಯಲ್ಲಿ 15, ಸರ್ಕಾರಿ ಪ.ಪೂ. ಕಾಲೇಜಿನಲ್ಲಿ 68, ಸರ್ಕಾರಿ ಪದವಿ ಕಾಲೇಜಿನಲ್ಲಿ 56, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆಯಲ್ಲಿ 42, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯಲ್ಲಿ 40, ಅರಣ್ಯ ಇಲಾಖೆಯಲ್ಲಿ 49, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 37, ಸಾರ್ವಜನಿಕ ಆಸ್ಫತ್ರೆಯಲ್ಲಿ 37, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ 3, ಆರೋಗ್ಯ ಇಲಾಖೆಯ ಉಳಿದ ಸಿಬ್ಬಂದಿ 226, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 14, ಖಜಾನೆ ಇಲಾಖೆ 6, ಭೂಮಾಪನ ಭೂದಾಖಲೆಗಳು ,ಮತ್ತು ನೊಂದಣಿ ಮತ್ತು ಮುದ್ರಾಂಕಗಳ ಇಲಾಖೆ 29, ನ್ಯಾಯಾಂಗ ಇಲಾಖೆ 71, ತಾಲೂಕು ಪಂಚಾಯಿತಿ ಕಚೇರಿ 5 ಮತದಾರರು ಇದ್ದಾರೆ.

ಇದೇ ಇಲಾಖೆಯ ಉಳಿದ ಸಿಬ್ಬಂದಿ 116, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 11, ಮೀನುಗಾರಿಕೆ, ತೂಕ ಮತ್ತು ಅಳತೆ ಇಲಾಖೆ, ಪೌರಾಡಳಿತ ಇಲಾಖೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಹಾಗೂ ಸಾಂಖ್ಯಿಕ ಇಲಾಖೆ 4, ಆಹಾರ ಮತ್ತು ನಾಗರೀಕ ಸರಬರಾಜು, ಕೃಷಿ ಉತ್ಫನ್ನ ಮಾರುಕಟ್ಟೆ ಇಲಾಖೆ 9, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆ 6, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ 20 ಸೇರಿದಂತೆ ಒಟ್ಟು 2244 ಮತದಾರರು 34 ಜನ ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿವರಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 4 ನಿರ್ದೇಶಕರ ಆಯ್ಕೆಗೆ ಅವಕಾಶವಿದ್ದು, ಸರ್ಕಾರಿ ಪ್ರೌಢಶಾಲೆಗಳಿಂದ 2 ಜನ, ಇನ್ನುಳಿದಂತೆ ಎಲ್ಲ ಇಲಾಖೆಯಿಂದ ತಲಾ ಒಂದೊಂದು ಸ್ಥಾನದ ನಿರ್ದೇಶಕರ ಆಯ್ಕೆ ಆಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

- - - -16ಕೆಸಿಎನ್ಜಿ1: ರವೀಂದ್ರಕುಮಾರ್ ಅಥರ್ಗ, ಚುನಾವಣಾಧಿಕಾರಿ