ಸಾರಾಂಶ
ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಚ್.ಬಿ. ಬಸವೇಶ್ ನೇತೃತ್ವದ ತಂಡ 6 ಸ್ಥಾನದಲ್ಲಿ ಗೆಲ್ಲುವು ಸಾಧಿಸುವ ಮೂಲಕ ಸತತ 4ನೇ ಬಾರಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಸಹಕಾರ ಸಂಘಗಳಲ್ಲಿಯೇ ಅತಿಹೆಚ್ಚು ಮತದಾರರನ್ನು ಹೊಂದಿರುವ ಹಿಟ್ಟನಹಳ್ಳಿಕೊಪ್ಪಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಚ್.ಬಿ. ಬಸವೇಶ್ ನೇತೃತ್ವದ ತಂಡ 6 ಸ್ಥಾನದಲ್ಲಿ ಗೆಲ್ಲುವು ಸಾಧಿಸುವ ಮೂಲಕ ಸತತ 4ನೇ ಬಾರಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.ಹಿಟ್ಟನಹಳ್ಳಿ ಸರ್ಕಾರಿ ಶಾಲೆಯಲ್ಲಿ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 22 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆದು 6 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಜಿ.ರಾಮಕೃಷ್ಣ ಕಾರ್ಯನಿರ್ವಹಿಸಿದರು. ಸಿಇಒ ಹೊನ್ನೇಗೌಡ ಇದ್ದರು.
ಕಾಂಗ್ರೆಸ್‌ನ ಹಿಟ್ಟನಹಳ್ಳಿಕೊಪ್ಪಲಿನ ಹಾಲಿ ಅಧ್ಯಕ್ಷ ಎಚ್.ಬಿ.ಬಸವೇಶ್, ಸಿ.ಅನಿತಾ, ಕಾಂತರಾಜು, ಎಚ್.ಕೆ.ಶಿವಕುಮಾರ್, ಬೋರಲಿಂಗೇಗೌಡ, ಎಚ್.ಇ.ಮೋಹನ್ ಕುಮಾರ್ ಹಾಗೂ ಜೆಡಿಎಸ್ ನ ಎಚ್.ಆರ್.ಪ್ರಮೋದ್ ಕುಮಾರ್, ಎಚ್.ಎಂ.ಭಾಗ್ಯ, ಕರಿಯಯ್ಯ, ರುದ್ರೇಗೌಡ, ಎಂ.ಸಿ.ಬಾಲರಾಜು ಗೆಲುವು ಸಾಧಿಸಿದರು.ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಪರ ಘೋಷಣೆಯೊಂದಿಗೆ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.
ಎಚ್.ಬಿ.ಬಸವೇಶ್ ಮಾತನಾಡಿ, ಷೇರುದಾರರ ಸಹಕಾರದೊಂದಿಗೆ ಕಳೆದ 2010ರಿಂದಲೂ ನಿರಂತರವಾಗಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯುತ್ತಿದ್ದಾರೆ. ನಮ್ಮ ಮೇಲೆ ನಂಬಿಕೆಇಟ್ಟು ಗೆಲುವು ತಂದುಕೊಟ್ಟ ಷೇರುದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘವನ್ನು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುವುದರ ಜೊತೆಗೆ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸಲು ಶ್ರಮಿಸುವುದಾಗಿ ಹೇಳಿದರು.ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ನಿರ್ದೇಶಕರಾದ ಕೆ.ಎಸ್.ದ್ಯಾಪೇಗೌಡ, ಎಂ.ಲಿಂಗರಾಜು, ಸವಿತಾ, ಕಾಂಗ್ರೆಸ್ ನ ಎಸ್ಸಿ ಎಸ್ಟಿ ವಿಭಾಗದ ತಾಲೂಕು ಘಟಕದ ಅಧ್ಯಕ್ಷ ಶಾಂತರಾಜು ಸೇರಿದಂತೆ ಇತರರು ಇದ್ದರು.