ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ

| Published : Jun 18 2024, 12:50 AM IST

ಸಾರಾಂಶ

ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. . ಜೂನ್ 15ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು.

ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಜೂನ್ 6ರಂದು ಶಾಲೆಯ ಚುನಾವಣಾ ಅಭ್ಯರ್ಥಿಗಳು ಶಾಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು. ಜೂನ್ 11ರಿಂದ ಜೂನ್ 13ರ ವರೆಗೆ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ 5 ರಿಂದ 10ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಜೂನ್ 15ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ ಹತ್ತನೇ ತರಗತಿಯ ಸಾಕ್ಷಿ, ಗೃಹ ಮಂತ್ರಿಯಾಗಿ ಅಬೂಬಕ್ಕರ್ ನವವಿ (10ನೇ ತರಗತಿ) ಸಂವಹನ ಮಂತ್ರಿಯಾಗಿ ಖತಿಜಾ ಇಫ್ಹಾ (10ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಶುಭಂ ಶೆಟ್ಟಿ (10ನೇ ತರಗತಿ), ಶಿಕ್ಷಣ ಮಂತ್ರಿಯಾಗಿ ನಿಧಿಶಾ (9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಪ್ರಗತಿ (9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕುಮಾರ್ ಎಲ್. (9ನೇ ತರಗತಿ) ಹಾಗೂ ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ದೀಪಿತ್ (8ನೇ ತರಗತಿ) ಚುನಾಯಿತರಾದರು.ಸಹಾಯಕ ಮಂತ್ರಿಗಳಾಗಿ ಪ್ರಾಥಮಿಕ ವಿಭಾಗದಿಂದ ಯಶಸ್ವಿ ಟಿ.ಎಂ. (7ನೇ ತರಗತಿ), ದಿಯಾ ವೈ. ಶೆಟ್ಟಿ (7ನೇ ತರಗತಿ), ಸನ್ನಿಧಿ ಎಲ್.ಎಸ್. (5ನೇ ತರಗತಿ), ಮುಹಮ್ಮದ್ ಫಹ್ಮಾನ್ (7ನೇ ತರಗತಿ), ಸಾತ್ವಿಕ್ ಕೆ. (6ನೇ ತರಗತಿ), ಕೌಶಲ್ ಬಿ. (5ನೇ ತರಗತಿ), ಸುಶಾನ್ (6ನೇ ತರಗತಿ) ಹಾಗೂ ಜಿ.ಎಸ್. ರಿಷಿಕ್ ಅಂಚನ್ (5ನೇ ತರಗತಿ) ಚುನಾಯಿತರಾದರು.

ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ದರ್ಬೆ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ಲೀಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ಶೋಭಾ ಎಂ. ಶೆಟ್ಟಿ ಉಪ ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಸಿದರು. ಶಿಕ್ಷಕಿ ರಶ್ಮಿ ಕೆ. ಫರ್ನಾಂಡೀಸ್ ಚುನಾವಣಾ ಫಲಿತಾಂಶ ಘೋಷಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಸಹಕರಿಸಿದರು.