ಸಾರಾಂಶ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಯವರೆಗೆ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆ ಅಕ್ಟೋಬರ್ 28ರಂದು ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿ ಹಾಗೂ ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ತಿಳಿಸಿದ್ದಾರೆ.
- ಚುನಾವಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ಮಾಹಿತಿ - - - ಚನ್ನಗಿರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಯವರೆಗೆ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆ ಅಕ್ಟೋಬರ್ 28ರಂದು ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿ ಹಾಗೂ ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ ತಿಳಿಸಿದ್ದಾರೆ. ನಿರ್ದೇಶಕರ ಚುನಾವಣೆಗೆ ಸ್ಫರ್ಧಿಸಲು ಅ.9ರಿಂದ ನಾಮಪತ್ರ ಸಲ್ಲಿಸಲು ಆರಂಭಗೊಂಡಿದೆ. ನಾಮಪತ್ರಗಳನ್ನು ಸಲ್ಲಿಸಲು ಅ.18 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಅ.19ರಂದು ನಡೆಯಲಿದೆ. ಅದೇ ದಿನ ಸಂಜೆ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.
ನಾಮಪತ್ರಗಳನ್ನು ವಾಪಸ್ ಪಡೆಯಲು ಅ.21ರಂದು ಸಂಜೆ 4.30ರವರೆಗೆ ಕಾಲವಕಾಶ ಇದೆ. ಅದೇ ದಿನ ಸಂಜೆ 5.30ಕ್ಕೆ ಅಧಿಕೃತವಾದ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು. ಮತದಾನ ಮಾಡಲು ಪಟ್ಟಣದ 2 ಕಡೆಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.ಅ.28ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅನಂತರ ವಿಜೇತ ನಿರ್ದೇಶಕರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಚುನಾವಣೆಗೆ 34 ಅಭ್ಯರ್ಥಿಗಳು ಸ್ಫರ್ಧಿಸಲು ಅವಕಾಶಗಳಿದ್ದು, ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳ 2224 ಮತದಾರರು ತಮ್ಮ ಮತಹಕ್ಕು ಚಲಾವಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.- - - -9ಕೆಸಿಎನ್‌ಜಿ2: ರವೀಂದ್ರಕುಮಾರ್