ಸಾರಾಂಶ
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಫಲಿತಾಂಶ । ಕಳೆದ ವಿಧಾನಸಭಾ ಚುನಾವಣೆ ಬೆಟ್ಟಿಂಗ್‌ನಲ್ಲಿ ಕೈ ಬದಲಾದ ಕೋಟ್ಯಾಂತರ ರುಪಾಯಿ
ಆರ್.ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರಾವಳಿ ಹಾಗೂ ಬೃಹತ್ ನಗರಗಳಿಗೆ ಸೀಮಿತವಾಗಿದ್ದ ಬೆಟ್ಟಿಂಗ್ ದಂಧೆ ಚಿಕ್ಕಮಗಳೂರಿಗೆ ಕಾಲಿಟ್ಟು ಸುಮಾರು ಎರಡು ದಶಕ ಕಳೆದಿದೆ. ಮೊದಲು ಕ್ರಿಕೆಟ್‌ಗೆ ಸಿಮೀತವಾಗಿದ್ದ ಈ ದಂಧೆ ಚುನಾವಣಾ ಫಲಿತಾಂಶದ ಏಳು ಬೀಳುಗಳ ಮೇಲೂ ಕಣ್ಣಿಟ್ಟಿತು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಒಂದರಲ್ಲೇ ಸುಮಾರು 25 ಕೋಟಿ ರುಪಾಯಿ ಕೈ ಬದಲಾವಣೆಯಾಗಿದೆ. ಇದರಲ್ಲಿ ಹೆಚ್ಚಿನ ಮಂದಿ ಹಣ ಕಳೆದುಕೊಂಡವರು ಒಂದೇ ರಾಜಕೀಯ ಪಕ್ಷದ ಮುಖಂಡರು.ಸಿ.ಟಿ. ರವಿ ಗೆಲ್ಲುತ್ತಾರೆಂದು ಹಣ ಕಟ್ಟಿದವರೇ ಹೆಚ್ಚು ಮಂದಿ. ಎಚ್.ಡಿ. ತಮ್ಮಯ್ಯ ಅವರು ಪರಾಭವಗೊಳ್ಳಲಿದ್ದಾರೆ ಎಂಬ ಅಂದಾಜಿನಲ್ಲಿ ಹಣ ಕಟ್ಟಿ ಕಳೆದುಕೊಂಡರು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಣ ಕಟ್ಟಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಕಾರಣ, ಫಲಿತಾಂಶ ನಿಖರವಾಗಿ ಹೇಳಲು ಕಷ್ಟವಾಗುತ್ತಿದೆ.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಫಲಿತಾಂಶದಂತೆ ತದ್ವಿರುದ್ಧವಾಗಿ ಬಂದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಒಮ್ಮೆ ಪೆಟ್ಟು ತಿಂದವರು ಮತ್ತೆ ಅದೇ ತಪ್ಪು ಮಾಡಲು ಸಿದ್ಧರಿಲ್ಲ. ಮತದಾನ ಮುಗಿಯುತ್ತಿದ್ದಂತೆ ಬೆಟ್ಟಿಂಗ್ ದಂಧೆ ಆರಂಭವಾಗಬೇಕಾಗಿತ್ತು. ಆದರೆ, ಈ ರೀತಿಯ ಬೆಳವಣಿಗೆ ಈವರೆಗೆ ನಡೆದಿಲ್ಲ. ಲೋಕಸಭಾ ಚುನಾವಣಾ ಫಲಿತಾಂಶ ಜೂನ್ 4 ಕ್ಕೆ ಇರುವುದರಿಂದ ಬೆಟ್ಟಿಂಗ್ ಕೊನೆಯ ಹಂತದಲ್ಲಿ ಆರಂಭವಾಗಬಹುದೆಂದು ಹೇಳಲಾಗುತ್ತಿದೆ.ಗೊಂದಲ:
ಚುನಾವಣಾ ಫಲಿತಾಂಶದ ಮೇಲೆ ಬೆಟ್ಟಿಂಗ್ ಆಡುವವರು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು. ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಂಬ ಅತಿಯಾದ ವಿಶ್ವಾಸದಿಂದ ಹಣ ಹಾಕುತ್ತಾರೆ. ಆದರೆ, ಸದ್ಯ ಲೋಕಸಭಾ ಚುನಾವಣೆಯಲ್ಲಿ ವಿಶ್ವಾಸದ ಮೇಲೆ ಹಣ ಕಟ್ಟುವ ಪರಿಸ್ಥಿತಿ ಇಲ್ಲ.ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಮತ ಪಡೆಯಲಿದ್ದಾರೆ ಎಂಬುದು ಜನರ ನಡುವೆ ಓಡಾಡುತ್ತಿರುವ ಲೆಕ್ಕಾಚಾರ. ಅದ್ದರಿಂದ ನಿಖರವಾಗಿ ಫಲಿತಾಂಶ ಹೇಳಲಾಗುವುದು ಕಷ್ಟ. ಬೆಟ್ಟಿಂಗ್‌ಗೆ ಹಣ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.ಬೆಟ್ಟಿಂಗ್ ದಂಧೆ:ಎಲ್ಲಾ ಕಾಲದಲ್ಲೂ ಬೆಟ್ಟಿಂಗ್ ಆಡುವವರು ಸದ್ದಿಲ್ಲದೆ ತಮ್ಮ ದಂಧೆಯನ್ನು ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ. ಅವರಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹೆಚ್ಚು ಮಂದಿ ಹಣ ಕಟ್ಟುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಫಲಿತಾಂಶಕ್ಕೆ ಕಡಿಮೆ ಮಂದಿ ಹಣ ಕಟ್ಟುತ್ತಿದ್ದಾರೆ. ಜೂನ್ 4 ರಂದು ಮತ ಎಣಿಕೆ ಇರುವುದರಿಂದ ಮೇ ಕೊನೆಯ ವಾರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಲಿದೆ ಎಂದು ಹೇಳಲಾಗುತ್ತಿದೆ.