ಕಾಡು ಕಡಿಮೆಯಾಗುತ್ತಿರುವುದರಿಂದ ಆನೆಗಳು ನಾಡಿಗೆ

| Published : May 02 2025, 11:46 PM IST

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಕಳೆದ ವರ್ಷ ೭ ಹಾಗೂ ಈ ವರ್ಷ ಒಂದು ಸಾವು ಸಂಭವಿಸಿದೆ. ಈ ಬಗ್ಗೆ ನಮಗೆ ವಿಷಾದ ಇದೆ. ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಕಾಡಿನಲ್ಲಿನ ಪ್ರಾಣಿಗಳು ನಾಡಿಗೆ ಬರಲು ಪ್ರಾರಂಭಿಸಿವೆದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು, ಬಿಕ್ಕೋಡು, ಸಕಲೇಶಪುರದ ಭಾಗಗಳಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಪ್ರಾಣಹಾನಿ ಮಾಡಿವೆ. ಈ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದು, ಆನೆಗಳ ಹಾವಳಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಲ್ಲಿ ಬಸವ ಜಯಂತಿ ಮತ್ತು ಶ್ರೀ ಶಿವಕುಮಾರಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆನೆಗಳು ನಾಡಿಗೆ ಬರದಂತೆ ತಡೆಯಲು ಆನೆ ಬ್ಯಾರಿಕೇಡರ್, ಆನೆ ಟ್ರಂಚ್, ಸೋಲಾರ್ ಫೆನ್ಸಿಂಗ್ ಹಾಕುವ ಕಾರ್ಯ ನಡೆಯುತ್ತಿದೆ. ಭದ್ರ ಅರಣ್ಯ ಪ್ರದೇಶದಲ್ಲಿ ಮುಂದಿನ ಡಿಸೆಂಬರ್‌ ಒಳಗಾಗಿ ಆನೆಗಳ ಸಾಫ್ಟ್ರೀಲಿಸ್ ಸೆಂಟರ್‌ ನಿರ್ಮಾಣ ಮಾಡಲಾಗುತ್ತದೆ ಮತ್ತು ಇದಕ್ಕಾಗಿ ಸರ್ಕಾರ ೫೩ ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು. ಆನೆಗಳ ದಾಳಿಯಿಂದ ಹಾನಿಗೊಳಗಾದವರ ಜೊತೆ ಚರ್ಚಿಸದೇ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದಾಗ, ಹಾನಿಗೊಳಗಾದವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಲ್ಲ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಮುಂದಿನ ದಿನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಮುಖಂಡರಾದ ಮಂಜೇಗೌಡ, ಮುಜಾಯಿದ್, ಪುಟ್ಟರಾಜು, ಬಾಬು, ಐಚನಹಳ್ಳಿ ರಾಮಚಂದ್ರ ಇದ್ದರು.