ಶಿವ ಸಹಸ್ರನಾಮದಿಂದ ಗ್ರಹದೋಷ ನಿವಾರಣೆ

| Published : Aug 24 2025, 02:00 AM IST

ಶಿವ ಸಹಸ್ರನಾಮದಿಂದ ಗ್ರಹದೋಷ ನಿವಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವ ಸಹಸ್ರನಾಮದಿಂದ ಗ್ರಹದೋಷಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಸುಖ-ನೆಮ್ಮದಿ ನೆಲೆಸುತ್ತದೆ. ದೈಹಿಕ-ಮಾನಸಿಕ ಆರೋಗ್ಯ ಸುಧಾರಣೆ, ಆರ್ಥಿಕ ಸ್ಥಿತಿ ವೃದ್ಧಿ, ಮನಶಾಂತಿ, ದೇವಿಯ ಆಶೀರ್ವಾದ ಹಾಗೂ ಗ್ರಹದೋಷ ಪರಿಹಾರವಾಗುತ್ತದೆ.

ಹನುಮಸಾಗರ:

ಶಿವ ಸಹಸ್ರನಾಮ ಪಠಣದಿಂದ ಆರೋಗ್ಯ, ಸಂಪತ್ತು, ಶಾಂತಿ ಮತ್ತು ದೈವಿಕ ಕೃಪೆ ದೊರೆಯುತ್ತದೆ. ಇದರಿಂದ ರೋಗಗಳು ಗುಣವಾಗುತ್ತವೆ ಎಂದು ಪ್ರವಚನಕಾರ ಶಿವಶಂಕರ ಮೆದಿಕೇರಿ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಶನಿವಾರ ಬೆಳಗ್ಗೆಯಿಂದ ಶಿವ ಸಹಸ್ರನಾಮ ಪಠಣ, ಭಜನೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಿವ ಸಹಸ್ರನಾಮದಿಂದ ಗ್ರಹದೋಷಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಸುಖ-ನೆಮ್ಮದಿ ನೆಲೆಸುತ್ತದೆ. ದೈಹಿಕ-ಮಾನಸಿಕ ಆರೋಗ್ಯ ಸುಧಾರಣೆ, ಆರ್ಥಿಕ ಸ್ಥಿತಿ ವೃದ್ಧಿ, ಮನಶಾಂತಿ, ದೇವಿಯ ಆಶೀರ್ವಾದ ಹಾಗೂ ಗ್ರಹದೋಷ ಪರಿಹಾರವಾಗುತ್ತದೆ. ಪ್ರತಿದಿನ ಭಕ್ತಿಯಿಂದ ಪಠಿಸುವುದು, ವಿಶೇಷವಾಗಿ ದಿನನಿತ್ಯ ಪಠಣಕ್ಕೆ ಮಹತ್ವವಿದ್ದು, ಇಷ್ಟಾರ್ಥಗಳನ್ನು ನೆನಪಿನಲ್ಲಿ ಇಟ್ಟು ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ ಎಂದರು.ಇದೇ ವೇಳೆ ಶ್ರಾವಣ ಮಾಸದ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ಹನಮಂತಗೌಡ ಸಿನ್ನೂರ, ರಾಮಣ್ಣ ಸಿನ್ನೂರ, ಶಂಕ್ರಪ್ಪ ಸಂಪ್ಪಡಿ, ಅಶೋಕ ಸಿನ್ನೂರ, ನಾರಾಯಣಪ್ಪ ಹುಲಮನಿ, ಮಂಜುನಾಥ ಸಿನ್ನೂರ, ಕುಡ್ಲೆಪ್ಪ ಸಿನ್ನೂರ, ಶಂಕ್ರಪ್ಪ ಹುಲಮನಿ, ಶಿವಶಂಕರ ಮೆದಿಕೇರಿ, ವಸಂತ ಸಿನ್ನೂರ, ಮಹೇಶ ಹುಲಮನಿ, ರಮೇಶ್ ಶೀಲವಂತರ, ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ವತ್ಸಲಾ ಸಿನ್ನೂರ, ವಿದ್ಯಾ ಸಪ್ಪಂಡಿ, ಸುನಂದಾ ಮೆದಿಕೇರಿ, ರೂಪಾ ಯರಗಲ್ಲ, ವಿಜಯಾ ಕಾಳಗಿ, ಸುಮಾ ಸಿನ್ನೂರ, ಗಂಗಮ್ಮ ಹುಲಮನಿ, ಶಿಲ್ಪಾ ಸಿನ್ನೂರ, ಸರಸ್ವತಿ ಸಿನ್ನೂರ, ವಿಜಯಲಕ್ಷ್ಮಿ ಕಾಳಗಿ, ಲಕ್ಷ್ಮೀ ಸಿನ್ನೂರ, ರಂಜಿತಾ ಹುಲಮನಿ, ಸವಿತಾ ಸಿನ್ನೂರ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು. ಪಟ್ಟಣದ ಎಸ್‌ಎಸ್‌ಕೆ ಸಮಾಜ, ಶಿವಸಮಸಾಲಿ ಸಮಾಜ, ಹಾಲುಮತ ಸಮಾಜದದಿಂದ ಶ್ರಾವಣ ಮಾಸದ ನಿಮಿತ್ತ ಭಜನೆ, ಅನ್ನಪ್ರಸಾದ, ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.