ಸಾರಾಂಶ
ಭಾರತ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್‌ನ್ನು ಸ್ಮರಿಸಬೇಕು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಪಾವಗಡಭಾರತ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್‌ನ್ನು ಸ್ಮರಿಸಬೇಕು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಭಾನುವಾರ ಏರ್ಪಾಡಿಸಿದ್ದ ಅಂಬೇಡ್ಕರ್ 133ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಮ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಭಾರತಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಅವರ ತತ್ವ, ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಾಪಂ ಇಒ ಜಾನಕಿರಾಮ್ ಮಾತನಾಡಿ, ಈ ದೇಶದ ಸುಭದ್ರತೆಗೆ ಸಂವಿಧಾನವೇ ಅಧಾರವಾಗಿದೆ. ಅಂಬೇಡ್ಕರ್ ಸಂವಿಧಾನ ರಚಿಸುವಲ್ಲಿ ಬಹಳ ಶ್ರಮಿಸಿದ್ದಾರೆ. ಎಲ್ಲರೂ ಅವರಂತೆ ಉನ್ನತ ಹುದ್ದೆ ಪಡೆಯಬೇಕು ಎಂದು ಹೇಳಿದರು.ಪ್ರಾಚಾರ್ಯ ಬಸವಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಸಾರಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ದೇಶದ ಪ್ರಗತಿಗೆ ನಾಂಧಿಯಾಗಿದೆ ಎಂದರು.ಟೋಲ್‌ಗೇಟ್ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಅಂಬೇಡ್ಕರ್ ಪ್ರಗತಿ ಪರ ವೇದಿಕೆ ಅಧ್ಯಕ್ಷ ಉಗ್ರಪ್ಪ, ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಜನಪರ ಹೋರಾಟಗಾರ ಡಿಜೆಎಸ್ ನಾರಾಯಣಪ್ಪ, ಡಿಎಸ್‌ಎಸ್ ಜಿಲ್ಲಾ ಸಂಘಟನೆ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ, ತಮಟೆ ಸಂಸ್ಥೆಯ ಸುಬ್ಬರಾಯಪ್ಪ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಎಡಿ ಮಲ್ಲಿಕಾರ್ಜುನಯ್ಯ, ತಾಲೂಕು ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕನ್ನಮೇಡಿ ಹನುಮಂತರಾಯಪ್ಪ, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಬಂಗಾರಪ್ಪ, ಬಿಇಒ ಇಂದ್ರಾಣಮ್ಮ, ರೇಷ್ಮೆ ಇಲಾಖೆಯ ಮುರಳೀಧರ್, ಬಿ.ಪಿ.ಪೆದ್ದನ್ನ, ಕಡಪಲಕರೆ ನರಸಿಂಹಪ್ಪ, ಡಿಎಸ್‌ಎಸ್ ತಾ.ಸಂಚಾಲಕ ಮೀನಗುಂಟೆನಹಳ್ಳಿ ನರಸಿಂಹಪ್ಪ, ಸಿದ್ದಪ್ಪ, ಕಂದಾಯ ಇಲಾಖೆಯ ರಾಜ್‌ಗೋಪಾಲ್, ರಾಜ್ ಕುಮಾರ್, ರಾಜು ಇದ್ದರು.