ಕೆಂಪೇಗೌಡರ ತತ್ವ, ಸಿದ್ಧಾಂತ, ಆದರ್ಶಗಳನ್ನು ಅಳವಡಿಸಿಕೊಳ್ಳಿ: ಸಚಿವ ಎಂ.ಸಿ.ಸುಧಾಕರ್

| Published : Jun 29 2024, 12:31 AM IST

ಕೆಂಪೇಗೌಡರ ತತ್ವ, ಸಿದ್ಧಾಂತ, ಆದರ್ಶಗಳನ್ನು ಅಳವಡಿಸಿಕೊಳ್ಳಿ: ಸಚಿವ ಎಂ.ಸಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತ ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡಣೆ ಮಾಡಲಿಲ್ಲ. ಎಲ್ಲ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದ್ದರು. ಅವರ ಆಡಳಿತ ಕಾಲದಲ್ಲೇ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಎಲ್ಲ ಜನಾಂಗದವರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಬೆಂಗಳೂರು ನಗರವನ್ನು ನಿರ್ಮಿಸಿದ್ದು, ಇಂದಿನ ಜನತೆ ಕೆಂಪೇಗೌಡರ ತತ್ವ- ಸಿದ್ಧಾಂತ, ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಉತ್ತಮ ವ್ಯಕ್ತಿಗಳಾಗಿ ಬಾಳಬೇಕೆಂದು ಉನ್ನತ ಶಿಕ್ಷಣ ಡಾ.ಎಂ.ಸಿ ಸುಧಾಕರ್ ಕರೆಯಿತ್ತರು.

ತಾಲೂಕು ಆಡಳಿತ, ತಾಪಂ ನಾಡಪ್ರಭು ಕೆಂಪೇಗೌಡರ ಕ್ಷೇಮಾಭಿವೃದ್ಧಿ ಟ್ರಸ್ಟ್, ಒಕ್ಕಲಿಗ ಸರ್ಕಾರಿ ನೌಕರರ ಸಂಘ ಸೇರಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಗ್ರಂಥಾಲಯದ ಆವರಣದಲ್ಲಿ ನಡೆದ ಕೆಂಪೇಗೌಡರ ೫೧೫ನೇ ಜಯಂತಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದ ಮಹಾನ್ ನಾಯಕರು. ಅವರ ನಿರ್ಮಾಣದ ಕನಸಿನ ನಗರ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿಯೂ ಮಾನ್ಯತೆ ಪಡೆದಿದೆ, ಜಾತಿ ಮತ, ಪಂಥ ಇಲ್ಲದೇ ಎಲ್ಲಾ ಜನಾಂಗದವರು ಬೆಂಗಳೂರು ನಗರದಲ್ಲಿ ವಾಸವಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ವೈಭವ ನೋಡಿ ಅದರಂತೆ ಬೆಂಗಳೂರು ನಿರ್ಮಿಸಲು ಪಣತೊಟ್ಟವರು, ಕೆಂಪೇಗೌಡರು ಎಲ್ಲಾ ಸಮಾಜದವರಿಗೂ ಒಂದೊಂದು ಪ್ರಾಂತ್ಯವನ್ನು ನಿರ್ಮಿಸಿದ್ದರು. ಸಮಾಜದ ಬಂಧುಗಳು ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸಬೇಕಿದೆಯೆಂದರು.

ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತ ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡಣೆ ಮಾಡಲಿಲ್ಲ. ಎಲ್ಲ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದ್ದರು. ಅವರ ಆಡಳಿತ ಕಾಲದಲ್ಲೇ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಸ್ಥಬ್ದ ಚಿತ್ರಗಳ, ವಿವಿಧ ಪಲ್ಲಕ್ಕಿಗಳ, ಜಾನಪದ ಕಲಾತಂಡಗಳ ವಿವಿಧ ವೇಷಧಾರಿಗಳ ಬೃಹತ್ ಮೆರವಣಿಗೆಗೆ ತಹಸೀಲ್ದಾರ್ ಸುದರ್ಶನ್ ಯಾದವ್ ಚಾಲನೆ ನೀಡಿದರು. ನಗರದ ಮುಖ್ಯ ಬೀದಿಗಳಲ್ಲಿ ಸ್ಥಬ್ದ ಚಿತ್ರಗಳ ಮೆರವಣಿಗೆ ಮಾಡಲಾಯಿತು. ಕುದರೆ ಸವಾರಿಯ ಕೆಂಪೇಗೌಡ ವೇಷಧಾರಿ ಗೌತಮ್ ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆದರು. ತಮಟೆ ವಾದ್ಯ, ಚಕ್ಕಲ ಭಜನೆ, ವೀರಗಾಸೆ, ಗಾರುಡಿಗೊಂಬೆ ಸೇರಿ ಹಲವು ಸಾಂಸ್ಕತಿಕ ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆದವು. ಸ್ಥಬ್ದ ಚಿತ್ರಗಳ ಮೆರವಣಿಗೆ ಕಾರ್ಯಕ್ರಮದಲ್ಲಿ ತಮಟೆ ವಾದ್ಯಗಳ ಸದ್ದಿಗೆ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು.

ತಹಸಿಲ್ದಾರ್ ಸುದರ್ಶನ್ ಯಾದವ್, ಇಒ ಆನಂದ್, ಪೌರಾಯಕ್ತ ಚಲಪತಿ, ಬಿಇಒ ಉಮಾದೇವಿ, ಡಿವೈಎಸ್ಪಿ ಮುರಳೀಧರ್, ಮುಖಂಡರಾದ ಆರ್.ವೆಂಕಟರಮಣರೆಡ್ಡಿ, ಈರುಳ್ಳಿ ಆರ್.ಕೆ.ಕೃಷ್ಣಾರೆಡ್ಡಿ, ಬೂರಗಮಾಕಲಹಳ್ಳಿ ಮಂಜುನಾಥರೆಡ್ಡಿ, ಕಡದನಮರಿ ಗ್ರಾ.ಪಂ ಮಾಜಿ ಅಧ್ಯಕ್ಷ ಬೈರೆಡ್ಡಿ, ಪಿ.ದೇವರಾಜ್, ರಘುನಾಥರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರೆಡ್ಡಿ, ಎಲೆಕ್ಟ್ರಿಕಲ್ ಕಾಂಟ್ರಾಕ್ಟ್ ಸುಬ್ಬಾರೆಡ್ಡಿ, ಕಲ್ಲಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಸೊಣ್ಣಪ್ಪ, ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ ಮುನಿರೆಡ್ಡಿ, ಕೃಷಿಕ ಸಮಾಜದ ಸಂತೇಕಲ್ಲಹಳ್ಳಿ ಗೋವಿಂದಪ್ಪ, ಟಿಎಪಿಸಿಎಂ ಎಸ್ ಅಧ್ಯಕ್ಷ ನಾಗೇಶ್ ಸೇರಿ ಎಲ್ಲಾ ನಗರಸಭಾ ಸದಸ್ಯರು ಹಾಗೂ ಒಕ್ಕಲಿಗ ಕುಲಭಾಂದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.