ಸಾರಾಂಶ
ಸತ್ಯ, ಅಹಿಂಸೆ, ನಮ್ಮ ಜೀವನದ ಅಂಗವಾಗಬೇಕು. ಹಿಂಸೆ ಎನ್ನುವುದು ಹಲವಾರು ಬಗೆಯಲ್ಲಿರುತ್ತದೆ. ಅವುಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ಹಿಂಸೆಗಳನ್ನು ಕಡಿಮೆ ಮಾಡಿಕೊಂಡಾಗ ಸಮಾಜ ನೆಮ್ಮದಿಯಾಗಿರುತ್ತದೆ. ಇದಕ್ಕೆ ಅಹಿಂಸಾ ತತ್ವಗಳ ಮೂಲ ಉದ್ದೇಶಗಳನ್ನು ಅಳವಡಿಸಿಕೊಳ್ಳಬೇಕು.
ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ೧೬ನೇ ಪ್ರತಿಜ್ಞಾ ವಾರ್ಷಿಕ ಪೂಜಾ ಮಹೋತ್ಸವ
೧೬ನೇ ಪ್ರತಿಜ್ಞಾ ವಾರ್ಷಿಕ ಪೂಜಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ಸಭೆ೧೬ನೇ ಪ್ರತಿಜ್ಞಾ ವಾರ್ಷಿಕ ಪೂಜಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ಚಾಮರಾಜನಗರಸತ್ಯ, ಅಹಿಂಸೆ, ನಮ್ಮ ಜೀವನದ ಅಂಗವಾಗಬೇಕು. ಹಿಂಸೆ ಎನ್ನುವುದು ಹಲವಾರು ಬಗೆಯಲ್ಲಿರುತ್ತದೆ. ಅವುಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ಹಿಂಸೆಗಳನ್ನು ಕಡಿಮೆ ಮಾಡಿಕೊಂಡಾಗ ಸಮಾಜ ನೆಮ್ಮದಿಯಾಗಿರುತ್ತದೆ. ಇದಕ್ಕೆ ಅಹಿಂಸಾ ತತ್ವಗಳ ಮೂಲ ಉದ್ದೇಶಗಳನ್ನು ಅಳವಡಿಸಿಕೊಳ್ಳಬೇಕು.ಕನ್ನಡಪ್ರಭ ವಾರ್ತೆ, ಚಾಮರಾಜನಗರಜೈನ ಧರ್ಮದ ಅಹಿಂಸಾ ತತ್ವಗಳನ್ನು ಅಗತ್ಯವಿರುವಷ್ಟು ಅಳವಡಿಸಿಕೊಂಡಾಗ ಮಾತ್ರ ಹಿಂಸೆಗಳು ಕಡಿಮೆಯಾಗಿ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದು ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ನಗರದ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ೧೬ನೇ ಪ್ರತಿಜ್ಞಾ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ನಡೆದ ಎರಡನೇ ದಿನದ ಕಾಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸತ್ಯ, ಅಹಿಂಸೆ, ನಮ್ಮ ಜೀವನದ ಅಂಗವಾಗಬೇಕು. ಹಿಂಸೆ ಎನ್ನುವುದು ಹಲವಾರು ಬಗೆಯಲ್ಲಿರುತ್ತದೆ. ಅವುಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ಹಿಂಸೆಗಳನ್ನು ಕಡಿಮೆ ಮಾಡಿಕೊಂಡಾಗ ಸಮಾಜ ನೆಮ್ಮದಿಯಾಗಿರುತ್ತದೆ. ಇದಕ್ಕೆ ಅಹಿಂಸಾ ತತ್ವಗಳ ಮೂಲ ಉದ್ದೇಶಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ತಾಯಂದಿರಿಂದಲೇ ಸಂಸ್ಕಾರ ಬರಲಿದ್ದು, ಪೂಜನೀಯವಾದ ಮಾತೃ ಶಕ್ತಿಯಿಂದ ಧರ್ಮದ ರಕ್ಷ ಣೆ ಆಗುತ್ತಿದೆ ಆದ್ದರಿಂದ ಬಸದಿ, ದೇವಸ್ಥಾನಗಳಿಗೆ ಹೋಗುವಾಗ ಸ್ವಚ್ಛತೆಯಿಂದ ನಿರ್ಮಲ ಮನಸ್ಸಿನಿಂದ ಹೋಗಬೇಕು.ಅಹಿಂಸೆಯೇ ಎಂದರೆ ಅದು ಅತ್ಯುನ್ನತ ಧರ್ಮ , ಆತ್ಮ ಸಂಯಮ, ಶ್ರೇಷ್ಠ ಕೊಡುಗೆ, ಶ್ರೇಷ್ಠವಾದ ಆಚರಣೆ, ತ್ಯಾಗ, ಶಕ್ತಿ, ಶ್ರೇಷ್ಠ ಸ್ನೇಹಿತ, ಸಂತೋಷ. ಸತ್ಯ, ಮತ್ತು ಶ್ರೇಷ್ಠ ಬೋಧನೆಯಾಗಿದೆ. ಅಹಿಂಸೆ ಪಾಲನೆ ಮಾಡುವುದೇ ಜೈನ ಧರ್ಮದ ಮುಖ್ಯ ಉದ್ದೇಶವಾಗಿದೆ ಎಂದರು. ಒಬ್ಬರ ಮನಸ್ಸನ್ನು ನೋಯಿಸಿದರೆ ದೊಡ್ಡ ಹಿಂಸೆ ಮಾಡಿದಂತೆ. ಜೈನ ಧರ್ಮ ಅದಕ್ಕೆ ಆಸ್ಪದ ನೀಡುವುದಿಲ್ಲ. ಜೈನ ಧರ್ಮದ ಅಹಿಂಸಾ ತತ್ವಗಳನ್ನು ಆಚರಣೆ ಮಾಡುವ ಮೂಲಕ ಸಮಾಜವನ್ನು ಬೆಳೆಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟು ಸನ್ಮಾರ್ಗದಲ್ಲಿ ನಡೆದಾಗ ಮನುಷ್ಯ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮಕ್ಕೂ ಮುನ್ನ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ಪುರಪ್ರವೇಶ ಮಾಡಿದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಜೈನ ಭಾಂದವರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ನಂತರ ಶ್ರೀಗಳು ಇತಿಹಾಸ ಪ್ರಸಿದ್ಧ ಪಾರ್ಶ್ವನಾಥ ಬಸದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಾರ್ಶ್ವನಾಥ ಜೈನ ಸಂಘದ ನಿರ್ಮಲಕುಮಾರ್, ಶ್ವೇತಾಂಬರ ಜೈನ ಸಂಘದ ಕನ್ನಯ್ಯಲಾಲ್, ಜಯಶಾಮದೇವಿ ಜೈನ ಮಹಿಳಾ ಸಂಘದ ಪದ್ಮಶ್ರೀ ಬ್ರಹ್ಮೇಶ್‌ಕುಮಾರ್ ಸಂಘಗಳ ಎಲ್ಲಾ ಪದಾಧಿಕಾರಿಗಳು, ಜೈನ ಭಾಂಧವರು ಇದ್ದರು.ಜೈನ ಧರ್ಮದ ಅಹಿಂಸಾ ತತ್ವಗಳನ್ನು ಆಚರಣೆ ಮಾಡುವ ಮೂಲಕ ಸಮಾಜವನ್ನು ಬೆಳೆಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟು ಸನ್ಮಾರ್ಗದಲ್ಲಿ ನಡೆದಾಗ ಮನುಷ್ಯ ಸಮಾಜದಲ್ಲಿ ಬೆಳೆಯಲು ಸಾಧ್ಯ.- ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ